• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಸೇವಕ ಪುರಂನಲ್ಲಿ ರಾಮಮಂದಿರ ಸ್ತಂಭಗಳ ಪವಿತ್ರೀಕರಣ-ಪೂಜೆ

By Staff
|

ಅಯೋಧ್ಯೆ : ರಾಮಮಂದಿರ ಸ್ತಂಭಗಳ ಶಿಲಾಪೂಜೆ ಕಾರ್ಯ ವಸಂತ ಪಂಚಮಿಯ ದಿನವಾದ ಭಾನುವಾರ ನಡೆದಿದ್ದು, ಮಂದಿರ ನಿರ್ಮಾಣ ಕಾರ್ಯವನ್ನು ಮುಂದುವರೆಸುವುದಾಗಿ ವಿಹೆಚ್‌ಪಿ ಹೇಳಿದೆ.

ಕರಸೇವಕ ಪುರಂನಲ್ಲಿ ಶ್ರೀರಾಮ ನಾಮ ಶತಯಾಗದ ಆರಂಭ ದಿನವಾದ ಭಾನುವಾರ ರಾಮಘಾಟ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಅಶೋಕ್‌ ಸಿಂಘಾಲ್‌ ಮತ್ತು ರಾಮ ಜನ್ಮ ಭೂಮಿ ಟ್ರಸ್ಟ್‌ನ ಮಹಂತ್‌ ರಾಮಚಂದ್ರ ಪರಮ ಹಂಸ ಭಾಗವಹಿಸಿದ್ದರು. ರಾಮ್‌ಘಾಟ್‌ನಿಂದ ರಾಮ ಮಂದಿರ ಸ್ತಂಭಗಳು ಶ್ರೀ ರಾಮ ನಾಮ ಶತಯಾಗ ನಡೆಯುತ್ತಿರುವ ಕರಸೇವಕಪುರಂಗೆ ಸದ್ಯದಲ್ಲೇ ತಲುಪಲಿದೆ.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಮಂದಿ ಭಕ್ತರು ಹಾಗೂ ವಿಹೆಚ್‌ಪಿ ನಾಯಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪರಮಹಂಸರು, ರಾಮಮಂದಿರದ ಮುಖ್ಯ ಸ್ತಂಭಗಳನ್ನು ಕರಕಸೇವಕ ಪುರಂನ ಯಾಗ ಸ್ಥಾನದಲ್ಲಿ ಇಡಲಾಗುವುದು. ನಂತರ ಈ ಕಂಬಗಳನ್ನು ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗುವುದು ಎಂದರು. ಫೆಬ್ರವರಿ 24ರ ನಂತರ ಯಾಗ ಸ್ಥಾನಕ್ಕೆ ರಾಮಭಕ್ತರು ಆಗಮಿಸಲಿದ್ದಾರೆ.

ಪ್ರಧಾನಿಯ ಸಂಧಾನ ಹೇಳಿಕೆಗೆ ವಿಹೆಚ್‌ಪಿ ಖಂಡನೆ
ಅಯೋಧ್ಯಾ ಪ್ರಕರಣದಲ್ಲಿ ತಮ್ಮ ಸಂಧಾನ ಯತ್ನಗಳು ಎರಡೂ ಕೋಮುಗಳ ಪಟ್ಟು ಬಿಡದ ಬಿಗಿ ನಿಲುವಿನಿಂದಾಗಿ ವಿಫಲವಾಯಿತು ಎಂಬ ಪ್ರಧಾನಿ ವಾಜಪೇಯಿ ಹೇಳಿಕೆಯನ್ನು ವಿಹೆಚ್‌ಪಿ ಖಂಡಿಸಿದ್ದು, ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿದೆ.

ಆಯೋಧ್ಯಾ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ನನ್ನೊಂದಿಗೆ ಯಾವುದೇ ಮಾತುಕತೆ ನಡೆಸಲು ಪ್ರಧಾನಿ ಇದುವರೆಗೆ ಇಚ್ಛಿಸಿಲ್ಲ . ಈಗಾಗಲೇ ಪೂಜೆ ಸಲ್ಲಿಸಲಾಗಿರುವ ರಾಮ ಮಂದಿರ ಸ್ತಂಭಗಳನ್ನು ಸಾಗಿಸುವ ಕಾರ್ಯವನ್ನು ಮುಂದುವರೆಸುವುದಾಗಿ ರಾಮಜನ್ಮಭೂಮಿ ಟ್ರಸ್ಟ್‌ನ ಅಧ್ಯಕ್ಷ ಪರಮಹಂಸರು ಹೇಳಿದ್ದಾರೆ. ರಾಮಮಂದಿರ ನಿರ್ಮಾಣ ವಿಷಯ ಧರ್ಮಕ್ಕೆ ಸಂಬಂಧಿಸಿರುವ ವಿಷಯವಾದ್ದರಿಂದ ಇದನ್ನು ಕೋರ್ಟ್‌ ನಿರ್ಣಯಿಸುವುದು ಸಾಧ್ಯವಿಲ್ಲ ಎಂದು ಪರಮಹಂಸರು ಅಭಿಪ್ರಾಯಪಟ್ಟರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more