• search

‘ತುಮುಲಭರಿತ ಜಗತ್ತಿಗೆ ಸಂಜೀವನ, ಈ ಜಿನ ತತ್ವ ತಂಪಿನ ಸಿಂಚನ’

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಕಾರ್ಕಳ : ‘ಮಿತ್ರ- ಶತ್ರು, ಸುಖ- ದುಃಖ , ಸ್ತುತಿ- ನಿಂದೆ, ಚಿನ್ನ- ಮಣ್ಣು ಮತ್ತು ಹುಟ್ಟು- ಸಾವು ಎಲ್ಲವನ್ನೂ ಒಂದೇ ರೀತಿಯಾಗಿ ಕಾಣುವವ ಶ್ರವಣ ಎಂಬ ಜೈನ ತತ್ವದ ಒಂದು ಉಕ್ತಿ ಸಾಕು, ಇಂದಿನ ತುಮುಲಭರಿತ ದಿನಗಳಲ್ಲಿ ತಂಪಿನ ಸಿಂಚನ ಎರೆಯುವುದಕ್ಕೆ’.

    ಕಾರ್ಕಳದ ಗೊಮ್ಮಟನಿಗೆ ಸಹಸ್ರಮಾನದ ಮೊದಲ ಮಹಾಮಜ್ಜನ ಸಮಾರಂಭವನ್ನು ಶನಿವಾರ ದೀಪ ಬೆಳಗಿ ಉದ್ಘಾಟಿಸಿದ ನಂತರ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಆಡಿದ ಮಾತಿದು. ಕರ್ನಾಟಕ ಪರಂಪರೆಯ ಅವಿಭಾಜ್ಯ ಅಂಗವಾದ ಜಿನಧರ್ಮದ ಮಹ್ವತ್ವವನ್ನು ಹಾಗೂ ಅವುಗಳ ಪ್ರಸ್ತುತತೆಯನ್ನು ಮುಖ್ಯಮಂತ್ರಿಗಳು ದೀರ್ಘ ಕಾಲದ ತಮ್ಮ ಮಾತುಗಳಲ್ಲಿ ಕಡೆದಿಟ್ಟರು.

    ಜಿನರಾಗುವುದು ಎಲ್ಲರಿಗೂ ಸಾಧ್ಯ ಎಂದು ಹೇಳಿದ ಜೈನ ಧರ್ಮ ಸಾರ್ವತ್ರಿಕವಾಗಿ ಎಲ್ಲರನ್ನೂ ಒಳಗೊಳ್ಳುವ ವಿಶಾಲ ಧೋರಣೆಯನ್ನು ಹೊಂದಿರುವುದಷ್ಟೆ ಅಲ್ಲದೆ ಧಾರ್ಮಿಕ ಜೀವಂತಿಕೆಗೆ ಪ್ರಬುದ್ಧ ಉದಾಹರಣೆ. ಹಸಿವು, ಅನಾರೋಗ್ಯ, ಹಿಂಸೆ ಬಡತನ, ಯುದ್ಧ ಭೀತಿ ಇವುಗಳ ನಿವಾರಣೆಗೆ ಇಲ್ಲಿನ ಮಹಾಮಸ್ತಕಾಭಿಷೇಕ ಅನುವಾಗಲಿ ಎಂದು ಹಾರೈಸಿದರು.

    15ನೇ ಶತಮಾನದಲ್ಲಿ ಸ್ಥಾಪಿತವಾದ ಕಾರ್ಕಳದ ಬಾಹುಬಲಿ ಮೂರ್ತಿ ಕರ್ನಾಟಕದ ಸಾಂಸ್ಕೃತಿಕ ಸಂಪತ್ತಷ್ಟೇ ಅಲ್ಲದೆ ಜೈನಧರ್ಮದ ಜನಪ್ರಿಯತೆಯ ಸಂಕೇತ. ಧರ್ಮವೊಂದು ಜನಪ್ರಿಯವಾಗಬೇಕಾದರೆ, ಉಳಿಯಬೇಕಾದರೆ ಅದು ಸಾಮಾನ್ಯರಿಗೆ ಹತ್ತಿರವಾಗಿ, ಜಗತ್ತಿನ ಕಲ್ಯಾಣದ ಆಶಯ ಹೊಂದಿದ್ದರೆ ಮಾತ್ರ ಸಾಧ್ಯ ಎಂದರು.

    ಇದಕ್ಕೂ ಮುನ್ನ ಬಾಹುಬಲಿಗೆ ಪುಷ್ಪಾರ್ಚಿಸಿದ ಮುಖ್ಯಮಂತ್ರಿ, ನಂತರ ಮಹಾಮಸ್ತಕಾಭಿಷೇಕದ ಪ್ರಯುಕ್ತ ಆನೆಕೆರೆ- ದಾನಶಾಲಾ ನಡುವಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ವಸ್ತುಪ್ರದರ್ಶನವನ್ನೂ ಉದ್ಘಾಟಿಸಿದರು.

    ಕೇಂದ್ರ ಜವಳಿ ಖಾತೆ ಸಚಿವ ವಿ.ಧನಂಜಯಕುಮಾರ್‌ ಧಾರ್ಮಿಕ ಸಬೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮಸ್ತಕಾಭಿಷೇಕ ಸ್ಮರಣಾರ್ಥ ಹೊರ ತರಲಾಗಿರುವ ಅಂಚೆ ಲಕೋಟೆಯನ್ನು ರಾಜ್ಯ ಇಂಧನ ಖಾತೆ ಸಚಿವ ವೀರ ಕುಮಾರ್‌ ಪಾಟೀಲ್‌ ಬಿಡುಗಡೆಗೊಳಿಸಿದರು.

    (ಇನ್ಫೋ ವಾರ್ತೆ)

    ಮುಖಪುಟ / ಕೃಷ್ಣಗಾರುಡಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more