ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಧ ಕೋರ್ಟ್‌ಗಳಲ್ಲಿ ಕೊಳೆಯುತ್ತಿರುವ ಪ್ರಕರಣಗಳ ಸಂಖ್ಯೆ 2.4 ಕೋಟಿ

By Staff
|
Google Oneindia Kannada News

ನವದೆಹಲಿ : ಭಾರತೀಯ ನ್ಯಾಯಾಂಗ ವ್ಯವಸ್ಥೆಯ ನಿಧಾನಗತಿಗೆ ಈಗ ಅಂಕಿ ಅಂಶಗಳ ಬೆಂಬಲ ದೊರಕಿದ್ದು , ದೇಶದ ವಿವಿಧ ಕೋರ್ಟುಗಳಲ್ಲಿ ಒಟ್ಟು 2.40 ಕೋಟಿ ಪ್ರಕರಣಗಳು ಬಾಕಿಯಿವೆ.

ವಿಶ್ವದ ಅತ್ಯುತ್ತಮ ನ್ಯಾಯಾಂಗ ವ್ಯವಸ್ಥೆಗಳಲ್ಲೊಂದು ಎನ್ನುವ ಅಗ್ಗಳಿಕೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯದಾಗಿದ್ದರೂ, ಅದು ತನ್ನ ನಿಧಾನಗತಿಗೂ ಹೆಸರುವಾಸಿಯಾಗಿದೆ. ಪ್ರಸ್ತುತ ಬಾಕಿಯಿರುವ 2.40 ಕೋಟಿ ಕೋರ್ಟ್‌ ಪ್ರಕರಣಗಳ ಬಗ್ಗೆ ನೀಲ ನಕ್ಷೆಯನ್ನು ತಯಾರಿಸುವಂತೆ ಸಂಸದೀಯ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಸಲಹೆ ಮಾಡಿದೆ.

ಪರಿಸ್ಥಿತಿ ತೀರ ಸೂಕ್ಷ್ಮವಾಗಿದ್ದು , ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ವಿಷಯಕ್ಕೆ ರಾಷ್ಟ್ರೀಯ ಅಜೆಂಡಾದಲ್ಲಿ ಆದ್ಯತೆ ನೀಡಬೇಕಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಪ್ರಣಬ್‌ ಮುಖರ್ಜಿ ಅಧ್ಯಕ್ಷರಾಗಿರುವ ಸಮಿತಿಯ ವರದಿ ಎಚ್ಚರಿಸಿದೆ. ಅಕ್ಟೋಬರ್‌ 31, 2001 ದಿನಾಂಕದೊಳಗೆ ದೇಶದ ವಿವಿಧ ಕೋರ್ಟ್‌ಗಳಲ್ಲಿ ಬಾಕಿಯಿರುವ ಪ್ರಕರಣಗಳ ಮಾಹಿತಿಯನ್ನು ಸಮಿತಿ ನೀಡಿದೆ.

ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ 35 ಲಕ್ಷ 57ಸಾವಿರ ಪ್ರಕರಣಗಳು ಬಾಕಿಯಿದ್ದರೆ, ಸುಪ್ರಿಂಕೋರ್ಟ್‌ನಲ್ಲಿ 22 ಸಾವಿರ ಪ್ರಕರಣಗಳು ನೆನೆಗುದಿಯಲ್ಲಿವೆ. ಪ್ರತಿ 10 ಲಕ್ಷ ಜನಸಂಖ್ಯೆಗೆ 10.5 ನ್ಯಾಯಾಧೀಶರು ನಮ್ಮ ವ್ಯವಸ್ಥೆಯಲ್ಲಿದ್ದು , ಈ ಪ್ರಮಾಣ ವಿಶ್ವದಲ್ಲಿಯೇ ಕಡಿಮೆಯಾಗಿದೆ. ಬಜೆಟ್‌ನಲ್ಲಿ ನ್ಯಾಯಾಂಗಕ್ಕೆ ಕೇವಲ ಪ್ರತಿಶತ 0.2 ರಷ್ಟು ಅನುದಾನ ದೊರೆಯುವುದೂ ಇದಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X