• search

ಲಯನ್ಸ್‌ ಕೊಟ್ಟ ಜೈಪುರ ಕಾಲು ತೊಟ್ಟ ಪುಟ್ಟಿ ಸ್ನೇಹ ಪುಟಿದು ನಡೆದಳು

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಮೈಸೂರು : ಪುಟ್ಟ ಹುಡುಗಿ ಬೇಬಿ ಸ್ನೇಹ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡು ಕಂಗಾಲಾಗಿದ್ದವಳು. ಜೊತೆಯವರು ಕುಣಿಯುವುದನ್ನು ಕಂಡಾಗ, ತನ್ನ ಅಸಹಾಯಕತೆ ಕಣ್ಣಲ್ಲಿ ನೀರು ತರಿಸಿದ್ದೂ ಉಂಟು. ಕೃತಕ ಕಾಲು ಹಾಕಿಕೊಳ್ಳೋಣವೆಂದರೆ ಕಿತ್ತು ತಿನ್ನುವ ಬಡತನ. ಕಾಸೆಲ್ಲಿಂದ ಬರಬೇಕು. ಸೋಮವಾರ ಆಕೆಗೆ ಹಬ್ಬ. ಕನ್ನಡ ಚಿತ್ರ ನಟ ರಮೇಶ್‌ ನೀಡಿದ ಕೃತಕ ಕಾಲನ್ನು ಧರಿಸಿ, ನಗುನಗುತ್ತಾ ನಡೆದಳು ಸ್ನೇಹಾ!

    ಈಕೆಗೆ ಕಾಲು ಕೊಟ್ಟವರು ಲಯನ್ಸ್‌ ಸಂಸ್ಥೆಯವರು. ಸ್ನೇಹಾಳಂತೆಯೇ ಇನ್ನೂ ಹಲವು ಬಡವರು ಕೃತಕ ಕಾಲು, ಊರುಗೋಲುಗಳನ್ನು ಪಡೆದು ನೆಮ್ಮದಿಯ ನಿಟ್ಟುಸಿರಿಟ್ಟರು. ಅಲ್ಲದೆ ಅರುವತ್ತು ಬಡ ಕುಟುಂಬಗಳು ಉಚಿತ ಹೊಲಿಗೆ ಯಂತ್ರ ಪಡೆದುಕೊಂಡು, ಬದುಕಲು ಏನಾದರೂ ಸಿಕ್ಕಿತಲ್ಲ ಎಂದು ಸಾರ್ಥಕ ನಗೆ ನಕ್ಕರು.

    ನಗರದ ಕಲಾ ಮಂದಿರದಲ್ಲಿ ಸೋಮವಾರ ಬಡವರ ಹಬ್ಬ. ಲಯನ್ಸ್‌ ಇಂಟರ್‌ನ್ಯಾಷನಲ್‌ ಕ್ಲಬ್‌ನ ಪ್ರಾದೇಶಿಕ ಮಹಾಮೇಳವಿದು. ಉದ್ಘಾಟಿಸಿದ್ದು ನಟ ರಮೇಶ್‌. ಲಯನ್ಸ್‌ ಈಗಾಗಲೇ ಸಾಕಷ್ಟು ಜನೋಪಕಾರಿ ಕೆಲಸ ಮಾಡುತ್ತಿದೆ. ಅದನ್ನು ವಿಸ್ತರಿಸಬೇಕು ಎಂದು ಅವರು ಸಲಹೆ ಕೊಟ್ಟರು.

    ಹೊಲಿಗೆ ಯಂತ್ರ ಮತ್ತು ಜೈಪುರದ ಕೃತಕ ಕಾಲುಗಳು ಹಾಗೂ ಊರುಗೋಲುಗಳನ್ನು ವಿತರಿಸಿ ಮಾತಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹೆಚ್‌.ವಿಶ್ವನಾಥ್‌, ಲಯನ್ಸ್‌ ಸಂಸ್ಥೆಯನ್ನು ಬಾಯಿ ತುಂಬಾ ಹೊಗಳಿದರು. ರಾಜ್ಯದ ಶಾಲೆಗಳನ್ನು ಲಯನ್ಸ್‌ ಇಂಟರ್‌ನ್ಯಾಷನಲ್‌ ಕ್ಲಬ್‌ ದತ್ತು ತೆಗೆದುಕೊಂಡು, ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಬೇಕು. ಬಡ ಮಕ್ಕಳಿಗೆ ಮಧ್ಯಾಹ್ನ ಊಟ ಕೊಟ್ಟರೂ ಅದಕ್ಕಿಂತ ಒಳ್ಳೆಯ ಕೆಲಸ ಬೇರೊಂದಿಲ್ಲ. ಆ ಮಕ್ಕಳ ಮೊಗದಲ್ಲಿ ನಗು ಮೂಡಿಸುವುದು ಸಾಧ್ಯವಾಗುತ್ತದೆ ಎಂದರು. ಭಾವುಕರಾದ ಸಚಿವರು ನಗೆ ಕುರಿತ ಹಾಡು ಹಾಡಿದರು !

    ಕಾರ್ಯಕ್ರಮದಲ್ಲಿ 1200ಕ್ಕೂ ಹೆಚ್ಚು ಲಯನ್ಸ್‌ ಪ್ರತಿನಿಧಿಗಳು ಬಾಗವಹಿಸಿದ್ದರು.

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more