ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನರಾ ಬ್ಯಾಂಕ್‌ನಿಂದ ಪ್ರಪ್ರಥಮ ಮಹಿಳಾ ಬ್ಯಾಂಕ್‌ ಶಾಖೆ ಉದ್ಘಾಟನೆ

By Staff
|
Google Oneindia Kannada News

ಬೆಂಗಳೂರು: ರಾಷ್ಟ್ರೀಕೃತ ಕೆನರಾಬ್ಯಾಂಕ್‌ ಬೆಂಗಳೂರಿನ ಪ್ರಪ್ರಥಮ ಸಂಪೂರ್ಣ ಮಹಿಳಾ ಬ್ಯಾಂಕಿಂಗ್‌ ಶಾಖೆಯನ್ನು ಜಯನಗರದಲ್ಲಿ ಆರಂಭಿಸಿದೆ. ಮಹಿಳಾ ಗ್ರಾಹಕರಿಗಾಗಿಯೇ ಮೀಸಲಾದ ಈ ಶಾಖೆಯು ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಿ ಪ್ರೋತ್ಸಾಹಿಸಲಿದೆ.

ಮಹಿಳಾ ಗ್ರಾಹಕರ ಸೌಕರ್ಯಕ್ಕಾಗಿ ಹಾಗೂ ಮಹಿಳಾ ಉದ್ಯಮಿಗಳ ಉನ್ನತಿಗಾಗಿ ಸಾಲಸೌಲಭ್ಯ ಒದಗಿಸಲಿರುವ ಈ ಬ್ಯಾಂಕ್‌ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್‌.ವಿ. ಶಾಸ್ತ್ರೀ ಹೇಳಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಈಗಾಗಲೇ ಬ್ಯಾಂಕ್‌ 6 ಲಕ್ಷಕ್ಕೂ ಹೆಚ್ಚು ಮಹಿಳಾ ಗ್ರಾಹಕರಿಗೆ 1,605 ಕೋಟಿ ರುಪಾಯಿ ಸಾಲ ವಿತರಿಸಿದೆ. ಮಹಿಳಾ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸುವ ಸಲುವಾಗಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಿಸಲ್ಪಡುವ ಶಾಖೆ ತೆರೆಯಲಾಗಿದೆ. ಇದು ಮಹಿಳಾ ಗ್ರಾಹಕರಿಗೆ ಸಾಲ ಸೌಲಭ್ಯವೂ ಸೇರಿದಂತೆ ಒತ್ತಾಸೆಯಾಗಿ ನಿಲ್ಲುತ್ತದೆ ಎಂದು ಹೇಳಿದರು.

ಬ್ಯಾಂಕ್‌ನ ಒಟ್ಟು 2,405 ಶಾಖೆಗಳ ಪೈಕಿ 1,193 ಶಾಖೆಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ ಎಂದ ಅವರು, 2002ರ ಮಾರ್ಚ್‌ ವೇಳೆಗೆ ಬ್ಯಾಂಕ್‌ನ ಎಟಿಎಂ ಕೌಂಟರ್‌ಗಳ ಸಂಖ್ಯೆಯನ್ನು 100 ಮುಟ್ಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕೆನರಾ ಬ್ಯಾಂಕ್‌ ಏನಿ ಬಾುಂಚ್‌ ಸೇವೆಯನ್ನು ಆರಂಭಿಸಿದ್ದು, ಇದು 2002ರ ಏಪ್ರಿಲ್‌ವೇಳೆಗೆ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಹಾಗೂ ಕೋಲ್ಕತ್ತಾನಗರಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು. ಸಂಪೂರ್ಣ ಮಹಿಳಾ ಸಿಬ್ಬಂದಿಯ ಜಯನಗರ ಶಾಖೆಯನ್ನು ಸೋಮವಾರ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್‌ ಉದ್ಘಾಟಿಸಿದರು.

(ಪಿಟಿಐ /ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X