ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ಗೆ ‘ಮಿನಿರತ್ನ’ ಗೌರವ

By Staff
|
Google Oneindia Kannada News

ಬೆಂಗಳೂರು : ಸಾರ್ವಜನಿಕ ವಲಯದ ಪ್ರಮುಖ ರಕ್ಷಣಾ ಉದ್ದಿಮೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ‘ಮಿನಿರತ್ನ’ ಗೌರವಕ್ಕೆ ಪಾತ್ರವಾಗಿದೆ. ಈ ಗೌರವ ಪಡೆದ ಮೊಟ್ಟ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯೂ ಬಿ.ಇ.ಎಲ್‌.ದಾಗಿದೆ.

ನಿರಂತರವಾಗಿ ಲಾಭ ಗಳಿಸುವ ಸಾರ್ವಜನಿಕ ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರವು ‘ಮಿನಿರತ್ನ’ ಗೌರವ ನೀಡಿ, ಹೆಚ್ಚಿನ ಸ್ವಾಯತ್ತತೆ ಮತ್ತು ಕಾರ್ಯನಿರ್ವಹಣೆ ಅಧಿಕಾರ ನೀಡುತ್ತದೆ. ‘ಮಿನಿರತ್ನ’ ವರ್ಗ 1ರ ಪ್ರಶಸ್ತಿ ನೀಡಲು ಉದ್ದಿಮೆಯು ಕಳೆದ ಮೂರೂ ವರ್ಷಗಳಲ್ಲಿ ಲಾಭ ಗಳಿಸಿರಬೇಕು ಮತ್ತು ಒಂದು ವರ್ಷದ ತೆರಿಗೆ ಪೂರ್ವ ಲಾಭ 30 ಕೋಟಿ ಮೀರಿರಬೇಕು.

ಈ ಸಾಧನೆ ಮಾಡಿದ ಬಿ.ಇ.ಎಲ್‌. ‘ಮಿನಿರತ್ನ’ ಗೌರವಕ್ಕೆ ಪಾತ್ರವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದರಿಂದಾಗಿ ಸಂಸ್ಥೆಗೆ ಮಾನವ ಸಂಪನ್ಮೂಲ ನಿರ್ವಹಣೆ, ಜಂಟಿ ಉದ್ಯಮ ಸ್ಥಾಪನೆ, ತಂತ್ರಜ್ಞಾನ ವರ್ಗಾವಣೆ ಒಪ್ಪಂದ ಮೊದಲಾದ ಕಾರ್ಯಯೋಜನೆ ಕೈಗೊಳ್ಳಲು ನೆರವಾಗಲಿದೆ ಎಂದೂ ಪ್ರಕಟಣೆ ತಿಳಿಸಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X