• search

ಬನ್ನಿ ರಾಜಕಾರಣಕೆ.. ಹೊಸ ಪ್ರತಿಭೆಗಳಿಗೆ ಅನಂತಮೂರ್ತಿ ಸ್ವಾಗತ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು: ಜಾತ್ಯತೀತತೆ, ಬುದ್ಧಿ ಹಾಗೂ ಯೋಚನಾಶಕ್ತಿಯುಳ್ಳ ಹೊಸ ಪ್ರತಿಭೆಗಳು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಹಾಗೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಯು.ಆರ್‌.ಅನಂತಮೂರ್ತಿ ಹೇಳಿದ್ದಾರೆ.

    ಗುರುನಾನಕ್‌ ಭವನದಲ್ಲಿ ಮಂಗಳವಾರ ನಡೆದ ಜೀವರಾಜ್‌ ಆಳ್ವ ಒಂದು ನೆನಪು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅನಂತಮೂರ್ತಿ ಮಾತನಾಡುತ್ತಿದ್ದರು. ಬುದ್ಧಿ ಮತ್ತು ಯೋಚನಾಶಕ್ತಿಯುಳ್ಳ ಪ್ರತಿಭೆಗಳನ್ನು ರಾಜಕಾರಣಕ್ಕೆ ಪರಿಚಯಿಸಿದ ಕೀರ್ತಿ ಜೀವರಾಜ ಆಳ್ವಾ ಅವರಿಗೆ ಸಲ್ಲುತ್ತದೆ. ಈಗ ಅಂತಹ ಮುಖಗಳು ವ್ಯಾಪಾರದತ್ತ ಹೊರಳುತ್ತಿವೆ. ಇದು ಪ್ರಜಾಪ್ರಭುತ್ವಕ್ಕಾದ ನಷ್ಟ ಎಂದು ಅವರು ವಿಷಾದಿಸಿದರು.

    ಗಾಂಧೀಜಿ ಹಾಗೂ ಲೋಹಿಯಾ ರಾಜಕಾರಣಕ್ಕೆ ಹೊಸ ಮುಖಗಳನ್ನು ತಂದರು. ಇಂದಿರಾಗಾಂಧಿ ಕೂಡ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದರು. ಆದರೆ, ಇಂಥ ಪ್ರಯತ್ನಕ್ಕೆ ಬೆನ್ನು ಹಾಕಿದ ಕಾರಣದಿಂದ ಕಮ್ಯೂನಿಸ್ಟ್‌ ಪಕ್ಷ ಬೆಳೆಯಲಿಲ್ಲ . ಆ ಪಕ್ಷದಲ್ಲಿ ಸದಸ್ಯತ್ವದ ಕಾರ್ಡ್‌ ಪಡೆಯುವ ವೇಳೆಗೆ ಕಾರ್ಯಕರ್ತ ಮುದುಕನಾಗಿರುತ್ತಾನೆ ಎಂದರು.

    ರಾಮಕೃಷ್ಣ ಹೆಗಡೆ ಅವರ ಬಗ್ಗೆ ಜೀವರಾಜ ಆಳ್ವ ಅವರು ಅಪಾರ ಗೌರವ ಇಟ್ಟಿದ್ದರು. ಹೆಗಡೆ ಅವರ ಬಗ್ಗೆ ಸಿಟ್ಟು ಬಂದಾಗ, ಹೆಗಡೆಗೆ ಬುದ್ಧಿ ಹೇಳಿ ಎಂದು ತಮ್ಮ ಬಳಿ ದೂರುತ್ತಿದ್ದುದನ್ನು ಅನಂತಮೂರ್ತಿ ಸ್ಮರಿಸಿಕೊಂಡರು. ಇದೇ ಸಂದರ್ಭದಲ್ಲಿ ಸಂಯುಕ್ತ ಜನತಾದಳದ ಮುಖಂಡ ಪಿ.ಜಿ.ಆರ್‌.ಸಿಂಧ್ಯಾ ಅವರು ಆಳ್ವ ಅವರನ್ನು ಕುರಿತಾದ ಅಯಸ್ಕಾಂತ ಪುಸ್ತಕವನ್ನು ಬಿಡುಗಡೆ ಮಾಡಿದರು.

    ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ ಎಸ್‌.ಭೈರೇಗೌಡ, ಶಾಸಕರಾದ ಬಸವರಾಜ ಹೊರಟ್ಟಿ , ಬಿ.ಎ.ಮೊಹಿದ್ದೀನ್‌ , ಜಾತ್ಯತೀತ ಜನತಾದಳದ ಬಸವರಾಜ ಬೊಮ್ಮಾಯಿ, ಬಿ.ಟಿ.ಲಲಿತಾ ನಾಯಕ್‌, ಡಿ.ಮಂಜುನಾಥ್‌, ಸಂಯುಕ್ತ ದಳದ ಕೆ.ಬಿ.ಶಾಣಪ್ಪ , ಬಸವರಾಜ ರಾಯರೆಡ್ಡಿ , ಡಾ. ಎಂ.ಪಿ. ನಾಡಗೌಡ ಮುಂತಾದವರು ಆಳ್ವ ಅವರನ್ನು ಕುರಿತು ಮಾತನಾಡಿದರು.

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more