• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇಲುಕೋಟೆಯಲ್ಲಿ ಶ್ರೀಪುರಂದರ ಜ್ಯೋತಿಯ ವೈಭವದ ಮೆರವಣಿಗೆ

By Staff
|

ಮೇಲುಕೋಟೆ : ದಾಸಶ್ರೇಷ್ಠ ಪುರಂದರ ದಾಸರ ಆರಾಧನೆ ಅಂಗವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಲಿರುವ ಜ್ಯೋತಿಯ ಉದ್ಘಾಟನೆ ಸಮಾರಂಭ ಚೆಲುವನಾರಾಯಣನ ಸನ್ನಿಧಿ ಮೇಲುಕೋಟೆಯಲ್ಲಿ ಗುರುವಾರ ನೆರವೇರಿತು. ಸಾಲಂಕೃತವಾದ ವಾಹನದಲ್ಲಿ ಈ ಪವಿತ್ರ ಜ್ಯೋತಿಯ ಮೆರವಣಿಗೆ ಅತ್ಯಂತ ವೈಭವದಿಂದ ಜರುಗಿತು.

ನೂರಾ ಒಂದು ಕಳಶಗಳನ್ನು ಹೊತ್ತು ಕನ್ಯೆಯರು ಹಾಗೂ ಮಂಗಳವಾದ್ಯಗಳೊಂದಿಗೆ ಜ್ಯೋತಿಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿಷ್ಣುತೀರ್ಥ ಸ್ವಾಮೀಜಿ ಹಾಗೂ ಭದ್ರಗಿರಿ ಸರ್ವೋತ್ತಮ ದಾಸರು ಮತ್ತು ಭದ್ರಗಿರಿ ಅಚ್ಯುತದಾಸರು ಹಾಜರಿದ್ದರು.

ಸಮಾರಂಭದಲ್ಲಿ ಮಾತನಾಡಿದ ಅಚ್ಯುತ ದಾಸರು, ದಾಸರಲ್ಲೇ ಶ್ರೇಷ್ಠರಾದ ಪುರಂದರ ದಾಸರು, ಸಾಮಾಜಿಕ ಕಳಕಳಿಯ ಹಲವು ಕೃತಿಗಳನ್ನು ರಚಿಸಿ, ಅಂದೇ ಜನಜಾಗೃತಿ ಉಂಟು ಮಾಡಿದ್ದರು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಎ.ವಿ.ಆರ್‌. ಆಚಾರ್‌ ಅವರು, ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ವಜ್ರದ ಪದಕವನ್ನು ಸಮರ್ಪಿಸಿದರು.

(ಇನ್‌ಫೋ ವಾರ್ತೆ)

ವಾರ್ತಾಸಂಚಯ

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more