ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲೂರು ಬಳಿ ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಈ ಜ್ವರ ಯಾವುದು?

By Staff
|
Google Oneindia Kannada News

ಮಾಲೂರು: ಇಲ್ಲಿಗೆ ಸಮೀಪದ ಬೈಯಪ್ಪನಹಳ್ಳಿ ಮತ್ತು ಕಾಂಚಾಳ ಗ್ರಾಮಗಳಲ್ಲಿ ವಿಚಿತ್ರವಾದ ಜ್ವರವೊಂದು ಕಾಣಿಸಿಕೊಂಡಿದ್ದು, ಸುಮಾರು 96 ಜನರು ಅಸ್ವಸ್ಥರಾಗಿದ್ದಾರೆ. ಯಾವುದೀ ಜ್ವರ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಕಾಂಚಾಳ ಗ್ರಾಮದ ಶಾಲೆಯ ಮಕ್ಕಳು ಇತ್ತೀಚೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಪ್ರವಾಸದಿಂದ ಮಕ್ಕಳು ಹಿಂತಿರುಗಿದ ಬಳಿಕ ಈ ಎರಡೂ ಗ್ರಾಮಗಳಲ್ಲಿ ಜ್ವರ ಕಾಣಿಸಿಕೊಂಡಿತು. ಕಳೆದ ಮೂರು ನಾಲ್ಕು ದಿನದಿಂದ ಈ ಜ್ವರ ಎರಡೂ ಗ್ರಾಮದ ಜನರನ್ನು ಕಾಡುತ್ತಿದೆ.

ಶುಕ್ರವಾರ ಜ್ವರ ತೀವ್ರಗೊಂಡಿತು. ಕಾಂಚಾಳ ಗ್ರಾಮದಲ್ಲಿ 18 ಮತ್ತು ಬೈಯಪ್ಪನ ಹಳ್ಳಿಯಲ್ಲಿ 78 ಮಂದಿ ಜ್ವರಪೀಡಿತರಾಗಿದ್ದಾರೆ. ವಿಷಯ ತಿಳಿದ ತಾಲೂಕು ವೈದ್ಯಾಧಿಕಾರಿ ಡಾ. ರಾಜೀವ್‌ ಅವರು ಐವರು ವೈದ್ಯರ ತಂಡವನ್ನು ಈ ಎರಡೂ ಗ್ರಾಮಗಳಿಗೆ ಕಳುಹಿಸಿದ್ದು, ರೋಗ ಪೀಡಿತರ ರಕ್ತಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಭಾನುವಾರ ಸಂಜೆ ಕಳುಹಿಸಲಾಗಿದೆ. ವೈದ್ಯರ ತಂಡ ರೋಗಿಗಳ ಶುಶ್ರೂಷೆಯಲ್ಲಿ ನಿರತವಾಗಿದೆ.

(ಇನ್‌ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X