ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನದ 24 ಗಂಟೆಯೂ ಇಂಟರ್‌ನೆಟ್‌ ಸೌಲಭ್ಯ : ತಿಂಗಳಿಗೆ 900 ರುಪಾಯಿ

By Staff
|
Google Oneindia Kannada News

ಬೆಂಗಳೂರು : ದಿನದ 24 ಗಂಟೆಯ ಇಂಟರ್‌ನೆಟ್‌ ಸೌಲಭ್ಯಕ್ಕೆ ತಿಂಗಳಿಗೆ ಕೇವಲ 900 ರುಪಾಯಿ ಮಾತ್ರ. ‘ಆಲ್ವೇಸ್‌ ಆನ್‌ ಇಂಟರ್‌ನೆಟ್‌’ ಎಂಬ ಈ ಹೊಸ ವ್ಯವಸ್ಥೆ ಬೆಂಗಳೂರಿನಲ್ಲಿ ಅತಿ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಪ್ರಾರಂಭವಾಗಲಿದೆ. ಈ ವಿಷಯವನ್ನು ಬೆಂಗಳೂರು ಟೆಲಿಕಾಂ ಜಿಲ್ಲೆಯ ಪ್ರಧಾನ ವ್ಯವಸ್ಥಾಪಕ ಬಿ.ಆರ್‌. ಬಾಳಿಗಾ ತಿಳಿಸಿದ್ದಾರೆ.

ಇದರಲ್ಲಿ ಮತ್ತೊಂದು ಸೌಲಭ್ಯವಿದೆ. ಡಿ.ಐ.ಎ.ಎಸ್‌. ಎಂಬ ಸಾಧನವೊಂದನ್ನು ಅಳವಡಿಸುವ ಮೂಲಕ ದೂರವಾಣಿ ಹಾಗೂ ಇಂಟರ್‌ನೆಟ್‌ ಅನ್ನು ಏಕಕಾಲದಲ್ಲಿ ಬಳಸಬಹುದಾಗಿದೆ. ಡಿ.ಐ.ಎ.ಎಸ್‌. ನೆರವಿನಿಂದ ನೇರ ಇಂಟರ್‌ನೆಟ್‌ ಸಂಪರ್ಕ ಪಡೆಯಬಹುದಾಗಿದ್ದು, ಇಂಟರ್‌ನೆಟ್‌ ಸಂಪರ್ಕ ಕಡಿದುಹೋಗದಂತೆ ದೂರವಾಣಿ ಕರೆ ಸ್ವೀಕರಿಸಲೂ ಅವಕಾಶವಿದೆ ಎಂದು ಅವರು ಹೇಳಿದರು.

ಇದು ನೇರ ಇಂಟರ್‌ನೆಟ್‌ ಸಂಪರ್ಕವಾಗಿದ್ದು, ದೂರವಾಣಿ ಕರೆಗಳು ಇದಕ್ಕೆ ಅನ್ವಯಿಸುವುದಿಲ್ಲ. ಗ್ರಾಹಕರು ದೂರವಾಣಿ ಶುಲ್ಕದ ಹೆಚ್ಚುವರಿ ಹೊರೆ ಇಲ್ಲದೆ, ಇಂಟರ್‌ನೆಟ್‌ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. ಇಂಟರ್‌ನೆಟ್‌ ಬಳಸುವಾಗ ಬರುವ ಸ್ಥಳೀಯ ಕರೆಗಳಿಗೂ ಪ್ರತ್ಯೇಕ ಹಣ ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಸಂಚಾರಿ ಘಟಕ : ಈಗಾಗಲೇ ಮೂರು ಸಂಪುಟಗಳ 3 ಲಕ್ಷ ಟೆಲಿಫೋನ್‌ ಡೈರೆಕ್ಟರಿಗಳನ್ನು ಮುದ್ರಿಸಲಾಗಿದ್ದು, ಗ್ರಾಹಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ. ಫೆ.7ರಿಂದ 7 ದಿನಗಳ ಕಾಲ ಬೆಂಗಳೂರಿನಲ್ಲಿ ಸಂಚಾರಿ ಘಟಕಗಳ ಮೂಲಕ ಕೂಡ ಟೆಲಿಫೋನ್‌ ಡೈರೆಕ್ಟರಿ ವಿತರಿಸಲಾಗುವುದು ಎಂದರು. ಈಗ ಟೆಲಿಫೋನ್‌ ಡೈರೆಕ್ಟರಿ ಸಿಡಿರಾಮ್‌ ರೂಪದಲ್ಲೂ ಲಭ್ಯವಿದ್ದು, ಗ್ರಾಹಕರಿಗೆ ಆಯ್ಕೆಯ ಅವಕಾಶವಿದೆ ಎಂದು ಅವರು ತಿಳಿಸಿದರು.

ಆಗಸ್ಟ್‌ನಿಂದ ಮೊಬೈಲ್‌ ಸೇವೆ: ಭಾರತ್‌ ಸಂಚಾರ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಮುಂದಿನ ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಿಂದ ದೇಶಾದ್ಯಂತ ತನ್ನ ಮೊಬೈಲ್‌ ಸೇವೆ ಆರಂಭಿಸಲಿದೆ. ಈ ಸೇವೆಯನ್ನು ಉತ್ತಮಗೊಳಿಸಲು ಅಗತ್ಯ ಸಲಕರಣೆಗಳ ಜೋಡಣೆ ಹಾಗೂ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಬೆಲೆ ಕೂಡ ಇತರ ಕಂಪನಿಗಳಿಗಿಂತಲೂ ಆಕರ್ಷಕವಾಗಿರುತ್ತದೆ ಎಂದು ಅವರು ಹೇಳಿದರು.

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X