ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ತಾಲ್ಲೂಕುಗಳ ರಚನೆ: ಸರ್ಕಾರದ ಪರಿಶೀಲನೆಯಲ್ಲಿ 24 ಪ್ರಸ್ತಾವನೆ

By Staff
|
Google Oneindia Kannada News

ಬೆಂಗಳೂರು : ರಾಜ್ಯದಲ್ಲಿನ ದೊಡ್ಡ ತಾಲ್ಲೂಕುಗಳನ್ನು ಪುನರ್ರಚಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ.

ಆಡಳಿತದ ಅನುಕೂಲ, ಕಾನೂನು ಸ್ಥಿತಿ ಹಾಗೂ ಪ್ರಾದೇಶಿಕ ಸಾಮಾಜಿಕ ಅಂಶಗಳನ್ನು ಹೊಸ ತಾಲ್ಲೂಕುಗಳ ರಚನೆಯ ಹಿನ್ನೆಲೆಯಲ್ಲಿ ಪರಿಗಣಿಸಲಾಗುವುದು ಎಂದು ಕಂದಾಯ ಖಾತೆ ಸಚಿವ ಎಚ್‌.ಸಿ. ಶ್ರೀಕಂಠಯ್ಯ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು. ಹೊಸ ತಾಲ್ಲೂಕು ರಚನೆ ಕುರಿತು ಪ್ರಸ್ತಾಪಿಸಿದ ಬೀರೂರು ಶಾಸಕ ಕೆ.ಬಿ.ಮಲ್ಲಿಕಾರ್ಜುನ ಅವರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸುತ್ತಿದ್ದರು.

ಅತಿ ದೊಡ್ಡ ತಾಲ್ಲೂಕುಗಳ ಪುನರ್ರಚನೆ ಕೋರಿ 24 ಜಿಲ್ಲೆಗಳಿಂದ ಮನವಿ ಪ್ರಸ್ತಾವನೆಗಳು ಸರ್ಕಾರಕ್ಕೆ ಬಂದಿವೆ. ಇವುಗಳನ್ನು ಸರ್ಕಾರ ಪರಿಶೀಲಿಸುವುದು ಎಂದು ಬಾಗಲಕೋಟೆ ಶಾಸಕ ಪಿ.ಎಚ್‌.ಪೂಜಾರ್‌ ಅವರಿಗೆ ನೀಡಿರುವ ಲಿಖಿತ ಉತ್ತರದಲ್ಲಿ ಶ್ರೀಕಂಠಯ್ಯ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X