ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘1956 ರಿಂದೀಚೆಗೆ 1.5 ಕೋಟಿ ಮಂದಿ ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ’

By Staff
|
Google Oneindia Kannada News

ಬೆಂಗಳೂರು : ವಾಟಾಳ್‌ ನಾಗರಾಜರ ಕನ್ನಡ ಚಳವಳಿಯ ತಮಟೆ ಮತ್ತೊಮ್ಮೆ ಬೆಂಗಳೂರಿನಲ್ಲಿ ಮೊಳಗಿತು. ಕನ್ನಡ ಭಾಷೆಗೆ ಆಗಿರುವ ಹಾಗೂ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ವರ್ಷವಿಡೀ ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ನಡೆಯಲಿರುವ ‘ಕನ್ನಡ ಉಳಿಸಿ’ ಚಳವಳಿಯನ್ನು ವಾಟಾಳ್‌ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಬೆಂಗಳೂರೂ ಸೇರಿದಂತೆ ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಕನ್ನಡದ ಬೆಳವಣಿಗೆ ಕುಂಠಿತಗೊಂಡಿದೆ. 1956ರ ಏಕೀಕರಣದ ಬಳಿಕ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಒಂದೂವರೆ ಕೋಟಿಗೂ ಹೆಚ್ಚು ಮಂದಿ ವಲಸೆ ಬಂದಿದ್ದಾರೆ. ಕರ್ನಾಟಕ ಸರಕಾರ ವಲಸಿಗರನ್ನು ತಡೆಯದಿದ್ದರೆ, ಕೆಲವೇ ದಿನದಲ್ಲಿ ನಾವೇ ನಮ್ಮ ನಾಡಿನಲ್ಲಿ ಪರಕೀಯರಾಗುತ್ತೇವೆ ಎಂದು ವಾಟಾಳ್‌ ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಸರಕಾರಿ ಆಡಳಿತದಲ್ಲಿ ಕನ್ನಡ ಸಂಪೂರ್ಣವಾಗಿ ಜಾರಿಯಾಗಿಲ್ಲ. ಅಧಿಕಾರಿಗಳಿಗೆ ಕನ್ನಡವೇ ಬೇಕಿಲ್ಲ. ರಾಜ್ಯದ ಅದರಲ್ಲೂ ಬೆಂಗಳೂರಿನಲ್ಲಿರುವ ಸರಕಾರಿ ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಮತ್ತು ಖಾಸಗಿ ಕಂಪನಿಗಳಲ್ಲಿ ಹೊರ ರಾಜ್ಯದ ಜನರೇ ತುಂಬಿದ್ದಾರೆ.

ಸರೋಜಿನಿ ಮಹಿಷಿ ವರದಿ ಜಾರಿಯಾಗಿಲ್ಲ. ಅದು ಜಾರಿಯಾಗಬೇಕು. ಕನ್ನಡಿಗರೆಲ್ಲರಿಗೂ ಉದ್ಯೋಗ ದೊರಕಬೇಕು ಎಂದು ವಾಟಾಳ್‌ ಆಗ್ರಹಿಸಿದರು. ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಗಡಿನಾಡ ಕನ್ನಡಿಗರ ಸಮಸ್ಯೆಯನ್ನು ಬಗೆಹರಿಸಲು ತಾಳವಾಡಿ ಕನ್ನಡಿಗರ ಸಮ್ಮೇಳನವನ್ನು ಚಾಮರಾಜನಾಗರದಲ್ಲಿ ಸೋಮವಾರ (ಫೆ.18) ಹಮ್ಮಿಕೊಂಡಿರುವುದಾಗಿ ವಾಟಾಳ್‌ ತಿಳಿಸಿದರು. ಇದಕ್ಕೂ ಮುನ್ನ ತಮಟೆಗಳ ಶಬ್ದದೊಂದಿಗೆ ಕನ್ನಡ ಉಳಿಸಿ ಚಳವಳಿಯನ್ನು ಅವರು ಉದ್ಘಾಟಿಸಿದರು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X