ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಹಳ್ಳಿ ಕ್ಷೇತ್ರದ ಮತದಾರರಿಗೆ ಖುದ್ದು ಎಸ್‌.ಎಂ.ಕೃಷ್ಣ ಪತ್ರ ಬರೆದಿದ್ದಾರೆ

By Staff
|
Google Oneindia Kannada News

ಬೆಂಗಳೂರು : ಇಂಡಿಯಾ ಟುಡೇ ಸಮೀಕ್ಷೆಯಿಂದ ಭಾರತದ ಬೆಸ್ಟ್‌ ಚೀಫ್‌ ಮಿನಿಸ್ಟರ್‌ ಪಟ್ಟ ಗಿಟ್ಟಿಸಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕನಕಪುರ ಚುನಾವಣೆ ಪ್ರಚಾರದ ವಿಷಯದಲ್ಲಿ ಸಾಕಷ್ಟು ಸದ್ದು ಮಾಡದೇ ಇರೋದು ಯಾತಕ್ಕೆ? ದೇವೇಗೌಡರ ಖದರಿಗೆ ಗರಿ ಷರ್ಟಿನ ಕೃಷ್ಣ ಸುಮ್ಮಗೆ ನಗುತ್ತಿರುವುದರ ಹಿಂದಿನ ತಂತ್ರವೇನು?

ಕನಕಪುರ ಲೋಕಸಭಾ ಉಪ ಚುನಾವಣೆಗೆ ಇನ್ನು ಹನ್ನೆರಡೇ ದಿನ. ಜಾತಿ, ದೇವೇಗೌಡರ ‘ಇದು ನನ್ನ ಕೊನೇ ಯುದ್ಧವೆಂಬ ಸಿಂಪತಿ ವೋಟುಗಳ ಸೆಳೆವ ತಂತ್ರ’...ಇವೆಲ್ಲದರ ನಡುವೆಯೂ ಕೃಷ್ಣ ಕುಂದಿದ ಮೊಗವ ತೋರಿಸುತ್ತಲೇ ಇಲ್ಲ. ಎರಡು ವರ್ಷಕ್ಕೂ ಹೆಚ್ಚು ಕಾಲ ರಾಜ್ಯದ ಸಿಎಂ ಆಗಿ ಜಗತ್ತಿನ ಕಣ್ಣನ್ನೇ ಸೆಳೆದಿರುವ ಕೃಷ್ಣ ಪ್ರಕಾರ ಉತ್ತರಹಳ್ಳಿ ಕ್ಷೇತ್ರದ ಮತದಾರರ ಮನವ ಹೊಗುವುದು ಮುಖ್ಯ. ಇದಕ್ಕಾಗೇ ಸದ್ದಿಲ್ಲದೆ ಹೊಸ ತಂತ್ರವೊಂದು ತಯಾರಾಗಿದೆ. ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ಈ ತಂತ್ರವನ್ನು ಬಯಲಿಗೆಳೆದಿದೆ.

ಉತ್ತರಹಳ್ಳಿ ಕ್ಷೇತ್ರದ 12.39 ಲಕ್ಷ ಮತದಾರರ ಪ್ರತಿ ಮನೆಗೆ ಖುದ್ದು ಕೃಷ್ಣ ಕಾಗದ ಹಾಕಲಿದ್ದಾರೆ. ಬಹುತೇಕ ಕಾರ್ಪೊರೇಟ್‌ ಜಗತ್ತು ಇರುವ ಉತ್ತರಹಳ್ಳಿ ಕ್ಷೇತ್ರದ ಮತದಾರರಿಗೆ ತಮ್ಮ ಬಗೆಗೆ ಒಲವಿದೆ. ಅದನ್ನು ಉಳಿಸಿಕೊಂಡು, ಮತಗಳನ್ನು ಗಿಟ್ಟಿಸಿಕೊಳ್ಳಲೇಬೇಕು ಎಂಬುದು ಕೃಷ್ಣ ತಂತ್ರ.

ಹೀಗಿದೆ ಕೃಷ್ಣ ಪತ್ರ...


"Dear friend,
It has not been possible for me to share some of my views with you. With your support two years ago my party was able to form a government. We have brought transparency in our functioning. We have won accolades from world leaders. But now your opinion on our performance is essential. No matter how preoccupied you are on the polling day, spare some time to cast your vote in favour of the Congress candidate."

(ಇನ್ಫೋ ವಾರ್ತೆ)

ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X