• search

ಅತ್ತ ಮಳೆಗೆ 11 ಜನರ ಬಲಿ, ಇತ್ತ ಮಳೆಯಿಲ್ಲದ ನಾಡಲ್ಲಿ ಕಾಲರಾ ಭೀತಿ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : ಇದೇ ಸೃಷ್ಟಿಯ ವೈಚಿತ್ರ್ಯ. ಇತ್ತ ಕರ್ನಾಟಕ ಮಳೆಯಿಲ್ಲದೆ ಬರದಿಂದ ಬರಡಾಗುತ್ತಿದ್ದರೆ, ಅತ್ತ ತಮಿಳುನಾಡಿನಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ 11 ಜನರನ್ನು ಬಲಿತೆಗೆದುಕೊಂಡಿದೆ.

    ಮದುರೈ, ತಿರುಚಿನಾಪಲ್ಲಿ, ಪಡಲೂರು, ಪುಡುಕೊಟ್ಟೈ, ತಂಜಾವೂರು, ರಾಮೇಶ್ವರಗಳಲ್ಲಿ ನೀರು ಪ್ರವಾಹದಂತೆ ಪಟ್ಟಣಕ್ಕೂ ನುಗ್ಗುತ್ತಿದೆ. ತಮಿಳುನಾಡಿನ ಕಾವೇರಿ ಜಲಾನಯ ಪ್ರದೇಶದಲ್ಲಿ ಭತ್ತದ ಬೆಳೆ ಕುಯಿಲಿಗೂ ತೊಡಕಾಗಿದೆ. ಮರಗಿಡಗಳು ಬುಡಮೇಲಾಗಿವೆ.

    ಇತ್ತ ಮಳೆಯಿಲ್ಲದೆ ಭೀಕರ ಕ್ಷಾಮದಿಂದ ತತ್ತರಿಸಿರುವ ಧಾರವಾಡ ಜಿಲ್ಲೆಯಲ್ಲಿ ಮೊದಲ ಕಾಲರಾ ಪ್ರಕರಣ ವರದಿಯಾಗಿದ್ದು, ಜನತೆ ಹಾಗೂ ಜಿಲ್ಲಾಡಳಿತ ತೀವ್ರ ಆತಂಕಕ್ಕೆ ಒಳಗಾಗಿದೆ. ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲಘಟಕಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ವ್ಯಕ್ತಿ ಕಾಲರಾ ಪೀಡಿತನಾಗಿದ್ದಾನೆ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

    ಈ ಹಿನ್ನೆಲೆಯಲ್ಲಿ ಕಾಲರಾ ರೋಗ ಹಬ್ಬದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಹೊಟೆಲ್‌ಗಳಲ್ಲಿ ಬಿಸಿನೀರು ನೀಡುವಂತೆ ಹಾಗೂ ಕತ್ತರಿಸಿದ ಹಣ್ಣು ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ. ಕಲುಷಿತ ನೀರು ಕುಡಿಯದಂತೆ ಜನರಿಗೆ ಮನವಿ ಮಾಡಲಾಗಿದೆ.

    (ಇನ್‌ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more