ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಎಂ.ಕೃಷ್ಣ ಜೊತೆ ಹದಿನಾರು ವೀರಶೈವ ಸ್ವಾಮಿಗಳ ಮಾತುಕತೆ

By Super
|
Google Oneindia Kannada News

ಬೆಂಗಳೂರು : ಕನಕಪುರದಲ್ಲಿ ಒಕ್ಕಲಿಗ ಗೌಡರ ರಾಜಕೀಯ ಲೆಕ್ಕಾಚಾರ ನಡೆಯುತ್ತಿದ್ದರೆ, ಸೋಮವಾರ ರಾಜಧಾನಿಯಲ್ಲಿ ಉತ್ತರ ಕರ್ನಾಟಕದ ವೀರಶೈವ ಮಠಾಧೀಶರು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಹುಬ್ಬಳ್ಳಿಯ ಮೂರು ಸಾವಿರ ಮಠದ ರುದ್ರಮುನಿ ದೇವರು, ಲಕ್ಷ್ಮೇಶ್ವರದ ಮುಕ್ತಿಮಂದಿರ ಸ್ವಾಮೀಜಿ, ಗಂಗಾವತಿಯ ಕಲ್ಮಠ ಸ್ವಾಮೀಜಿ, ಬೀದರ್‌ನ ಶಿವಕುಮಾರ ಸ್ವಾಮೀಜಿ, ಮುಳಬಾಗಿಲಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಯಚೂರಿನ ಮಹಾಂತ ಸ್ವಾಮೀಜಿ, ಗವಿಪುರದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಸುಮಾರು 16 ಮಂದಿ ಮಠಾಧೀಶರು ಮುಖ್ಯಮಂತ್ರಿ ಕೃಷ್ಣ ಅವರನ್ನು ಭೇಟಿಯಾದರು. ಮಾತುಕತೆಯ ವಿವರ ತಿಳಿದುಬಂದಿಲ್ಲ .

ಕಾಂಗ್ರೆಸ್‌ನ ಮುಖಂಡ ವಿಶ್ವ ಪ್ರಕಾಶ್‌ ಉಳ್ಳಾಗಡ್ಡಿಮಠ ಅವರು ಈ ಭೇಟಿಯನ್ನು ಏರ್ಪಡಿಸಿದ್ದು , ಸ್ವಾಮೀಜಿಗಳನ್ನು ಬೆಂಗಳೂರಿಗೆ ಕರೆ ತಂದಿದ್ದರು. ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಎ.ಎಂ. ವಿಜಯಕುಮಾರ್‌ ಹಾಗೂ ವೀರಶೈವ ಒಕ್ಕೂಟದ ಪರಮಶಿವಯ್ಯ ಅವರು ಮುಖ್ಯಮಂತ್ರಿ- ಸ್ವಾಮೀಜಿಗಳ ಭೇಟಿಯ ಸಂದರ್ಭದಲ್ಲಿ ಹಾಜರಿದ್ದರು.

ಫೆ.21 ರ ಕನಕಪುರ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ಈ ಭೇಟಿ ರಾಜಕೀಯ ಮಹತ್ವ ಪಡೆದಿದೆ. ಕನಕಪುರದಲ್ಲಿನ ಕಾಂಗ್ರೆಸ್‌ ಸ್ಪರ್ಧಿ, ಸಹಕಾರ ಸಚಿವ ಡಿ.ಕೆ. ಶಿವಕುಮಾರ್‌ ಅವರು ಕೂಡ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುದು ಗಮನಾರ್ಹ.(ಇನ್ಫೋ ವಾರ್ತೆ)

English summary
16 Veerashaiva swamijis meet Chief minister S.M. Krishna
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X