• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

300 ಆಂಗ್ಲ ಮಾಧ್ಯಮ ಶಾಲೆ ಸ್ಥಾಪನೆಗೆ ರಾಜ್ಯ ಸರ್ಕಾರದ ಅನುಮತಿ

By Staff
|

ಬೆಂಗಳೂರು : ಆಂಗ್ಲಭಾಷೆಯನ್ನು ಶಿಕ್ಷಣದಿಂದ ಕೈಬಿಡುವುದೇ..ಛೇ..ಛೇ.. ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ ವಜ್ರಮಹೋತ್ಸವದಲ್ಲಿ (ಫೆ.4) ಉದ್ಗಾರ ತೆಗೆದಿದ್ದ ಮುಖ್ಯಮಂತ್ರಿಗಳು ಮೂರೇ ದಿನದ ಅಂತರದಲ್ಲಿ ಮುನ್ನೂರು ಆಂಗ್ಲ ಮಾಧ್ಯಮ ಶಾಲೆ ತೆರೆಯಲು ತಮ್ಮ ಸರಕಾರದಿಂದ ಅನುಮತಿ ನೀಡಿದ್ದಾರೆ.

ಕನ್ನಡದ ಜೊತೆ ಜೊತೆಗೇ ಇಂಗ್ಲಿಷ್‌ಗೂ ಪ್ರಾಧಾನ್ಯತೆ ನೀಡಲಾಗುವುದು ಎಂದು ಅಂದಿನ ಕಾರ್ಯಕ್ರಮದಲ್ಲಿ ಕೃಷ್ಣ ನುಡಿದಿದ್ದರು. ಆದರೆ, ಪ್ರಾಥಮಿಕ ಶಾಲೆಗಳ ಒತ್ತಡ ತಡೆಯಲು ರಾಜ್ಯ ಸರಕಾರ ಸ್ಯಾಕ್ಷನ್‌ ಮಾಡಿರುವ ಎಲ್ಲ 300 ಶಾಲೆಗಳೂ ಇಂಗ್ಲಿಷ್‌ ಮೀಡಿಯಂ ಶಾಲೆಗಳೇ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

300 ಶಾಲೆ : ಈಗ ಅನುಮತಿ ಪಡೆದಿರುವ ಶಾಲೆಗಳು ಐದರಿಂದ 10ನೇ ತರಗತಿವರೆಗಿನ ಶಾಲೆಗಳಾಗಿದ್ದು, ಬರುವ ಶೈಕ್ಷಣಿಕ ವರ್ಷದಿಂದಲೇ ಅವು ಕಾರ್ಯಾರಂಭ ಮಾಡಲಿವೆ. ಈಗಾಗಲೇ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಈ ಎಲ್ಲವೂ ಇಂಗ್ಲಿಷ್‌ ಮೀಡಿಯಂ ಶಾಲೆಗಳೇ ಎಂದು ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ತಿಳಿಸಿದ್ದಾರೆ.

ನಾವು ಶಿಕ್ಷಣ ನೀತಿಗೆ ವಿರುದ್ಧವಾಗಿ ಈ ಶಾಲೆಗಳಿಗೆ ಅನುಮತಿ ನೀಡಿಲ್ಲ. ಒಂದರಿಂದ ನಾಲ್ಕನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳಿಗೆ ಮಾತ್ರ ಹೊಸ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 150 ಹೊಸಶಾಲೆಗಳು ಮತ್ತು ರಾಜ್ಯದ ಇತರೆಡೆ 150 ಶಾಲೆಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.

ಎಲ್‌ಕೆಐ-ಯುಕೆಐ : ಎಲ್‌ಕೆಜಿ ಮತ್ತು ಯುಕೆಜಿ ಹಂತದ ಶಿಕ್ಷಣಕ್ಕೆ ಈಗ ಸರಕಾರದ ಮಾನ್ಯತೆ ಇಲ್ಲ. ಯಾರು ಬೇಕಾದರೂ, ಎಲ್ಲಿ ಬೇಕಾದರೂ ಈ ತರಗತಿ ನಡೆಸಬಹುದು. ಆದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯನ್ನಾಧರಿಸಿ, ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಸರಕಾರದ ನಿಯಂತ್ರಣದಡಿಯಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

(ಇನ್‌ಫೋ ವಾರ್ತೆ)

ವಾರ್ತಾಸಂಚಯ

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more