• search

24 ಗಂಟೆಯಲ್ಲಿ ಹಂತಕರ ಬಂಧಿಸಿದ ಅಬ್ದುಲ್‌ ಅಜೀಮ್‌ಗೆ ಸಂಪಾದಕರ ಪತ್ರ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಇವರಿಗೆ-
    ಶ್ರೀ ಅಬ್ದುಲ್‌ ಅಜೀಮ್‌
    ಇನ್‌ಸ್ಪೆಕ್ಟರ್‌
    ಪೀಣ್ಯ ಪೊಲೀಸ್‌ ಠಾಣೆ
    ಬೆಂಗಳೂರು.

    ಮಾನ್ಯರೇ,

    ಜನವರಿ 31 ರ ಗುರುವಾರ ಹಂತಕರ ರಕ್ತ ಪಿಪಾಸೆಗೆ ತಾಯಿ- ಮಗಳು ಬಲಿಯಾದ ಪ್ರಕರಣದಿಂದಾಗಿ ಬೆಂಗಳೂರಿಗೆ ಬೆಂಗಳೂರೇ ದಿಗ್ಭ್ರಮೆಗೊಳಗಾಗಿತ್ತು . ನಗರದೊಂದಿಗೆ ಅಪರಾಧಗಳೂ ಬೆಳೆಯುತ್ತಿರುವ ಇವತ್ತು , ನಾಗರಿಕರು ನೆಮ್ಮದಿಯ ರಾತ್ರಿಗಳಿಂದ ವಂಚಿತರಾಗಿದ್ದಾರೆ. ರಾತ್ರಿಗಳ ಮಾತು ಬಿಡಿ, ಹಗಲಿನಲ್ಲೇ ಕೊಲೆ, ದರೋಡೆ, ಸುಲಿಗೆ ನಡೆಯುತ್ತಿವೆ. ಯಾರಲ್ಲಿ ಹೇಳಿಕೊಳ್ಳುವುದು, ಯಾರನ್ನು ನಂಬುವುದು?

    ರಾಜಸ್ತಾನದ ವ್ಯಾಪಾರಿಯ ಪತ್ನಿ ಪ್ರಿಯಾ ದೇವಿ ಹಾಗೂ ದಂಪತಿಗಳ ಪುತ್ರಿ ನೇಹಾ ಹತ್ಯೆ ಬೆಂಗಳೂರು ನಾಗರಿಕರ ಭಯ- ತಲ್ಲಣಗಳನ್ನು ದುಪ್ಪಟ್ಟುಗೊಳಿಸಿರುವುದು ಸಹಜವೇ. ಕತ್ತು ಕೊಯ್ದು ಕೊಲ್ಲುವ ಪ್ರಕರಣಗಳು ಪದೇ ಪದೇ ಜರುಗುತ್ತಿರುವಾಗ ಯಾವ ನಾಗರಿಕ ನೆಮ್ಮದಿಯಿಂದ ಇರಬಲ್ಲ ? ಮನೆಯಲ್ಲಿ ಇರುವವರಿಗೆ ಹೊರಗೆ ಹೋದವರ ಬಗ್ಗೆ ಭಯ; ಹೊರಗಿನವರಿಗೆ ಮನೆಯಲ್ಲಿ ಉಳಿದವರ ಬಗ್ಗೆ ಆತಂಕ. ನಮ್ಮ ನೆರಳನ್ನೇ ನಂಬದ ಪರಿಸ್ಥಿತಿ.

    ಇಂಥ ಸಂದರ್ಭದಲ್ಲಿ ಪ್ರಿಯಾ ದೇವಿ ಹಾಗೂ ಆಕೆಯ ಪುತ್ರಿಯನ್ನು ಹತ್ಯೆಗೈದ ಹಂತಕರ ಪೈಕಿ ಒಬ್ಬನನ್ನು ಕುಣಿಗಲ್‌ನಲ್ಲಿ ಬಂಧಿಸಿದ್ದೀರಿ. ಹತ್ಯೆ ಸಂಭವಿಸಿದ 24 ಗಂಟೆಗಳಲ್ಲಿ ಆರೋಪಿಯಾಬ್ಬನನ್ನು ಬಂಧಿಸಿದ ನಿಮ್ಮ ಹಾಗೂ ನಿಮ್ಮ ತಂಡದ ಬಗ್ಗೆ ನಮಗೆ ಮೆಚ್ಚುಗೆಯಿದೆ. ಇತ್ತೀಚೆಗಷ್ಟೇ ಸಂಭವಿಸಿದ 8 ವರ್ಷದ ಬಾಲಕಿ ದೀಪಿಕಾ ಹಂತಕನನ್ನು ಪತ್ತೆ ಹಚ್ಚಿದ್ದ ತಾವು ಈಗ ಮತ್ತೊಂದು ಕೊಲೆ ಪ್ರಕರಣವನ್ನು ಬಯಲಿಗೆಳೆದಿದ್ದೀರಿ. ನಿಮ್ಮ ದಿಟ್ಟತನ- ದಕ್ಷತೆಗೆ ಅಭಿನಂದನೆಗಳು.

    ನಿಮ್ಮಂಥ ಪೊಲೀಸ್‌ ಅಧಿಕಾರಿಗಳ ಕಾರಣದಿಂದಲೇ ಬೆಂಗಳೂರಿನ ನಾಗರಿಕರು ನಾಳೆಯ ಬಗ್ಗೆ ಭರವಸೆ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಬೆಂಗಳೂರಿನ ಪೊಲೀಸರ ಸಾಹಸದ ಹೆಜ್ಜೆಗಳನ್ನು www.thatskannada.com ತನ್ನ ಮೊದಲ ದಿನದಿಂದಲೂ ದಾಖಲಿಸುತ್ತಿದೆ. ದಟ್ಸ್‌ಕನ್ನಡ ಹಾಗೂ ಬೆಂಗಳೂರಿನ ನಾಗರಿಕರ ಪರವಾಗಿ ನಿಮಗೆ ಇನ್ನೊಮ್ಮೆ ಅಭಿನಂದನೆ. ನಿಮ್ಮಂಥವರ ಸಂತತಿ ಹೆಚ್ಚಲಿ.

    ಧನ್ಯವಾದಗಳು

    ಎಸ್ಕೆ ಶಾಮಸುಂದರ
    ಸಂಪಾದಕ

    ಫೆಬ್ರವರಿ 04, 2002
    ಬೆಂಗಳೂರು- 68

    ಸಾಧಕರಿಗೆ ನಿಮ್ಮ ಶುಭಾಶಯ ತಲುಪಿಸಿ

    ಮುಖಪುಟ / ಸಾಂಗ್ಲಿಯಾನಾ ವಾಚ್‌

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more