ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ಹೃದಯ ಮಿಡಿತಕ್ಕೆ ಕಿವಿಯಾದ ಜೈನ್‌ ಹೃದ್ರೋಗ ಆಸ್ಪತ್ರೆ

By Staff
|
Google Oneindia Kannada News

ಈ ಹೃದಯ ನಿನಗಾಗಿ
ನನ್ನ ಹೃದಯ ನಿನ್ನಲ್ಲಿದೆ, ನಿನ್ನ ಹೃದಯ ನನ್ನಲ್ಲಿದೆ..

ಆಕಾಶವೆ ಬೀಳಲಿ ಮೇಲೆ ನಮ್ಮ ಪ್ರೀತಿ ಶಾಶ್ವತ ಎಂದು ಹಾಡುವ ಪ್ರೇಮಿಗಳ ಬಳಗದಲ್ಲಿ ಇಂಥ ಮಾತುಗಳು ಯುಗ ಯುಗಗಳಿಂದಲೂ ಕೇಳಬರುತ್ತಿವೆ. ಪ್ರೇಮಿಗಳ ದಿನದ (ಫೆ.14) ಸಂದರ್ಭದಲ್ಲಂತೂ ಹೃದಯಕ್ಕೆ ಸಂಬಂಧಿಸಿದ ಮಾತುಗಳು ಹೊಳೆಯಾಗುತ್ತವೆ. ನಿಜವಾದ ಹೃದಯ ದುಬಾರಿಯಾಗಿರುವುದರಿಂದ ಹಾಗೂ ಅದು ಒಂದೇ ಇರುವುದರಿಂದ ಕಾಗದದ ಹೃದಯಗಳು ಬಿಕರಿಯಾಗುತ್ತಿವೆ. ಅವುಗಳನ್ನು ಪಡೆದುಕೊಂಡೇ ಪ್ರೇಮಿಗಳು ಖುಷಿಯಾಗುತ್ತಿದ್ದಾರೆ.

ಆದರೆ, ಹೃದಯ ಎಂದರೇನು ಹಾಗೂ ನಿಮ್ಮ ಹೃದಯದ ಆರೋಗ್ಯ ಹೇಗಿದೆ ಎನ್ನುವ ಮಾಹಿತಿಯನ್ನು ಯುವ ಪ್ರೇಮಿಗಳಿಗೆ ನೀಡುವ ಸಾಹಸಕ್ಕೆ ಬೆಂಗಳೂರಿನ ಭಗವಾನ್‌ ಮಹಾವೀರ ಜೈನ್‌ ಹೃದ್ರೋಗ ಆಸ್ಪತ್ರೆ ಸಜ್ಜಾಗಿದೆ. 20 ರಿಂದ 35 ವರ್ಷ ವಯೋಮಾನದ ಯುವಕ- ಯುವತಿಯರ ಹೃದಯ ಪರೀಕ್ಷೆಯನ್ನು ಪ್ರೇಮಿಗಳ ದಿನದಂದು ಆಸ್ಪತ್ರೆಯ ವೈದ್ಯರು ನಡೆಸುತ್ತಿದ್ದಾರೆ.

ಆರೋಗ್ಯವಂತ ಹೃದಯದ ಬಗೆಗೆ ಮಾಹಿತಿ ಹೊಂದಿರುವ ಕಿರು ಹೊತ್ತಿಗೆಯೂ ಆಸ್ಪತ್ರೆಯ ವತಿಯಿಂದ ಪ್ರೇಮಿಗಳಿಗೆ ಲಭ್ಯ. ಪ್ರೇಮಿಗಳ ಹೃದಯದ ಬಡಿತ ಆಲಿಸಲೆಂದೇ 6 ಮಂದಿ ಹೃದಯ ತಜ್ಞರು ಸನ್ನದ್ಧ . ಪ್ರೇಮಿಸುವ ಮುನ್ನ ಪ್ರೇಮಿಗಳು ತಮ್ಮ ಹೃದಯದ ಬಗ್ಗೆ ತಿಳಿವಳಿಕೆ ಹೊಂದಬೇಕು. ಆನಂತರವಷ್ಟೇ ಬೇರೆಯವರ ಹೃದಯ ಅರಿಯಲು ಸಾಧ್ಯ ಎನ್ನುತ್ತಾರೆ ಆಸ್ಪತ್ರೆಯ ಮುಖ್ಯ ಹೃದ್ರೋಗ ತಜ್ಞ ಡಾ.ಎಸ್‌.ಆರ್‌.ರಮೇಶ್‌.

ಅಂದಹಾಗೆ, ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ- ಯುವಕರಲ್ಲಿ ಹೃದ್ರೋಗ ಪ್ರತಿಶತ 25 ರಷ್ಟು ಹೆಚ್ಚಿದೆ. ಮಹಿಳೆಯರಲ್ಲಿ ಈ ಪ್ರಮಾಣ ಶೇ.90 ರಷ್ಟು .

ಇನ್ನೇಕೆ ತಡ- ಈಗಲೇ ಹೊರಡಿ: ಹೃದಯ ಪರೀಕ್ಷಿಸಿಕೊಳ್ಳಿ. ಪರೀಕ್ಷಿಸುವುದೆಂದರೆ ನಮ್ಮನ್ನು ನಾವು ಅರಿತುಕೊಳ್ಳುವುದು. ಅರಿವೇ ಪ್ರೇಮ, ಏನಂತೀರಿ?

(ಇನ್ಫೋ ಇನ್‌ಸೈಟ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X