• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಲಾರ : ಉತ್ತಮ ವಿದ್ಯುತ್‌ ನೀಡಿ, ಇಲ್ಲವೆ ಮೀಟರ್‌ ಅಳವಡಿಸಬೇಡಿ

By Staff
|

ಕೋಲಾರ: ಕೃಷಿ ನೀರಾವರಿ ಪಂಪ್‌ ಸೆಟ್‌ಗೆ ಮೀಟರ್‌ ಅಳವಡಿಕೆ ಕಾರ್ಯವನ್ನು ವಿರೋಧಿಸಿ ರಾಜ್ಯ ಪ್ರಾಂತ ರೈತ ಸಂಘ ಫೆಬ್ರವರಿ 26ರಂದು ಜಿಲ್ಲಾ ಬಂದ್‌ಗೆ ಕರೆ ನೀಡಿದೆ.

ಕೃಷಿ ನೀರಾವರಿ ಪಂಪ್‌ಸೆಟ್‌ಗೆ ಮೀಟರ್‌ ಅಳವಡಿಸುವ ಸರಕಾರ 12 ಗಂಟೆ ತಡೆಯಿಲ್ಲದ ಗುಣಮಟ್ಟದ ವಿದ್ಯುತ್‌ ಕೊಡಬೇಕು ಎಂದು ಕೃಷಿಕರು ಸರಕಾರವನ್ನು ಆಗ್ರಹಿಸಿ ಈ ಬಂದ್‌ಗೆ ಕರೆ ನೀಡಿದ್ದಾರೆ. ಪಂಪ್‌ಸೆಟ್‌ಗೆ ಮೀಟರ್‌ ಅಳವಡಿಸುವ ಪ್ರಸ್ತಾವನೆಯನ್ನು ಸರಕಾರ ಒಪ್ಪಿಕೊಂಡರೆ, ಅದು ರೈತರ ಮೇಲಿನ ದೌರ್ಜನ್ಯವಾಗಿರುತ್ತದೆ ಎಂದು ರೈತ ಸಂಘದ ಉಪಾಧ್ಯಕ್ಷ ಜಿ. ವಿ. ಶ್ರೀರಾಮ ರೆಡ್ಡಿ ಹೇಳಿದ್ದಾರೆ. ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆನಿಸಿಕೊಂಡವರಿಂದ ವಿದ್ಯುತ್‌ ಶುಲ್ಕವನ್ನು ವಸೂಲಿ ಮಾಡುವಲ್ಲಿ ಸರಕಾರ ಸೋತಿದೆ. ಬದಲಿಗೆ ಬಡ ರೈತರ ಮೇಲೆ ತನ್ನ ಅಧಿಕಾರ ಚಲಾಯಿಸುತ್ತಿದೆ . ರೈತರು ಈಗಾಗಲೇ ನೀರಿನ ಅಭಾವ, ಬೆಲೆ ಕುಸಿತ, ಪ್ರಾಕೃತಿಕ ವಿಕೋಪದಂತಹ ವಿಪತ್ತಿನಿಂದ ಸೋತಿದ್ದಾರೆ. ಅವರಿಗೆ ನೆರವಾಗಬೇಕಾದ ಸರಕಾರ ಮೀಟರ್‌ ಅಳವಡಿಕೆಯ ಮೂಲಕ ಮತ್ತಷ್ಟು ಹಿಂಸೆ ನೀಡುತ್ತಿದೆ ಎಂದು ರೆಡ್ಡಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಗೋಷ್ಠಿಯಲ್ಲಿ ಹಾಜರಿದ್ದ ಸಂಘದ ಕಾರ್ಯದರ್ಶಿ ಸೂರ್ಯನಾರಾಯಣನ್‌, ದಿನಕ್ಕೆ ಕನಿಷ್ಠ ಆರುಗಂಟೆಗಳ ಕಾಲ ವಿದ್ಯುತ್‌ ಕೊಡುವಲ್ಲಿ, ರೈತರ ಸಾಲು ಆತ್ಮಹತ್ಯೆಗಳ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದ ಸರಕಾರವನ್ನು ಟೀಕಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more