ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿಗೆ ಗುಲ್ಬರ್ಗಾ ವಿವಿ ಗೌರವ ಡಾಕ್ಟರೇಟ್‌

By Staff
|
Google Oneindia Kannada News

ಗುಲ್ಬರ್ಗಾ : ಇನ್ಫೋಸಿಸ್‌ ಪ್ರತಿಷ್ಠಾನದ ಧರ್ಮದರ್ಶಿ ಸುಧಾ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಲು ಗುಲ್ಬರ್ಗಾ ವಿಶ್ವ ವಿದ್ಯಾಲಯ ನಿರ್ಧರಿಸಿದೆ.

ಇಪ್ಪತ್ತನೇ ಘಟಿಕೋತ್ಸವ ಸಮಾರಂಭ(ಜ.31.01.01)ದಲ್ಲಿ ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗುವುದು ಎಂದು ಗುಲ್ಬರ್ಗಾ ವಿವಿ ಕುಲಪತಿ ಎಂ.ವಿ. ನಾಡಕರ್ಣಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಇನ್ಫೋಸಿಸ್‌ ಪ್ರತಿಷ್ಠಾನದ ಮೂಲಕ ಸುಧಾ ಮೂರ್ತಿ ಅವರು ಸಲ್ಲಿಸಿರುವ ಸಮಾಜ ಸೇವೆ ಹಾಗೂ ಅವರ ಸಾಹಿತ್ಯ ಸೇವೆಯನ್ನು ವಿಶ್ವ ವಿದ್ಯಾಲಯ ಗುರ್ತಿಸಿದೆ.

ಘಟಿಕೋತ್ಸವ ಭಾಷಣ ಮಾಡುವ ಗೌರವ ಕೂಡ ಸುಧಾ ಮೂರ್ತಿ ಅವರಿಗೆ ದೊರೆತಿದೆ. ಘಟಿಕೋತ್ಸವದ ಅಧ್ಯಕ್ಷತೆಯನ್ನು ವಿ.ವಿ.ಯ ಸಹ ಕುಲಾಧಿಪತಿಯಾಗಿರುವ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್‌ ವಹಿಸುವರು. ಸುಧಾ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್‌ ನೀಡುವ ನಿರ್ಣಯನ್ನು ವಿ.ವಿ. ಕುಲಾಧಿಪತಿಗಳಾದ ರಾಜ್ಯಪಾಲೆ ರಮಾದೇವಿ ಅನುಮೋದಿಸಿದ್ದಾರೆ ಎಂದು ನಾಡಕರ್ಣಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X