ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ನನಗ್ಯಾವ ಲೆಕ್ಕ- ಲಾಲೂ
Amitabh Bachchan cannot match me !
ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆಡಿರುವ ಮಾತಿದು.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಈ ಬಾರಿ ಪ್ರಚಾರ ತಂತ್ರ ಸಿನಿಮಾದವರ ಮಂತ್ರ. ಗೋವಿಂದ, ಮಾಧುರಿ, ರವೀನಾ ಮೊದಲಾದವರ ಗ್ಲಾಮರನ್ನು ಮುಂದಿಟ್ಟು ವೋಟು ಕೀಳುವ ಪ್ರಚಾರ ಭಾರೀ ಜೋರು. ಇವೆಲ್ಲಕ್ಕೂ ಮಿಗಿಲಾಗಿ ಸಮಾಜವಾದಿ ಪಕ್ಷದ ಹೈಲೈಟು ಅಮಿತಾಬ್ ಬಚ್ಚನ್ ಎಂಬ ಬುಲೆಟ್ಟು!
ಕರ್ನಾಟಕದಲ್ಲಿ ಗೌಡ ದ್ವಯರು ಕನಕಪುರ ಲೋಕಸಭಾ ಕಣದಲ್ಲಿ ಧೂಳೆಬ್ಬಿಸುತ್ತಿದ್ದರೆ, ಉತ್ತರ ಪ್ರದೇಶದಲ್ಲಿ ಲಾಲೂ ಖದರು ಮೆರೆಯುತ್ತಿದ್ದಾರೆ. ರಾಜಕಾರಣಿಗಳ ಭಿನ್ನ ಭಿನ್ನ ಹಾಗೂ ಜನಮನ ಸೆಳೆದಿರುವ ವ್ಯಕ್ತಿತ್ವಗಳ ಕಾರಣಕ್ಕೆ ಈ ಎರಡೂ ಚುನಾವಣೆಗಳು ದೇಶದ ಗಮನ ಸೆಳೆದಿವೆ.
ಚುನಾವಣಾ ಬಹಿರಂಗ ಪ್ರಚಾರದ ಮುನ್ನಾ ದಿನವಾದ ಗುರುವಾರ ಸುದ್ದಿಗೋಷ್ಠಿಯಲ್ಲಿ ಲಾಲೂ ಆಡಿದ ಮಾತುಗಳು ಹೀಗಿವೆ....
- ಅಮಿತಾಬ್ ಬಚ್ಚನ್ ಅವರಿಗೆ ಜನರನ್ನು ಸೇರಿಸುವ ಇಮೇಜ್ ಇದೆ, ನಿಜ. ಆದೆರೆ ಜನರ ವೋಟು ಗಿಟ್ಟಿಸುವುದು ರಾಜಕಾರಣಿಗಳ ಛರಿಷ್ಮಾದಿಂದ ಮಾತ್ರ ಸಾಧ್ಯ. ಈ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನನಗೆ ಮ್ಯಾಚ್ ಆಗುವುದೇ ಇಲ್ಲ.
- ಸಿನಿಮಾ ತಾರೆಗಳನ್ನು ಪ್ರಚಾರಕ್ಕೆ ಬಳಸುವುದರಿಂದ ಚುನಾವಣಾ ವಿಷಯಕ್ಕೆ ಎರಡನೇ ಆದ್ಯತೆ ಸಲ್ಲುತ್ತದೆ.
- ಫೆಬ್ರವರಿ 8ರಿಂದ ಗುಲಾಂ ನಬಿ ಆಜಾದ್ ಜೊತೆಯಲ್ಲಿ ನಾನು ಪ್ರಚಾರ ಜಾಥಾ ಕೈಗೊಳ್ಳುವ ಕಾರ್ಯಕ್ರಮವಿದೆ.
- ನನ್ನ ಪಕ್ಷದ 25 ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಲಿದ್ದಾರೆ.
- ಬಿಹಾರಕ್ಕೆ ವಿಶೇಷ ಸ್ಥಾನ ಕೊಡಬೇಕೆಂದು ಮುಖ್ಯಮಂತ್ರಿ ರಾಬ್ಡಿ ದೇವಿ ಪ್ರಧಾನ ಮಂತ್ರಿಯವರನ್ನು ಕೇಳಿದ್ದಾರೆ. ಬಿಹಾರದಲ್ಲಿ ಅಭಿವೃದ್ಧಿ ಕಾಮಗಾರಿಗಳಾಗದಿರಲು ನಾವೆಲ್ಲರೂ ಜವಾಬ್ದಾರರು. ಆದರೂ, ದೆಹಲಿಯ ಸಹಾಯವಿಲ್ಲದೆ ನಾವೇನೂ ಮಾಡಲಾಗದು. ಪ್ರಧಾನ ಮಂತ್ರಿಗಳು ರಾಬ್ಡಿ ಅವರ ಮನವಿಯನ್ನು ಮರು ಪರಿಶೀಲಿಸಬೇಕು.
- ಬರೆದಿಟ್ಟುಕೊಳ್ಳಿ, ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾವ ಒಂದು ಪಕ್ಷಕ್ಕೂ ಸಣ್ಣ ಪ್ರಮಾಣದ ಮೆಜಾರಿಟಿ ಕೂಡ ಸಿಗುವುದಿಲ್ಲ.
ಲಾಲೂ ಪ್ರಸ್ತಾಪ ಬಂದಾಗಲೆಲ್ಲಾ ಕನ್ನಡದ ಹನಿಗವಿ ಡುಂಡಿರಾಜ್ರ ಒಂದು ಹನಿ ನೆನಪಾಗುತ್ತದೆ. ಓದಿಬಿಡಿ-
ಹುಟ್ಟಿಸಿದಾತ ಮೇಯಿಸುವುದಿಲ್ಲ ಹುಲ್ಲು
ಇದಕ್ಕೆ ಅಪವಾದ- ಲಲ್ಲು ! (:
(ಪಿಟಿಐ/ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...