• search

ಬೆಳಗಾವಿಯಲ್ಲಿ ಏಳು ದಿನದ ಹಸುಗೂಸಿಗೆ ಯಶಸ್ವೀ ಹೃದಯ ಶಸ್ತ್ರ ಚಿಕಿತ್ಸೆ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಳಗಾವಿ : ಹೃದಯಬೇನೆಯಿಂದ ನರಳುತ್ತಿದ್ದ ನವಜಾತ ಶಿಶುವಿಗೆ ಇಲ್ಲಿನ ಕೆ.ಎಲ್‌.ಇ. ಆಸ್ಪತ್ರೆಯ ವೈದ್ಯರು ಯಶಸ್ವೀ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಪುನರ್ಜನ್ಮ ನೀಡಿದ್ದಾರೆ. ಹುಟ್ಟಿನಿಂದಲೇ ಹೃದಯದ ತೊಂದರೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗುವನ್ನು ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

    ಈ ಯಶಸ್ವೀ ಶಸ್ತ್ರ ಚಿಕಿತ್ಸೆಯ ನೇತೃತ್ವವನ್ನು ಡಾ. ಎಂ.ಡಿ. ದೀಕ್ಷಿತ್‌ ಮತ್ತು ಹತ್ತು ಜನರು ವಹಿಸಿದ್ದರು. ಸುಮಾರು ಏಳೂವರೆ ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆ ಮಗುವಿನ ಪ್ರಾಣ ಕಾಪಾಡಿತು. ಈ ಹೊತ್ತು ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

    ಕೋಲ್ಲಾಪುರದ ಸೀಮಾ ಎಂಬುವವರ ಮೂರು ದಿನದ ಮಗು ಹೃದಯ ತೊಂದರೆಯಿಂದ ಬಳಲುತ್ತಿತ್ತು. ಮಗುವಿನ ಪರೀಕ್ಷೆ ನಡೆಸಿದ ವೈದ್ಯರು ಹುಟ್ಟಿನಿಂದಲೇ ಮಗು ಹೃದಯ ಬೇನೆಗೆ ತುತ್ತಾಗಿರುವುದನ್ನು ಗಮನಿಸಿ, ಶಸ್ತ್ರಚಿಕಿತ್ಸೆ ನಡೆಸಿದರು. ಇಂತಹ ಮಕ್ಕಳನ್ನು ವೈದ್ಯಕೀಯ ಭಾಷೆಯಲ್ಲಿ ನೀಲಿ ಮಗು ಎಂದು ಕರೆಯಲಾಗುತ್ತದೆ ಎಂದೂ ಆಸ್ಪತ್ರೆ ಮೂಲಗಳು ಹೇಳಿವೆ.

    ಹೃದಯ ತೊಂದರೆ ಇರುವ ಮಕ್ಕಳ ಜನನ ಈಹೊತ್ತು ಭಾರತದಲ್ಲಿ ಸಾಮಾನ್ಯವಾಗಿ ಹೋಗಿದೆ. ಸಾವಿರದಲ್ಲಿ ಒಂದು ಮಗು ಇಂಥ ರೋಗದಿಂದ ಬಳಲುತ್ತದೆ. ಶಸ್ತ್ರಚಿಕಿತ್ಸೆ ನಡೆಸದಿದ್ದರೆ, ಮಗು ವರ್ಷದೊಳಗೆ ಸಾವನ್ನಪ್ಪುತ್ತದೆ. ಹಾಲಿ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿಗಳಲ್ಲಿ ಮಾತ್ರ ಇಂಥ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಈ ಹೊತ್ತು ಬೆಳಗಾವಿಯ ಕೆ.ಎಲ್‌.ಇ. ಆಸ್ಪತ್ರೆ ಆ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ತಜ್ಞ ವೈದ್ಯ ಡಾ. ದೀಕ್ಷಿತ್‌ ಸುದ್ದಿಗಾರರಿಗೆ ತಿಳಿಸಿದರು.

    (ಇನ್‌ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more