ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯನ್‌ ಏರ್‌ಲೈನ್ಸ್‌ನಿಂದ ಪೊಲೀಸ್‌ ಇಲಾಖೆಗೆ ಸ್ಪಿನ್ನಾದ ಹರ್ಭಜನ್‌!

By Staff
|
Google Oneindia Kannada News

ಚಂಡೀಘರ್‌: ಪ್ರಸ್ತುತ ಇಂಡಿಯನ್‌ ಏರ್‌ಲೈನ್ಸ್‌ ಉದ್ಯೋಗಿಯಾಗಿರುವ ಭಾರತೀಯ ಕ್ರಿಕೆಟ್‌ ತಂಡದ ಸ್ಟಾರ್‌ ಕ್ರಿಕೆಟರ್‌ ಹರ್ಭಜನ್‌ ಸಿಂಗ್‌, ಪಂಜಾಬ್‌ ಪೊಲೀಸ್‌ ಪಡೆಗೆ ಸೇರ್ಪಡೆಯಾಗಲು ಉದ್ದೇಶಿಸಿದ್ದಾರೆ.

ಇನ್ನು ಒಂದೆರಡು ದಿನಗಳಲ್ಲಿಯೇ ಇಂಡಿಯನ್‌ ಏರ್‌ಲೈನ್ಸ್‌ ತೊರೆಯುವ ಅವರು, ಉಪ ಪೊಲೀಸ್‌ ಅಧೀಕ್ಷಕ ಅಧಿಕಾರಿಯಾಗಿ ಪಂಜಾಬ್‌ ಪೊಲೀಸ್‌ ಇಲಾಖೆ ಸೇರಲಿದ್ದಾರೆ. ಹರ್ಭಜನ್‌ ಅವರಿಗೆ ರಾಜ್ಯ ಸರ್ಕಾರದಿಂದ ನೇಮಕಾತಿ ಪತ್ರ ಬಂದಿರುವುದನ್ನು ಅವರ ಸಹೋದರಿ ಅಮೃತ್‌ ಪಾಲ್‌ ಪಿಟಿಐ ಪ್ರತಿನಿಧಿಗೆ ಫೋನ್‌ ಮೂಲಕ ತಿಳಿಸಿದ್ದಾರೆ.

ಪ್ರಸ್ತುತ ಮೊಹಾಲಿಯಲ್ಲಿ ನಡೆಯುತ್ತಿರುವ ಒರಿಸ್ಸಾ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಆಡುತ್ತಿರುವ ಹರ್ಭಜನ್‌, ಪಂದ್ಯಾ ನಂತರದ ಒಂದೆರಡು ದಿನಗಳಲ್ಲಿ ಹಾಲಿ ಹುದ್ದೆಯನ್ನು ತ್ಯಜಿಸುವರು ಎಂದು ಅಮೃತ್‌ ಹೇಳಿದ್ದಾರೆ. ಅಥ್ಲೀಟ್‌ ಸುನೀತಾ ರಾಣಿ ಹಾಗೂ ಹಾಕಿ ಆಟಗಾರ ಗಗನ್‌ ಅಜಿತ್‌ ಸಿಂಗ್‌ ಅವರನ್ನು ಕೂಡ ಹರ್ಭಜನ್‌ ಜೊತೆಯಲ್ಲಿ ಪೊಲೀಸ್‌ ಅಧಿಕಾರಿಗಳಾಗಿ ಕ್ರೀಡಾ ಕೋಟಾದಲ್ಲಿ ಪಂಜಾಬ್‌ ಸರ್ಕಾರ ನೇರ ನೇಮಕ ಮಾಡಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X