• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕಾವೇರಿ : ಫೆ.11ರಂದು ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಅಫಿಡವಿಟ್‌ ಸಲ್ಲಿಕೆ’

By Staff
|

ನವದೆಹಲಿ: ಹತ್ತು ವರ್ಷಗಳ ಹಿಂದೆಯೇ ಕಾವೇರಿ ನ್ಯಾಯಾಧಿಕರಣದ ರಚನೆಯನ್ನು ವಿರೋಧಿಸಿದ್ದ, ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಸಲ್ಲಿಸಬಹುದಾದ ಪ್ರಮಾಣಪತ್ರದ ಬಗ್ಗೆ ಈಗ ಎಲ್ಲರ ಕುತೂಹಲ. ಕರ್ನಾಟಕ ಸಲ್ಲಿಸಬಹುದಾದ ಅಫಿಡವಿಟ್‌ ಹೇಗಿರುತ್ತದೆ ಎಂಬ ಬಗ್ಗೆ ದೆಹಲಿ ಹಾಗೂ ತಮಿಳುನಾಡು ಸರಕಾರಗಳು ಕುತೂಹಲ ತಳೆದಿವೆ.

ಕಾವೇರಿ ನ್ಯಾಯಮಂಡಳಿ ರಚನೆಯ ಕ್ರಮಬದ್ಧತೆಯನ್ನೇ ಪ್ರಶ್ನಿಸಿ ಬೆಂಗಳೂರಿನ ಗಾಂಧೀ ಸಾಹಿತ್ಯ ಸಂಘ ಸರ್ವೋನ್ನತ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಅಫಿಡವಿಟ್‌ ಸಲ್ಲಿಸ ಬೇಕಾಗಿದ್ದು, ಫೆ.8ರೊಳಗೆ ಪ್ರಮಾಣ ಪತ್ರ ಸಲ್ಲಿಸುವುದಾಗಿ ರಾಜ್ಯ ಜಲ ಸಂಪನ್ಮೂಲ ಸಚಿವ ಎಚ್‌.ಕೆ. ಪಾಟೀಲ್‌ ಇತ್ತೀಚೆಗೆ ತಿಳಿಸಿದ್ದರು.

ಈ ಸಂಬಂಧ ನೀರಾವರಿ ತಜ್ಞರು ಹಾಗೂ ಕಾನೂನು ಪಂಡಿತರೊಂದಿಗೆ ಹಲವು ಸುತ್ತಿನ ಸಮಾಲೋಚನೆ ನಡೆಸಲಾಗಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ, ಗುರುವಾರದೊಳಗೆ ಅಂತಿಮ ತೀರ್ಮಾನಕ್ಕೆ ಬಂದು, ಶುಕ್ರವಾರ ಪ್ರಮಾಣ ಪತ್ರ ಸಲ್ಲಿಸಲಾಗುವುದು ಎಂದೂ ಅವರು ಹೇಳಿದ್ದರು.

ಫೆ.11ರಂದು ಪ್ರಮಾಣ ಪತ್ರ : ಆದರೆ, ಫೆ.8ರ ಶುಕ್ರವಾರ ಕರ್ನಾಟಕವು ಸರ್ವೋನ್ನತ ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಲಿಲ್ಲ. ಸುಪ್ರೀಂಕೋರ್ಟ್‌ ಹಿರಿಯ ನ್ಯಾಯವಾದಿ ನಾರಿಮನ್‌ ಅವರು ಹೆಚ್ಚಿನ ಪುರಾವೆ ಹಾಗೂ ದಾಖಲೆಗಳನ್ನು ಕೇಳಿದ್ದು, ಅದನ್ನು ತರಲು, ತಾವು ಮತ್ತೆ ಬೆಂಗಳೂರಿಗೆ ಹೋಗುತ್ತಿರುವುದಾಗಿ ಕರ್ನಾಟಕದ ಅಡ್ವೋಕೇಟ್‌ ಜನರಲ್‌ಎ.ಎನ್‌. ಜಯರಾಂ ತಿಳಿಸಿದ್ದಾರೆ.

ಒಂದೆರಡು ದಿನದಲ್ಲೇ ಜಯರಾಂ ಅವರು, ಮತ್ತೆ ದೆಹಲಿಗೆ ಮರಳಲಿದ್ದು, ಬಹುತೇಕ ಫೆ.11ರಂದು ಪ್ರಮಾಣ ಪತ್ರ ಸಲ್ಲಿಸುವ ಸಾಧ್ಯತೆ ಇದೆ. ನ್ಯಾಯಾಧಿಕರಣದ ಬದಲಿಗೆ, ನದಿ ನೀರು ಮಂಡಳಿ ಕಾಯಿದೆಯ ಮೂಲಕವೇ ಕಾವೇರಿ ಜಲ ವಿವಾದವನ್ನು ಬಗೆ ಹರಿಸಿಕೊಳ್ಳಲು ಆದೇಶ ಹೊರಡಿಸುವಂತೆ ಕೋರಿ ಗಾಂಧೀ ಸಾಹಿತ್ಯ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

ಈ ಅರ್ಜಿಯನ್ನು ಜ.24ರಂದು ವಿಚಾರಣೆಗೆ ಕೈಗೆತ್ತಿಕೊಂಡ ಸರ್ವೋನ್ನತ ನ್ಯಾಯಾಲಯವು ಅರ್ಜಿಯ ಕುರಿತು ಕರ್ನಾಟಕ ರಾಜ್ಯ ಸರಕಾರ ತನ್ನ ಅಭಿಪ್ರಾಯ ತಿಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಮಾಣ ಪತ್ರದ ಮೂಲಕ ತನ್ನ ಅಭಿಪ್ರಾಯ ಸಲ್ಲಿಸಲು ಕರ್ನಾಟಕ ಸರಕಾರಕ್ಕೆ ಎರಡು ವಾರಗಳ ಕಾಲಾವಕಾಶವನ್ನೂ ನೀಡಿತ್ತು.

ಈಗಾಗಲೇ ನ್ಯಾಯಾಧಿಕರಣ ರಚನೆಯಾಗಿ 10 ವರ್ಷಗಳೇ ಉರುಳಿವೆ. ನ್ಯಾಯಾಧಿಕರಣ ಸ್ಥಾಪನೆಯಾದ ಸಂದರ್ಭದಲ್ಲಿ ರಾಜ್ಯ ಸರಕಾರ ಕೂಡ ಇದನ್ನು ವಿರೋಧಿಸಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ನ್ಯಾಯಮಂಡಳಿ ಮಧ್ಯಂತರ ತೀರ್ಪು ನೀಡಿದೆ. ರಾಜ್ಯ ಸರಕಾರವೂ ಆ ಆದೇಶ ಪಾಲಿಸಿ, ತಮಿಳುನಾಡಿಗೆ ನೀರು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧಿಕರಣವನ್ನು ಧಿಕ್ಕರಿಸುವಂತೆಯೂ ಇಲ್ಲ, ಒಪ್ಪಿಕೊಳ್ಳುವಂತೆಯೂ ಇಲ್ಲ. ಒಟ್ಟಿನಲ್ಲಿ ಅಡಕತ್ತರಿಗೆ ಸಿಲುಕಿರುವ ರಾಜ್ಯ ಸರಕಾರಕ್ಕೆ ಪ್ರಮಾಣಪತ್ರ ಹೇಗೆ ಸಲ್ಲಿಸುವುದು ಎಂಬ ಜಿಜ್ಞಾಸೆ ಕಾಡುತ್ತಿದೆ. ಈ ತಿಂಗಳ 14ರಿಂದ ಕಾವೇರಿ ನ್ಯಾಯಾಧಿಕರಣ ಕುರಿತ ಅರ್ಜಿಯ ವಿಚಾರಣೆ ಮುಂದುವರಿಯಲಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more