ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ ಕೊನೆಯಾಳಗೆ ಇನ್ಸಾಟ್‌ 3ಸಿ ಕಾರ್ಯಾರಂಭ : ಕಸ್ತೂರಿರಂಗನ್‌

By Staff
|
Google Oneindia Kannada News

INSAT-3cಹಾಸನ : ಫ್ರೆಂಚ್‌ ಗಯಾನಾದ ಕೌರು ಉಡಾವಣೆ ಕೇಂದ್ರದಿಂದ ಜ.24ರಂದು ಅಂತರಿಕ್ಷಕ್ಕೆ ಯಶಸ್ವಿಯಾಗಿ ಜಿಗಿದ ಇನ್ಸಾಟ್‌ 3 ಸಿ ಉಪಗ್ರಹವು ಸ್ಥಿರಕಕ್ಷೆ ತಲುಪಿದ್ದು, ಫೆಬ್ರವರಿ ಕೊನೆಯಾಳಗೆ ಕಾರ್ಯಾರಂಭ ಮಾಡಲಿದೆ. ಈ ವಿಷಯವನ್ನು ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಅಧ್ಯಕ್ಷ ಕೆ. ಕಸ್ತೂರಿ ರಂಗನ್‌ ತಿಳಿಸಿದ್ದಾರೆ.

ಬಾಹ್ಯಾಕಾಶಕ್ಕೆ ಹಾರಿದ 9 ನಿಮಿಷಗಳಲ್ಲೇ ಸಂದೇಶ ರವಾನಿಸಿದ ಈ ಉಪಗ್ರಹ ಈಗಾಗಲೇ 36 ಸಾವಿರ ಕಿ.ಮೀಟರ್‌ ದೂರದ ಕಕ್ಷೆಯನ್ನು ತಲುಪಿದ್ದಲ್ಲದೆ ಸ್ಥಿರಕಕ್ಷೆಯಲ್ಲಿ ಸೇರಿದೆ. ಫೆ.8ರಂದು ಇದನ್ನು ನಿಗದಿತ ಕಕ್ಷೆಗೆ ತರಲಾಗುವುದು, ಆಗ ಉಪಗ್ರಹವು ಭಾರತದ ಮೇಲೆ ಅಕ್ಷಾಂಶ 77 ಡಿಗ್ರಿಯಲ್ಲಿ ಸ್ಥಿರಗೊಳ್ಳಲಿದೆ ಎಂದು ಅವರು ವಿವರಿಸಿದರು.

ಈಗ ಉಪಗ್ರಹದಲ್ಲಿ 448 ಕೆ.ಜಿ. ಇಂಧನ ಇದ್ದು, 15 ವರ್ಷಗಳ ಕಾಲ ಧಾರಾಳವಾಗಿ ಕಾರ್ಯನಿರ್ವಹಿಸುತ್ತದೆ. ಈ ವರ್ಷಾಂತ್ಯದೊಳಗೆ ಇನ್ಸಾಟ್‌ 3 ಎ, ಮತ್ತು ಇನ್ಸಾಟ್‌ 3 ಇ ಉಪಗ್ರಹಗಳನ್ನು ಉಡಾಯಿಸಲಾಗುವುದು ಎಂದು ಅವರು ಹೇಳಿದರು.

ಈ ವರ್ಷದ ಕೊನೆಯಾಳಗೆ ನಿಷ್ಕಿೃಯಗೊಳ್ಳಲಿರುವ ಇನ್ಸಾಟ್‌ 2ಸಿ ಉಪಗ್ರಹ ಕಾರ್ಯವನ್ನು ಇನ್ಸಾಟ್‌ 3 ಸಿ ವಹಿಸಿಕೊಳ್ಳಲಿದೆ. ಈ ಅವಧಿಯಲ್ಲಿ ಇನ್ಸಾಟ್‌ 2 ಸಿ ದೊರೆಯುತ್ತಿರುವ ಸೌಲಭ್ಯಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದು ಅವರು ಹೇಳಿದರು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X