• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಮಕ್ಕಳು-ಶಾಲೆ’ ಸಂಖ್ಯೆ ಕಂದಕ, ಸುಪ್ರಿಂಕೋರ್ಟ್‌ ನ್ಯಾಯಮೂರ್ತಿ ಆತಂಕ

By Staff
|

*ಕೆ. ರಾಘವೇಂದ್ರ ಕಾಮತ್‌, ಕೆ. ಸದಾಶಿವ

ಮಂಗಳೂರು : ದೇಶದಲ್ಲಿ ಶಾಲೆಗೆ ಪ್ರವೇಶಾವಕಾಶ ಕೋರುವ ಮಕ್ಕಳ ಮತ್ತು ಶಾಲೆಗಳ ಅನುಪಾತದಲ್ಲಿ ದೊಡ್ಡ ಅಂತರವಿದೆ. ಸರ್ವರಿಗೂ ಪ್ರಾಥಮಿಕ ಶಿಕ್ಷಣ ಒದಗಿಸುವ ಕನಸು ನನಸಾಗುತ್ತಾದರೂ ಹೇಗೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಪ್ರಶ್ನಿಸಿದ್ದಾರೆ.

ಅವರು ಮಂಗಳೂರು ವಿಶ್ವವಿದ್ಯಾಲಯದದಲ್ಲಿ ಘಟಿಕೋತ್ಸವ ಭಾಷಣ ಮಾಡುತ್ತಿದ್ದರು. ನಮ್ಮ ದೇಶದ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಕೆಲಸ ನಡೆದಿಲ್ಲ . ಸಮರ್ಥ ಹಾಗೂ ಬಲಶಾಲೀ ಭಾರತವನ್ನು ನಿರ್ಮಿಸಲು ಉತ್ತಮ ಶಿಕ್ಷಣ ಪಡೆದ ಜನರಿಂದ ಮಾತ್ರ ಸಾಧ್ಯ. ಈ ಕಾರಣಕ್ಕಾಗಿಯೇ ಹಲವು ದಶಕಗಳಿಂದ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ರೂಪಿಸಲು ಹೋರಾಟಗಳು ನಡೆಯುತ್ತಿವೆ ಎಂದು ಹೆಗ್ಡೆ ಹೇಳಿದರು.

ಈ ಸಂದರ್ಭದಲ್ಲಿ ಐಟಿ ಕ್ಷೇತ್ರದಲ್ಲಿನ ಕ್ರಾಂತಿಯನ್ನು ಉದಾಹರಿಸಿದ ಅವರು, ಉತ್ತಮ ಶಿಕ್ಷಣದಿಂದಾಗಿ ಐಟಿ ಕ್ಷೇತ್ರದಲ್ಲಿ ನಾವು ಜಗತ್ತಿನಲ್ಲಿ ಇತರೊಂದಿಗೆ ಯಶಸ್ವಿಯಾಗಿ ಸ್ಪರ್ಧಿಸುವುದು ಸಾಧ್ಯವಾಗಿದೆ ಎಂದರು.

ಜೀವನದಲ್ಲಿ ಏಳು ಬೀಳು ಸಹಜ: ಸೋಲು ಗೆಲುವಿನ ಮಧ್ಯೆ ಸಮತೋಲನವನ್ನು ಕಾಪಾಡಬೇಕು. ಭವಿಷ್ಯದ ಸವಾಲುಗಳನ್ನು ಎದುರಿಸುವಾಗ ಆತ್ಮವಿಶ್ವಾಸ ಬೇಕಾಗುತ್ತದೆ. ಅವುಗಳನ್ನು ಧೈರ್ಯದಿಂದ ನಿಭಾಯಿಸಬೇಕು. ಯಾವುದೇ ಗುರಿಯನ್ನು ಮುಟ್ಟುವಾಗ ಕಠಿಣ ಶ್ರಮ ಅಗತ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ದೇಶದಲ್ಲಿ ಶಿಕ್ಷಣ ಮುಂದುವರೆದಿರುವುದರ ಜೊತೆಗೆ ಶಿಕ್ಷಣ ವಂಚಿತರ ಸಂಖ್ಯೆಯೂ ಹೆಚ್ಚುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ನಮ್ಮ ದೇಶದಲ್ಲಿ 110 ಮಿಲಿಯ ಮಕ್ಕಳು ಪ್ರಾಥಮಿಕ ಶಿಕ್ಷಣ ವಂಚಿತರಾಗಿರುವುದರ ಬಗ್ಗೆ ಖೇದ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಪ್ರಥಮ ರ್ಯಾಂಕ್‌ನೊಂದಿಗೆ ತೇರ್ಗಡೆಯಾದ 43 ಮಂದಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವ ಮತ್ತು ವಿವಿ ಸಹಕುಲಾಧಿಪತಿ ಜಿ.ಪರಮೇಶ್ವರ್‌ ಪ್ರಮಾಣ ಪತ್ರ ಮತ್ತು ಪದಕಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ 39 ಪಿಹೆಚ್‌.ಡಿ, 1 ಎಂ.ಫಿಲ್‌, 841 ಸ್ನಾತಕೋತ್ತರ ಪದವಿ, 8,120 ಪದವಿಗಳನ್ನು ನೀಡಲಾಯಿತು.

ವಿವಿಯ ಉಪಕುಲಪತಿ ಬಿ. ಹನುಮಯ್ಯ ಅವರು ವಿವಿಯ ಯೋಜನೆಗಳ ಬಗ್ಗೆ ವಿವರಿಸಿದರು. ವಿವಿಯ ರಿಜಿಸ್ಟ್ರಾರ್‌ ಪ್ರೊ. ಬಿ.ಎ. ವಿವೇಕ ರೈ, ಪರೀಕ್ಷಾಂಗ ಕುಲಸಚಿವ ಡಾ. ಎಂ. ಎನ್‌. ಮಧ್ಯಸ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್‌ ವಿಜೇತರು :
ಅನುರಾಧ (ಎಂ.ಎ. ಕನ್ನಡ) ಮೊಹಮ್ಮದ್‌ ( ಎಂ.ಎ. ಚರಿತ್ರೆ), ರಿಚರ್ಡ್‌( ದೈಹಿಕ ಶಿಕ್ಷಣ), ನುರಿನ್‌ ಫರ್ನಾಂಡಿಸ್‌ (ಎಂ.ಎಸ್ಸಿ, ಆನ್ವಯಿಕ ಜೀವಶಾಸ್ತ್ರ), ಮೇಘಲಾ ದಿವಾಕರನ್‌(ಎಂ.ಎ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more