• search

ಮಾರ್ಚ್‌ 15ರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ : ವಿಎಚ್‌ಪಿ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    Rama Temple of Ayodyeಅಯೋಧ್ಯೆ : ಮಾರ್ಚ್‌ 15ರಿಂದ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಯಾವುದೇ ಶಕ್ತಿ ಈ ಕಾರ್ಯವನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ವಿಶ್ವಹಿಂದೂ ಪರಿಷತ್‌ ಭಾನುವಾರ ಘೋಷಿಸಿದೆ. ಈ ವಿಷಯವನ್ನು ಮಹಂತ ಪರಮಹಂಸ ರಾಮಚಂದ್ರ ಅವರು ಪ್ರಕಟಿಸಿದ್ದಾರೆ.

    ಆಯೋಧ್ಯೆಯ ವಿವಾದಿತ ಸ್ಥಳವನ್ನು ರಾಮಮಂದಿರ ನಿರ್ಮಾಣಕ್ಕಾಗಿ ರಾಮಮಂದಿರ ನಿರ್ಮಾಣ ಟ್ರಸ್ಟ್‌ಗೆ ವಹಿಸುವಂತೆ ಪ್ರಧಾನಿ ವಾಜಪೇಯಿ ಅವರಿಗೆ ವಿಎಚ್‌ಪಿ ಮಾ.12ರ ಗಡುವು ನೀಡಿದೆ. ಅಷ್ಟರೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ನಾವು ರಾಮಜನ್ಮಭೂಮಿಯಲ್ಲಿ ದೇವಾಲಯ ನಿರ್ಮಿಸುವುದು ಶತಃಸಿದ್ಧ ಎಂದು ಅವರು ಹೇಳಿದರು.

    ಬಳ್ಳಾರಿ ವರದಿ : ಮಾರ್ಚ್‌ 12ರ ನಂತರ ಆಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಭಾನುವಾರ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಚುನಾವಣೆಗಳು ಮುಗಿದ ತರುವಾಯ ಅಂದರೆ ಮಾರ್ಚ್‌ 12ರ ಬಳಿಕ ರಾಮಮಂದಿರ ನಿರ್ಮಾಣ ನಡೆಯುವುದು ಖಚಿತ ಎಂದರು.

    ಹಾವೇರಿ ವರದಿ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವದು ನೂರಕ್ಕೆ ನೂರು ಖಚಿತ. ಯಾವುದೇ ಕಾನೂನು ಎದುರಾದರೂ ಅದನ್ನು ಎದುರಿಸಲು ವಿಎಚ್‌ಪಿ ಸಿದ್ಧವಾಗಿದೆ ಎಂದು ರಾಜ್ಯ ಭಜರಂಗದಳದ ಸಂಚಾಲಕ ಪ್ರಮೋದ್‌ ಮುತಾಲಿಕ ತಿಳಿಸಿದ್ದಾರೆ.

    ರಾಣೆಬೆನ್ನೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಭಾರತೀಯ ಜನತಾಪಕ್ಷದಲ್ಲಿರುವ ನಾಯಕರು ಹಿಂದುಗಳಾಗಿದ್ದರೆ, ಈ ಒಳ್ಳೆಯ ಕೆಲಸಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು. ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಮುನ್ನ ನಾಲ್ಕು ಹಂತದ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ರಾಜ್ಯದ 1500 ಕಡೆಗಳಲ್ಲಿ ಜಲಯಜ್ಞ ನಡೆಯಲಿದೆ ಎಂದರು.

    ಆನಂತರ ಜಪಯಜ್ಞ, ಸಾಧು ಚೇತಾವಣೆಯನ್ನು ನಡೆಸಲಾಗುವದು ಅಂತಿಮವಾಗಿ ಆಯೋಧ್ಯೆಯಲ್ಲಿ ಶ್ರೀರಾಮ ತಾರಕಯಜ್ಞ ನಡೆಸಲಾಗುವುದು ಎಂದೂ ಮುತಾಲಿಕ್‌ ವಿವರಿಸಿದರು.

    (ಪಿಟಿಐ/ಇನ್‌ಪೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more