ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.30.5ರಷ್ಟು ವಿದ್ಯುತ್‌ ದರ ಏರಿಕೆಗೆ ಕೆಪಿಟಿಸಿಎಲ್‌ ಮರು ಪ್ರಸ್ತಾವನೆ

By Staff
|
Google Oneindia Kannada News

ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆ.ಪಿ.ಟಿ.ಸಿ.ಎಲ್‌) ಶೇ.30.5ರಷ್ಟು ವಿದ್ಯುತ್‌ ದರ ಏರಿಸುವಂತೆ ಕೋರಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ಶುಕ್ರವಾರ ಮರು ಪ್ರಸ್ತಾವನೆಯನ್ನು ಸಲ್ಲಿಸಿದೆ.

ಬೆಂಗಳೂರು ಜಲ ಮಂಡಳಿ ನೀರನ ದರ ಏರಿಸುವ ಮುನ್ನವೇ ಬೆಲೆ ಏರಿಕೆಯ ಮಾತನಾಡುತ್ತಿದ್ದ ಕೆಪಿಟಿಸಿಎಲ್‌ ಕಳೆದ ವರ್ಷ ನವೆಂಬರ್‌ ತಿಂಗಳ 26ರಂದು ಶೇ. 23.52ರಷ್ಟು ವಿದ್ಯುತ್‌ ದರ ಏರಿಸುವಂತೆ ಕೋರಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಆದರೆ ಆ ಪ್ರಸ್ತಾವನೆ ಮತ್ತು ಅದರಲ್ಲಿ ಸೂಚಿಸಲಾಗಿದ್ದ ಪರಿಷ್ಕೃತ ಶುಲ್ಕಗಳು ನಿರೀಕ್ಷಿತ ಆದಾಯದ ಲೆಕ್ಕಾಚಾರ ಅಸಮರ್ಪಕವಾಗಿದೆ ಎಂದು ಆಯೋಗವು ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಹೊಸದಾಗಿ ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚಿಸಿತ್ತು. ಅದರಂತೆ ಕೆಪಿಟಿಸಿಎಲ್‌ ಶುಕ್ರವಾರ ಹೊಸ ಪ್ರಸ್ತಾವನೆ ಸಲ್ಲಿಸಿದೆ. ಇದು ಒಪ್ಪಿಗೆಯಾಗಿ ಜಾರಿಯಾದರೆ, ನಾಗರಿಕರ ಮೇಲೆ ಭಾರಿ ಹೊರೆ ಬೀಳಲಿದೆ.

(ಇನ್‌ಫೋವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X