ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳವಡಿ ಬಳಿ ಕಂದಕಕ್ಕೆ ಟೆಂಪೋ ಉರುಳಿ 5 ಮಹಿಳೆಯರ ಸಾವು

By Staff
|
Google Oneindia Kannada News

ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳವಡಿ ಬಳಿ ಕಂದಕಕ್ಕೆ ಟೆಂಪೋ ಉರುಳಿ ಬಿದ್ದು , ಐವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಅಪಘಾತದಲ್ಲಿ 21 ಮಂದಿ ಗಾಯಗೊಂಡಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತಪಟ್ಟವರನ್ನು ಇಂದೂಬಾಯಿ (50), ಗುಂಜಲಿಬಾಯಿ (40), ಮಲ್ಲವ್ವ ಸುತಾರ (50), ರುದ್ರವ್ವ ಮಾದರ (65) ಹಾಗೂ ರುಕ್ಮಿಣಿ ಸುತಾರ (50) ಎಂದು ಗುರ್ತಿಸಲಾಗಿದೆ.

ಮೃತಪಟ್ಟವರ ಪೈಕಿ ರುಕ್ಮಿಣಿ ಸುತಾರಾ ಎಂಬುವರು ಬೆಳಗಾವಿಯವರು. ಉಳಿದೆಲ್ಲರೂ ಖಾವಾಪುರ ತಾಲ್ಲೂಕಿನ ತೋಪಿನ ಕಟ್ಟಿ ಗ್ರಾಮದವರು. ಸವದತ್ತಿಯ ಯಲ್ಲಮ್ಮ ದೇವಿ ದರ್ಶನಕ್ಕೆಂದು ಖಾನಾಪುರದಿಂದ ಟೆಂಪೋ ಹೋಗುತ್ತಿದ್ದಾಗ ಈ ಅಪಘಾತ ಸಂಭಸಿವಿದೆ. ಹಠಾತ್ತನೆ ಎದುರು ಬಂದ ನಾಯಿಯನ್ನು ಬಚಾವ್‌ ಮಾಡಲು ಚಾಲಕ ಬ್ರೇಕ್‌ ಹಾಕಿದಾಗ, ಟೆಂಪೋ ಪಲ್ಟಿ ಹೊಡೆಯಿತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X