• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನಪ್ರಿಯತೆಯ ತುತ್ತತುದಿಯಲ್ಲಿರುವ ಎಸ್‌.ಎಂ. ಕೃಷ್ಣ ನಂ.1 ಮುಖ್ಯಮಂತ್ರಿ

By Staff
|

ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ಭಾರತ ದೇಶದ ನಂ1 ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಮತ್ತೊಮ್ಮೆ ಪಾತ್ರರಾಗಿದ್ದಾರೆ. ಇಂಡಿಯಾ ಟುಡೆ ಆಂಗ್ಲ ನಿಯತಕಾಲಿಕ ನಡೆಸಿದ ಸಮೀಕ್ಷೆಯಲ್ಲಿ ಕೃಷ್ಣ ಮತ್ತೊಮ್ಮೆ ನಂ.1 ಆಗಿ ಹೊರಹೊಮ್ಮಿದ್ದಾರೆ.

ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಇದೇ ಪತ್ರಿಕೆ ನಡೆಸಿದ ಅರ್ಹ ಮತದಾರರ ಸಮೀಕ್ಷೆಯಲ್ಲಿ ಕೃಷ್ಣ ಅವರು ಅತ್ಯುತ್ತಮ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆರು ತಿಂಗಳ ನಂತರವೂ ಆ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಕೃಷ್ಣ ಯಶಸ್ವಿಯಾಗಿದ್ದಾರೆ.

ಸಮೀಕ್ಷೆಯ ರೀತ್ಯ ಕೃಷ್ಣ ನಂತರದ ಸ್ಥಾನಗಳನ್ನು ಅಸ್ಸಾಂ ಮುಖ್ಯಮಂತ್ರಿ ತರುಣ್‌ ಗೊಗೋಯ್‌ (ದ್ವಿತೀಯ), ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ (ತೃತೀಯ) ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ(ನಾಲ್ಕನೇ) ಪಡೆದಿದ್ದಾರೆ.

ನಿಯತ ಕಾಲಿಕವು ಈ ಸಮೀಕ್ಷೆಗಾಗಿ ಹದಿನಾರು ರಾಜ್ಯಗಳ 17,522 ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರ್ಹ ಮತದಾರರನ್ನು ಭೇಟಿ ಮಾಡಿತ್ತು. ಶೇ.8ರಷ್ಟು ಮತದಾರರು ಕರ್ನಾಟಕದ ಮುಖ್ಯಮಂತ್ರಿ ಕೃಷ್ಣ ಅವರನ್ನು ಅತ್ಯುತ್ತಮ ಮುಖ್ಯಮಂತ್ರಿ ಎಂದೂ, ಶೇ.44ರಷ್ಟು ಮತದಾರರು ಉತ್ತಮ ಮುಖ್ಯಮಂತ್ರಿಯೆಂದೂ, ಶೇ.28ರಷ್ಟು ಮತಾದರರು ಸಾಮಾನ್ಯ ಮುಖ್ಯಮಂತ್ರಿ ಎಂದೂ ಅಭಿಪ್ರಾಯಪಟ್ಟರು.

ಈ ಪೈಕಿ ಕೃಷ್ಣ ಅವರನ್ನು ಅತ್ಯುತ್ತಮ ಮುಖ್ಯಮಂತ್ರಿ ಅಲ್ಲ ಎಂದವರನ್ನು ಪ್ರತ್ಯೇಕವಾಗಿ ಗುರುತಿಸಲಾಗಿದ್ದು, ಇವರ ಸಂಖ್ಯೆ ಕೇವಲ ಶೇ.9. ಇವರು ಕೃಷ್ಣ ಅವರ ಮೃದು ಧೋರಣೆ, ಚುನಾವಣೆ ಕಾಲದಲ್ಲಿ ನೀಡಿದ ಭರವಸೆ ಈಡೇರಿಸದಿರುವುದು ಹಾಗೂ ರಾಜ್ಯದ ಆರ್ಥಿಕ ದುಸ್ಥಿತಿ ಎದುರಿಸುವ ಪ್ರಕ್ರಿಯೆಯಲ್ಲಿನ ದೌರ್ಬಲ್ಯಗಳನ್ನು ಪಟ್ಟಿಮಾಡಿದ್ದಾರೆ.

ಆದರೆ, ಕೃಷ್ಣರನ್ನು ಉತ್ತಮ ಮುಖ್ಯಮಂತ್ರಿ ಎಂದ ಬಹುಮತದ ಮಂದಿ ಎಸ್‌.ಎಂ.ಕೃಷ್ಣರ ನಯ-ನಾಜೂಕಿನ ಆಡಳಿತ, ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಇಟ್ಟಿರುವ ನಂಬಿಕೆ, ರಾಜ್ಯದ ಬಗ್ಗೆ ಅವರಿಗಿರುವ ಕಾಳಜಿ, ಸಂಘಟಿತ ಕಾರ್ಯಾಚರಣೆ, ಆಡಳಿತ ಚಾಣಾಕ್ಷತೆ ಹಾಗೂ ಅವರ ಆಧುನಿಕ ದೃಷ್ಟಿಕೋನವನ್ನು ಮನಸಾರೆ ಹೊಗಳಿದ್ದಾರೆ.

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more