• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸದ್ದುಗದ್ದಲವಿಲ್ಲದ ‘ಸಂದೇಶ’ ಅನುಕರಣೀಯ: ಮಂಗಳೂರಲ್ಲಿ ಮುಖ್ಯಮಂತ್ರಿ

By Staff
|

*ಸದಾಶಿವ ಕೆ.

ಮಂಗಳೂರು: ಕಲೆ ಮತ್ತು ಸಾಹಿತ್ಯ ಪ್ರಕಾರಗಳಲ್ಲಿ ಹೆಚ್ಚು ಶ್ರದ್ಧೆಯಿಂದ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ಆಗಬೇಕು. ಇದರಿಂದಾಗಿ ಜನ ಸಾಮಾನ್ಯರಲ್ಲಿ ಮತ್ತು ಸಂಘ ಸಂಸ್ಥೆಗಳಲ್ಲಿ ಭಾಷೆ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಕಾಳಜಿ ಹೆಚ್ಚುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನ ಬಜ್ಜೋಡಿಯಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ಸಂದೇಶ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು .

ನಾವು ಜಗತ್ತನ್ನು ಗೆಲ್ಲುವ ಕೆಲಸ ಮಾಡಬೇಕು. ಆದರೆ ಅದು ಅಮೆರಿಕಾ, ಅಫ್ಘಾನಿಸ್ತಾನವನ್ನು ಗೆದ್ದ ಹಾಗೆ ವಿನಾಶದಿಂದ ಗೆಲ್ಲಬಾರದು. ಅಂತಹ ವಿನಾಶಕಾರಿ ಗೆಲವು ಗೆಲುವೇ ಅಲ್ಲ. ಸಂದೇಶ ಪ್ರತಿಷ್ಠಾನದ ಕೆಲಸ ಇತರರಿಗೆ ಒಂದು ಮಾದರಿಯಾಗಿ ಪರಿಣಮಿಸಿದೆ. ಇಂತಹ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಸಂದೇಶ ಪ್ರತಿಷ್ಠಾನ ಎಲ್ಲರಿಗೂ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಶ್ಲಾಘಿಸಿದರು.

ನಮ್ಮ ರಾಜ್ಯದಲ್ಲಿ ಅನೇಕ ಪ್ರದೇಶಗಳಿವೆ. ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಅಲ್ಲಲ್ಲಿ ಗುರುತಿಸುವ ಕೆಲಸ ಆಗಬೇಕು ಎಂದು ಸಲಹೆ ಇತ್ತರು. ಇಂತಹ ಪ್ರತಿಷ್ಠಾನವು ಇಂದು ಬೆಂಗಳೂರು ಮುಂತಾದ ಮೆಗಾಸಿಟಿಗಳನ್ನೇ ಕೇಂದ್ರೀಕೃತವಾಗಿರದೇ ಎಲ್ಲ ಕಡೆ ಇರಬೇಕು. ಸದ್ದು ಗದ್ದಲವಿದ್ದಲ್ಲದೆ ಕೆಲಸ ಮಾಡುವ ಸಂದೇಶ ಪ್ರತಿಷ್ಠಾನ ಎಲ್ಲರಿಗೂ ಅನುಕರಣೀಯ ಎಂದು ಕೃಷ್ಣ , ಪ್ರತಿಷ್ಠಾನವನ್ನು ಶ್ಲಾಘಿಸಿದರು.

ರಾಜ್ಯದ ಶಿಕ್ಷಣ ಮತ್ತು ಭಾಷೆ, ಆರೋಗ್ಯ ಕ್ಷೇತ್ರದಲ್ಲಿ ಹಳೆಯ ಯಾವುದೇ ಸಂಸ್ಥೆ ಇದ್ದರೂ ಅದರ ಬೆಳವಣಿಗೆಯಲ್ಲಿ ಕ್ರೆೃಸ್ತ ಸಂಸ್ಥೆಗಳ ಪಾತ್ರ ಗಣನೀಯವಾಗಿದೆ ಎಂದ ಮುಖ್ಯಮಂತ್ರಿ ಕೃಷ್ಣ, ಮತೀಯ ಭಾವ ಮತ್ತು ಪ್ರಾದೇಶಿಕತೆ ಎಂಬ ಅಸಹನೆ, ಅಸಮಾಧಾನಗಳು ಕಾಡುತ್ತಿರುವ ಈ ದಿನಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವುದರಿಂದ ನಮ್ಮ ಜವಾಬ್ದಾರಿ ಮಾತ್ರವಲ್ಲದೆ ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರ ಜವಾಬ್ದಾರಿಯನ್ನು ಕೂಡ ಹೆಚ್ಚು ಮಾಡಿದಂತಾಗುತ್ತದೆ ಎಂದರು.

ರಾಜ್ಯದ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷ , ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಬಂದರು ಮತ್ತು ಮೀನುಗಾರಿಕೆ ಸಚಿವ ಬಿ. ರಮಾನಾಥ ರೈ ಸಂದೇಶ ಪ್ರತಿಷ್ಠಾನದ ವೆಬ್‌ಸೈಟನ್ನು ಅನಾವರಣಗೊಳಿಸಿದರು. ಮಂಗಳೂರು ಶಾಸಕ ಎನ್‌. ಯೋಗೀಶ್‌ ಭಟ್‌, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್‌ನ ಪ್ರಾಂತೀಯ ಅಧಿಕಾರಿ ಜೆ. ಡಬ್ಲ್ಯೂ.ಲೋಬೋ, ದ.ಕ. ಜಿಲ್ಲಾಧಿಕಾರಿ ಎ.ಕೆ. ಮೋನಪ್ಪ ಮತ್ತು ಜನಮಾಧ್ಯಮ ಪ್ರಕಾಶನದ ಅಧ್ಯಕ್ಷ ರೊನಾಲ್ಡ್‌ ಕೊಲಾಸೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ। ಡಾ. ಎಲೋಶಿಯಸ್‌ ಪಾವ್ಸ್‌ ಡಿಸೋಜ ವಹಿಸಿದ್ದರು. ಪ್ರಶಸ್ತಿ ವಿಜೇತರ ಪರವಾಗಿ ಚಲನ ಚಿತ್ರ ನಿರ್ದೇಶಕ ಎಸ್‌. ವಿ. ರಾಜೇಂದ್ರ ಸಿಂಗ್‌ ಬಾಬು ಮಾತನಾಡಿದರು.

ಸಂದೇಶ ಪ್ರಶಸ್ತಿ ವಿಜೇತರು: ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ - ಡಾ. ಎಚ್‌. ಎಲ್‌. ನಾಗೇಗೌಡ, ಬೆಂಗಳೂರು.
ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ - ಜೆ. ಸಿ. ವೇಗಸ್‌, ಮೈಸೂರು
ಸಂದೇಶ ತುಳು ಸಾಹಿತ್ಯ ಪ್ರಶಸ್ತಿ - ಡಾ. ಯು.ಪಿ. ಉಪಾಧ್ಯಾಯ, ಉಡುಪಿ
ಸಂದೇಶ ಕಲಾ ಪ್ರಶಸ್ತಿ - ಲಿಂಗರಾಜ ಗವಾಯಿ ಹಿರೇಮಠ
ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ - ಎ. ಈಶ್ವರಯ್ಯ, ಮಣಿಪಾಲ
ಸಂದೇಶ ಚಲನಚಿತ್ರ ಪ್ರಶಸ್ತಿ - ಎಸ್‌. ವಿ. ರಾಜೇಂದ್ರ ಸಿಂಗ್‌ ಬಾಬು, ಬೆಂಗಳೂರು
ಸಂದೇಶ ವಿಶೇಷ ಪ್ರಶಸ್ತಿ - ಡಾ. ಒಲಿಂಡಾ ಪಿರೇರಾ, ಮಾಜಿ ಪ್ರಾಂಶುಪಾಲೆ
ಸಮಾಜ ಸೇವೆ - ಬಿ.ಎ. ಸನದಿ, ಮುಂಬೈ
ಸಾಹಿತ್ಯ, ಮಾಧ್ಯಮ ಮತ್ತು ಸಂಸ್ಕೃತಿ- ಎಚ್‌. ಎಸ್‌. ಗೌರಮ್ಮ ಸಾಗರ
ಜನಪದ ಚಿತ್ರ ಕಲೆ- ಕರುಣಾ ಹೃದಯ ಬೆಂಗಳೂರು ,
ಸಮಾರಂಭದಲ್ಲಿ ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ಡೆನಿಸ್‌ ಡೆಸಾ ಸ್ವಾಗತಿಸಿದರು. ಸಂದೇಶ ಪ್ರಶಸ್ತಿ ಆಯ್ಕೆ ಮಂಡಳಿ ಅಧ್ಯಕ್ಷ ಮತ್ತು ಮಂಗಳೂರು ಪ್ರಭಾರ ಕುಲಸಚಿವ ಡಾ. ಬಿ.ಎ. ವಿವೇಕ ರೈ ಪ್ರಾಸ್ತಾವಿಕ ಭಾಷಣ ಮಾಡಿದರು.

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more