ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲು ಕೋಟೆಯಿಂದ ದಾಸರ ನುಡಿ ಹೊತ್ತೊಯ್ಯಲಿರುವ ಪುರಂದರ ಜ್ಯೋತಿ

By Staff
|
Google Oneindia Kannada News

ಬೆಂಗಳೂರು: ಮೇಲುಕೋಟೆ ಪುರಂದರ ದಾಸರ ಆರಾಧನಾ ಸಮಿತಿ ಆಯೋಜಿಸಿರುವ ಆರಾಧನೋತ್ಸವದ ಜ್ಯೋತಿಯು ಫೆಬ್ರವರಿ 7ರಂದು ಮೇಲು ಕೋಟೆಯಿಂದ ಹೊರಟು ಫೆಬ್ರವರಿ 10ರಂದು ಮುಳಬಾಗಿಲು ಸೇರಲಿದೆ.

ಪುರಂದರದಾಸರ ಆರಾಧನಾ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಆರ್‌. ಆರ್‌. ಕೇಶವ ಮೂರ್ತಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮೇಲುಕೋಟೆಯಿಂದ ಹೊರಡುವ ಪುರಂದರ ಜ್ಯೋತಿಯು ಪಾಂಡವಪುರ , ಶ್ರೀರಂಗ ಪಟ್ಟಣ ಮತ್ತು ಮೈಸೂರಿನ ಮೂಲಕ ಫೆಬ್ರವರಿ 8ರಂದು ಮಂಡ್ಯ, ಮಳೂರು, ಅಬ್ಬೂರು, ಚನ್ನಪಟ್ಟಣ, ರಾಮನಗರ, ಕೆಂಗೇರಿಯನ್ನು ಸುತ್ತಿ ಬೆಂಗಳೂರು ತಲುಪಲಿದೆ. ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿದ ಬಳಿಕ ಕೋಲಾರ ಮಾರ್ಗವಾಗಿ ಫೆಬ್ರವರಿ 10ರಂದು ಮುಳಬಾಗಿಲು ತಲುಪಲಿದೆ.

ಚೆಲುವ ನಾರಾಯಣ ಸ್ವಾಮಿಯ ಮೇಲುಕೋಟೆಯ ಕದಲಗೆರೆ ಗ್ರಾಮದಲ್ಲಿ ಪುರಂದರ ದಾಸರಿಗೆ ದರ್ಶನ ನೀಡಿರುವುದಾಗಿ ಪ್ರತೀತಿ ಇದೆ. ಆದ್ದರಿಂದ ಆರಾಧನೋತ್ಸವ ಜ್ಯೋತಿಯು ಮೇಲುಕೋಟೆಯಿಂದ ಹೊರಡಲಿದೆ ಎಂದು ಕೇಶವ ಮೂರ್ತಿ ತಿಳಿಸಿದರು.

ಪುರಂದರ ದಾಸರು ಈಗ ಲಭ್ಯವಿರುವುದಕ್ಕಿಂತ ಹೆಚ್ಚು ಕೃತಿಗಳನ್ನು ಬರೆದಿರಬೇಕು. ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಪತನವಾದಾಗ ಅನೇಕ ಹರಿದಾಸ ಕೃತಿಗಳು ಹಾಳಾಗಿ ಹೋಗಿರಬೇಕು. ಈ ಬಗ್ಗೆ ಪುರಂದರ ದಾಸರ ಆರಾಧನಾ ಸಮಿತಿಯು, ಸಮಗ್ರ ಹರಿದಾಸರ ಮತ್ತು ಅವರ ಅವರ ರಚನೆಗಳ ಬಗ್ಗೆ ಸಂಶೋಧನೆ ನಡೆಸಲು ಉದ್ದೇಶಿಸಿದೆ ಎಂದು ಮೂರ್ತಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X