• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀ ಭಗವತಿ ಪದ್ಮಾವತಿ ಸಮೇತ ಶ್ರೀ ಕಲ್ಕಿ ಭಗವತೇ ನಮಃ

By Super
|

ಜೀವನದಲ್ಲಿ ಕಷ್ಟ ನಷ್ಟಗಳು ಸಹಜ. ಕಷ್ಟಗಳು ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತವೆಯೇ? ಆದರೆ ಇವೆಲ್ಲಾ ಸಹಜ ಅನಿಸುವುದು ಮನಸ್ಸಿನಲ್ಲಿ ತುಸು ನೆಮ್ಮದಿ ಇದ್ದಾಗ ಮಾತ್ರ. ಕಷ್ಟಗಳನ್ನೆಲ್ಲಾ ನಿವಾರಿಸಪ್ಪಾ .. ಅಂತ ಕಾಣದ ಭಗವಂತನಿಗೆ ಮೊರೆಯಿಡುವ ಮನುಷ್ಯನಿಗೆ, ಕಣ್ಣಿಗೆ ಕಾಣುವ ದೇವದೂತನೊಬ್ಬ ಬಂದು ಬಿಟ್ಟರೆ ಎಂಥ ಖುಷಿ, ನಿರಾಳ- ಅಲ್ಲವೇ?

ಮನುಷ್ಯನ ಭಾವನೆ, ನಂಬಿಕೆಗಳಿಗೆ ಇಂಬುಕೊಟ್ಟವರ ಸಾಲು ದೊಡ್ಡದಿದೆ. ಹಳ್ಳಿ , ಗ್ರಾಮಗಳಲ್ಲಿ ಸಣ್ಣ ಪುಟ್ಟ ಅವಧೂತರಿಂದ ಹಿಡಿದು ಪ್ರಸಿದ್ಧಿಯನ್ನೇ ಕಾಲ ಬಳಿ ಕಟ್ಟಿಹಾಕಿಕೊಂಡ ಸಾಯಿಬಾಬಾ ಅಂಥವರು ಭಾರತದಲ್ಲಿ ಎಲ್ಲ ಕಾಲಕ್ಕೂ ಇದ್ದವರು. ಈ ಸಾಲಿಗೆ ಇತ್ತೀಚಿನ ಸೇರ್ಪಡೆ ಕಲ್ಕಿ ಭಗವಾನ್‌.

ಕಲ್ಕಿ ಭಗವಾನ್‌ರನ್ನು ನಂಬಿ ಜೀವನ ಸಾಗಿಸುತ್ತಿರುವ ಕೋಟಿ ಭಕ್ತರು ಆತನ ಪವಾಡಗಳನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಕಾಣುತ್ತಲೇ ಇದ್ದಾರೆ. ಕಲ್ಕಿಯನ್ನು ನೆನೆಯುತ್ತಾ ಸಾಗುವ ಶಾಲೆಯ ಹುಡುಗನಿಗೆ ಖಾಲಿ ಕಾರೊಂದು ಬಂದು ಸ್ಕೂಲಿಗೆ ಡ್ರಾಪ್‌ ಕೊಟ್ಟರೆ, ಸಾಮೂಹಿಕ ಭಜನೆಯಲ್ಲಿ ಬೆಳಕೊಂದನ್ನು ಕಂಡ ಭಕ್ತನೊಬ್ಬ ಜೀವನವನ್ನೇ ಧನ್ಯನಾಗಿಸಿಕೊಳ್ಳುತ್ತಾನೆ. ಆಫೀಸಿನಲ್ಲಿ, ಕಾಲೇಜಿನಲ್ಲಿ, ಅಡುಗೆ ಮನೆಯಲ್ಲಿ... ಪವಾಡಗಳಿಗೆ ಇಂತಹುದೇ ಜಾಗ ಎನ್ನುವುದರ ಆಗತ್ಯ ಎಲ್ಲಿಯದು!

ಕಲ್ಕಿ ಭಗವಾನರು ಹಿಂದೆ ಭಕ್ತರಿಗೆ ದರ್ಶನ ನೀಡುತ್ತಿದ್ದುದುಂಟು. ಈಗ ದರ್ಶನ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಆದರೆ ಇದರಿಂದ ಭಕ್ತರ ನಂಬಿಕೆಗೇನೂ ತೊಂದರೆಯಾಗಿಲ್ಲ. ಸಾಮೂಹಿಕ ಭಜನೆಗಳು, ಭಗವಾನರ ಪವಾಡಗಳನ್ನು ಒಂದೆಡೆ ಕಲೆತು ಹಂಚಿಕೊಳ್ಳುವುದು, ಭಗವಾನರ ಹೆಸರಿನಲ್ಲಿ, ಅವರ ಪ್ರೀತ್ಯರ್ಥ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಡೆಯುತ್ತಲೇ ಇದೆ.

ವಿದ್ಯಾ ಮಿತ್ರಕ್ಕೆ ನಿಧಿ ಸಂಗ್ರಹಣೆ

ಕಲ್ಕಿ ಭಗವಾನರ ನಂಬಿದ ಭಕ್ತರೆಲ್ಲಾ ಹೆಚ್ಚಾಗಿರುವುದು ನಗರ ಪ್ರದೇಶಗಳಲ್ಲಿ. ಮಂಗಳೂರು, ಬೆಂಗಳೂರು, ಬೆಳಗಾಂ, ಹುಬ್ಬಳ್ಳಿ-ಧಾರವಾಡ... ಜಗತ್ತಿನಾದ್ಯಂತ ಸುಮಾರು 15 ಮಿಲಿಯನ್‌ ಜನರು ಕಲ್ಕಿ ಭಗವಾನ್‌ರನ್ನು ವಿಷ್ಣುವಿನ ಸಂಪೂರ್ಣ ಅವತಾರ ಎಂದು ನಂಬಿದ್ದಾರಂತೆ.

ಕಲ್ಕಿ ಬಗೆಗೆ ಈ ನೆನಪುಗಳನ್ನು ಮೆಲುಕು ಹಾಕಲಿಕ್ಕೆ ಕಾರಣ: ಕಲ್ಕಿ ಆಂದೋಳನದ ರಾಜ್ಯ ಶಾಖೆಯು ಈಗ ಹೊಸ ಯೋಜನೆಯಾಂದನ್ನು ಕೈಗೆತ್ತಿಕೊಂಡಿದೆ. ಅದು ವಿದ್ಯಾಮಿತ್ರ. ಈ ಯೋಜನೆಗಾಗಿ ನಿಧಿ ಸಂಗ್ರಹಿಸುವ ಕಾರ್ಯಕ್ರಮ ಫೆ.14ರಂದು ಬೆಂಗಳೂರಿನಲ್ಲಿ ನಡೆಯಿತು.

ಬ್ಯಾಂಡ್‌ 7 ಕಾರ್ಯಕರ್ತರು ಮಲ್ಲೇಶ್ವರಂ ಗ್ರೌಂಡ್‌ನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದ ಆಕರ್ಷಣೆ- ಕಾರ್ಯಕ್ರಮದ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದ ಕಲ್ಕಿ ಭಗವಾನ್‌ ಅವರ ಸೊಸೆ ಪ್ರೀತಾಜಿ. ಅಂದ ಹಾಗೆ ವಿದ್ಯಾ ಮಿತ್ರ ಯೋಜನೆ ರಾಜ್ಯದ ಒಂದು ಲಕ್ಷ ಮಕ್ಕಳಿಗೆ ಶಿಕ್ಷಣ ಒದಗಿಸುವ ಗುರಿ ಹೊಂದಿದೆ.

ಅಜ್ಞಾನವನ್ನು ಕೊಲ್ಲುವುದಕ್ಕಾಗಿ ವಿಷ್ಣುವಿನ ಹತ್ತನೇ ಅವತಾರ

ಈ ಕಲ್ಕಿ ಸುವರ್ಣ ಯುಗವು 1995ರ ಸೆಪ್ಟೆಂಬರ್‌ 25ರಂದು ಆರಂಭವಾಯಿತು. 2012ನೇ ಇಸವಿಯಲ್ಲಿ ಜಗತ್ತಿಗೆ ಈ ಅವತಾರದ ಸಂಪೂರ್ಣ ಮಹಿಮೆಯ ಪರಿಚಯವಾಗಲಿದೆ. ವಿಷ್ಣು ಎತ್ತ ಬೇಕಿದ್ದ ಹತ್ತು ಅವಾತಾರಗಳಲ್ಲಿ ಕಲ್ಕಿ ಅವತಾರವೂ ಒಂದು. ಬುದ್ಧ ಅವತಾರದ ನಂತರದ ಕಲ್ಕಿ ಅವತಾರವೇ ಈ ಕಲ್ಕಿ ಭಗವಾನ್‌ ಎಂಬುದು ಕಲ್ಕಿ ಭಕ್ತರ ನಂಬಿಕೆ.

ಕಲ್ಕಿ ಭಗವಾನರು ತಮ್ಮ 40ನೇ ವಯಸ್ಸಿನಲ್ಲಿ ಪದ್ಮಾವತಿಯನ್ನು ಮದುವೆಯಾದರು. ಕಲ್ಕಿ ಹುಟ್ಟಿದ್ದು 1950 ಅಥವಾ 51ರಲ್ಲಿ , ವಿಜಯ ಕುಮಾರ್‌ ರೂಪದಲ್ಲಿ. ನಿಖರ ಇಸವಿ ಗೊತ್ತಾಗಿಲ್ಲ. ಮದರಾಸಿನಲ್ಲಿ ಶಾಲೆ ಕಲಿಕೆ. 1987ರವರೆಗೆ ಉದ್ಯೋಗ, ಆಧ್ಯಾತ್ಮದ ಸಾಧನೆ.

ಅಷ್ಟರಲ್ಲಿ ಜರ್ಮನಿಯಲ್ಲಿ ನ್ಯೂಕ್ಲಿಯರ್‌ ಇಂಜಿನಿಯರಿಂಗ್‌ ಓದು ಮುಗಿಸಿದ ಪರಮಾಚಾರ್ಯ ಶಂಕರ ಭಗವತ್ಪಾದರು ವಿಯಜ ಕುಮಾರರ ಶಿಷ್ಯರಾದರು. ವಿಜಯಕುಮಾರರಲ್ಲಿ ಕಲ್ಕಿ ಭಗವಾನರನ್ನು ಕಂಡ ಮೊದಲ ವ್ಯಕ್ತಿ ಶಂಕರ ಭಗವತ್ಪಾದರು. 1991ರಲ್ಲಿ ಮದರಾಸಿನಲ್ಲಿ ಭಗವಾನರ ವಿಚಾರ ಪಸರಿಸುವ ಜಾಗತಿಕ ಜಾಗೃತಿ ಪ್ರತಿಷ್ಠಾನದ ಸ್ಥಾಪನೆಯಾಯಿತು.

ಕಲ್ಕಿ ಭಗವಾನರಿರುವುದು ಸತ್ಯಲೋಕದಲ್ಲಿ, ಬೆಂಗಳೂರ ಬಳಿ!

ಜನರ ಅಜ್ಞಾನವನ್ನು ಕರಗಿಸುವ ಕಲ್ಕಿ ಭಗವಾನರ ಮೂಲ ಮಂತ್ರ 'ಓಂ ಸತ್‌ ಚಿತ್‌ ಆನಂದ ಪರಬ್ರಹ್ಮ ಪುರುಷೋತ್ತಮ ಪರಮಾತ್ಮ, ಶ್ರೀ ಭಗವತಿ ಪದ್ಮಾವತಿ ಸಮೇತ ಶ್ರೀ ಕಲ್ಕಿ ಭಗವತೇ ನಮಃ".

ಸತ್ಯ ಲೋಕ ಎಂಬುದು ಏಳನೇ ಸ್ವರ್ಗ. ಅಲ್ಲೇ ಅಂದರೆ ಬೆಂಗಳೂರಿನಿಂದ 75 ಕಿ.ಮೀ. ದೂರದಲ್ಲಿ, ಕಲ್ಕಿ ಭಗವಾನರ ವಾಸ. ಅಜ್ಞಾನದಿಂದ ಭಕ್ತರನ್ನು ಜ್ಞಾನದೆಡೆಗೆ ಒಯ್ಯಲು, ಜನರನ್ನು ಆಂತರಿಕ ಪಯಣದತ್ತ ಕಳುಹಿಸುವ ಜವಾಬ್ದಾರಿಯನ್ನು ಸದ್ಯಕ್ಕೆ ಕಲ್ಕಿ ಭಗವಾನ್‌ ಹೊತ್ತುಕೊಂಡಿದ್ದಾರೆ.

ಕಲ್ಕಿಯನ್ನು ನೀವು ನಂಬುತ್ತೀರೊ ಇಲ್ಲವೋ- ವಿದ್ಯಾಮಿತ್ರ ಯೋಜನೆಯನ್ನಂತೂ ಮೆಚ್ಚಲೇಬೇಕು. ಕಲ್ಪಿ ಭಗವಾನ್‌ ಸಾಕ್ಷರ ಸಮಾಜದ ಕನಸು ಕಾಣುವುದು ಶುಭ ಸೂಚನೆಯಲ್ಲವೇ? ಎಲ್ಲ ಭಗವಂತರೂ ಕಲ್ಕಿಯನ್ನು ಅನುಸರಿಸಬಾರದೇ!?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Satyaloka : Kalki Bhagavan to show path towards enlightenment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more