• search

ಧರ್ಮಸ್ಥಳ: ನೇತ್ರಾವತಿಯ ಅಣೆ ಒಡೆದು ನುಗ್ಗಿತು ನೀರು, ಭಕ್ತರು ಪಾರು

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಮಂಗಳೂರು : ಒಂದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ಶ್ರೀಧರ್ಮಸ್ಥಳದ ಬಳಿ ನೇತ್ರಾವತಿ ನದಿಯ ಸ್ನಾನಘಟ್ಟದ ಮೇಲೆ ಇತ್ತೀಚೆಗಷ್ಟೇ ನಿರ್ಮಿಸಲಾದ ಅಣೆಕಟ್ಟು ಹಠಾತ್‌ ಒಡೆದು ಪ್ರವಾಹೋಪಾದಿಯಲ್ಲಿ ನೀರು ನುಗ್ಗಿತಾದರೂ ಸ್ನಾನ ಘಟ್ಟದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದ ಭಕ್ತರು ಆಶ್ಚರ್ಯಕರವಾದ ರೀತಿಯಲ್ಲಿ ಪಾರಾಗಿರುವ ಘಟನೆ ಗುರುವಾರ ಸಂಭವಿಸಿದೆ.

    ಶ್ರೀಕ್ಷೇತ್ರ ಧರ್ಮಸ್ಥಳದ ಯಾತ್ರಿಕರಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ನಗರ ನೀರು ಸರಬರಾಜು- ಒಳಚರಂಡಿ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಈ ಅಣೆಕಟ್ಟೆಯ ಬುನಾದಿ ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಕುಸಿದು, ನೀರು ರಭಸದಿಂದ ನುಗ್ಗಿತು.

    ಪ್ರವಾಹದಂತೆ ಹರಿದುಬಂದ ನೀರನ್ನು ನೋಡಿ ಭಯಭೀತರಾದ ಕೆಲವೇ ಸಂಖ್ಯೆಯಲ್ಲಿದ್ದ ಯಾತ್ರಿಕರು, ಪುಟ್ಟ ದ್ವೀಪದಂತಿರುವ ಎತ್ತರದ ಗುಡ್ಡವನ್ನೇರಿ ಪ್ರಾಣ ರಕ್ಷಿಸಿಕೊಂಡರು. ಈ ಯಾತ್ರಿಕರನ್ನು ಆನಂತರ ಅಗ್ನಿಶಾಮಕ ದಳದವರು ಹಾಗೂ ಸಾರ್ವಜನಿಕರೂ ಪಾರುಮಾಡಿದರು.
    ಶ್ರೀಮಂಜುನಾಥನೆ ಕಾಪಾಡಿದ : ಇದು ಧರ್ಮಕ್ಷೇತ್ರ, ಆ ಶ್ರೀಮಂಜುನಾಥನೇ ನಮ್ಮನ್ನು ಪಾರು ಮಾಡಿದ ಎಂದು ಪ್ರಾಣಾಪಾಯದಿಂದ ಪಾರಾದ ಭಕ್ತರೊಬ್ಬರು ಹೇಳಿದರು. ಹುಚ್ಚುಹೊಳೆಯಂತೆ ನೀರು ನುಗ್ಗಿತು. ನಮಗೆ ಗಾಬರಿಯಾಯ್ತು. ಸದ್ಯ ಪಕ್ಕದಲ್ಲೇ ಇದ್ದ ಈ ಕಲ್ಲು ಬಂಡೆ ದೇವರಾಗಿ ಕಾಪಾಡಿತು. ಖಂಡಿತಾ ದೇವರಿದ್ದಾನೆ ಸ್ವಾಮಿ ಎಂದವರು ಹೇಳಿದರು.

    ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಒಡೆದ ಅಣೆಕಟ್ಟೆಯನ್ನು ನೋಡಲು ನೂರಾರು ಜನರು ಆಗಮಿಸಿದರು. ಘಟನೆ ಸ್ಥಳಕ್ಕೆ ಬಂದ, ಸ್ಥಳೀಯ ಶಾಸಕರಾದ ಕೆ. ಪ್ರಭಾಕರ ಬಂಗೇರ ಅವರು, ಒಡೆದ ಈ ಅಣೆ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಆ ಅಣೆ ಕಟ್ಟಿದ ಗುತ್ತಿಗೆದಾರರು ಇದನ್ನು ವಹಿಸಿಕೊಡುವ ಮೊದಲೇ ಒಡೆದಿದೆ. ಈ ಕಾಮಗಾರಿಗೆ ಓಕೆ ಎಂದ ಎಂಜನಿಯರುಗಳೂ ಈ ದುರಂತಕ್ಕೆ ಬಾಧ್ಯಸ್ಥರು ಎಂದು ಕಿಡಿ ಕಾರಿದರು. ಭ್ರಷ್ಟ ಅಧಿಕಾರಿಗಳ ವಜಾಕ್ಕೆ ಆಗ್ರಹಿಸಿದರು.

    ಇದು ಮಳೆಗಾಲವಲ್ಲ. ನೀರಿನ ಹರವು ಅತ್ಯಲ್ಪ. ಒತ್ತಡವೂ ಕಡಿಮೆ. ಹೀಗಿರುವಾಗಲೇ ಅಣೆ ಒಡೆದಿದೆ. ಅಕಸ್ಮಾತ್‌ ಮಳೆಗಾಲದಲ್ಲಿ ಒಡೆದಿದ್ದರೆ ಗತಿ ಏನು ಎಂದು ಸ್ಥಳಕ್ಕೆ ಆಗಮಿಸಿದ್ದ ಜನರು ಮಾತನಾಡಿಕೊಳ್ಳುತ್ತಿದ್ದರು. ಬೆಳ್ತಂಗಡಿ ತಹಶೀಲ್ದಾರ್‌ ಶಿವರುದ್ರಸ್ವಾಮಿ ಹಾಗೂ ನೀರಾವರಿ ಇಲಾಖೆ ಎಂಜನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    (ಇನ್‌ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more