ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸೈಬರ್‌ ಪ್ರಗತಿಯಿಂದ ಬೌದ್ಧಿಕ ಆಸ್ತಿಯ ದರೋಡೆ ಆಗುತ್ತಿದೆ’

By Staff
|
Google Oneindia Kannada News

ಶಿವಮೊಗ್ಗ : ಉನ್ನತ ಶಿಕ್ಷಣ ಪಡೆದವರು ಉನ್ನತ ಮಟ್ಟದಲ್ಲಿ ಅಪರಾಧ ಎಸಗುತ್ತಿದ್ದಾರೆ. ಕಂಪ್ಯೂಟರ್‌ ಕ್ಷೇತ್ರದಲ್ಲಿನ ಅಪರಾಧದ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಾ ಸಾಗುತ್ತಿದೆ. ಸೈಬರ್‌ ಅಪರಾಧದಿಂದ ಉಂಟಾಗುತ್ತಿರುವ ಆರ್ಥಿಕ, ಸಾಮಾಜಿಕ ದುಷ್ಪರಿಣಾಮಗಳ ನಿಯಂತ್ರಣಕ್ಕೆ ತಂತ್ರ ರೂಪಿಸುವುದು ಅಗತ್ಯ ಎಂದು ಕುವೆಂಪು ವಿವಿ ಕುಲಪತಿ ಡಾ. ಚಿದಾನಂದಗೌಡ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ರಾಷ್ಟ್ರೀಯ ಕಾನೂನು ಕಾಲೇಜು ಏರ್ಪಡಿಸಿದ್ದ ಸೈಬರ್‌ ಅಪರಾಧ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮಾಹಿತಿ ತಂತ್ರಜ್ಞಾನದಲ್ಲಾದ ಕ್ರಾಂತಿಕಾರಕ ಆವಿಷ್ಕಾರಗಳ ಸದುಪಯೋಗ ಹಾಗೂ ದುರುಪಯೋಗ ಏಕಕಾಲದಲ್ಲಿ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ನಾಗರಾಜ್‌ ಅವರು, ಸೈಬರ್‌ ಅಭಿವೃದ್ಧಿಯಿಂದ ಭೌದ್ಧಿಕ ಆಸ್ತಿಯ ದರೋಡೆ ನಡೆಯುತ್ತಿದೆ. ಈಗಲೇ ಸೈಬರ್‌ ಪಾತಕದಿಂದ ಉಂಟಾಗುವ ದುಷ್ಪರಿಣಾಮ ತಡೆಯಲು ತಂತ್ರ ರೂಪಿಸದಿದ್ದಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದರು.

ಇದು ಯಾವುದೇ ಒಂದು ದೇಶಕ್ಕೆ ಸೀಮಿತವಾಗಿಲ್ಲ ಇದು, ವಿಶ್ವವ್ಯಾಪಿಯಾಗಿ ಹಬ್ಬುತ್ತಿರುವ ಅಂಟುಜಾಡ್ಯ. ಈ ಅಪರಾಧಗಳು ಖಾಸಗಿ ಹಾಗೂ ಸರಕಾರದ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುತ್ತಿವೆ. ಹೀಗಾಗಿ ಬೌದ್ಧಿಕ ಆಸ್ತಿಯ ರಕ್ಷಣೆಗೆ ಗಮನ ಹರಿಸಲೇ ಬೇಕು ಎಂದರು.

(ಇನ್‌ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X