ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬಡವರ ತಿರುಪತಿ’ ವರಪುರಿಯಲ್ಲಿ ಫೆ.19ರಂದು ಬ್ರಹ್ಮರಥೋತ್ಸವ

By Staff
|
Google Oneindia Kannada News

ವರ್ತೂರು : ಜನಪ್ರತಿನಿಧಿಗಳು, ಸರಕಾರಿ ಇಲಾಖೆಗಳು ನಾಗರಿಕರ ಸಮಸ್ಯೆಗೆ ಸ್ಪಂದಿಸದಿದ್ದಾಗ ಚಳವಳಿ ನಡೆಸುವುದು ಒಂದು ಮಾರ್ಗ. ಆದರೆ, ಈ ಹೊತ್ತು ಕರ್ನಾಟಕದಲ್ಲಿ ಹೊಸ ರೀತಿಯ ಚಳವಳಿ ಶಕೆ ಆರಂಭವಾಗಿದೆ. ಮೊನ್ನೆ ಮೊನ್ನೆಯಷ್ಟೇ ಗುಡಿಬಂಡೆ ಬಳಿಯ ಹಳ್ಳಿಯ ಗ್ರಾಮಸ್ಥರು, ತಾವೇ ಹಣ ಸಂಗ್ರಹಿಸಿ, ಶ್ರಮದಾನ ಮಾಡಿ ರಸ್ತೆ ನಿರ್ಮಿಸಿದರೆ, ವರ್ತೂರಿನ ಭಕ್ತ ಜನರು, ತಮ್ಮೂರಿನ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರದಿಂದ 12 ಕಿ.ಮೀಟರ್‌ ದೂರದಲ್ಲಿರುವ ವರ್ತೂರಿನ ಕೆರೆಯ ಕಟ್ಟೆಯ ಬಳಿಯಾಂದು ಪುರಾತನ ದೇಗುಲವಿದೆ. ಶಾಸನಗಳ ರೀತ್ಯ ದೇಗುಲ ಇರುವ ಈ ಪ್ರದೇಶ ಗಂಗರಸರ ಆಳ್ವಿಕೆಗೆ ಒಳಪಟ್ಟಿತ್ತು. ಹನ್ನೆರಡನೆ ಶತಮಾನದಲ್ಲಿ ಚೋಳರೂ ಈ ಭೂ ಭಾಗ ಆಳಿದ್ದರು.

ಆದರೆ, ಇತಿಹಾಸ ಪ್ರಸಿದ್ಧವಾದ ಸ್ಥಳದಲ್ಲಿರುವ ಪುರಾತನ ವರಪುರಿ ದೇಗುಲ ಸರಕಾರ ಹಾಗೂ ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ತನ್ನ ಮೂಲ ಸೌಂದರ್ಯವನ್ನು ಕಳೆದುಕೊಂಡಿತು. ಇದರಿಂದ ನೊಂದ ಗ್ರಾಮಸ್ಥರು ಸ್ವಯಂ ಸ್ಫೂರ್ತಿಯಿಂದ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ.

ಫೆಬ್ರವರಿ 19ರ ಮಂಗಳವಾರ ಬೆಳಗ್ಗೆ 11.30ಕ್ಕೆ ಇಲ್ಲಿ ಶ್ರೀಚೆನ್ನರಾಯಸ್ವಾಮಿ ಬ್ರಹ್ಮರಥೋತ್ಸವ ಹಾಗೂ 21ರ ಗುರುವಾರ ಮಧ್ಯಾಹ್ನ ಧರ್ಮರಾಯಸ್ವಾಮಿ ಹೂವಿನ ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X