ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಐವರು ಕಲಾವಿದರಿಗೆ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ

By Staff
|
Google Oneindia Kannada News

ಕೇಂದ್ರ ಹಾಗೂ ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಪ್ರಶಸ್ತಿಗೆ ಆಯ್ಕೆಯಾಗಿರುವವರ ಪೈಕಿ ಮಂಗಳೂರಿನವರದೇ ಸಿಂಹ ಪಾಲು.

ಅಕಾಡೆಮಿ ಅಧ್ಯಕ್ಷ ಪೀಟರ್‌ ಲೂಯಿಸ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವವರ ಹೆಸರುಗಳನ್ನು ಪ್ರಕಟಿಸಿದರು.

ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವವರು : ಶಿವಮೊಗ್ಗದ ವಿ.ಲಿಂಗರಾಜು (ಡ್ರಾಯಿಂಗ್‌), ಬೆಂಗಳೂರಿನ ವಿ.ಹರೀಶ್‌ (ಗ್ರಾಫಿಕ್‌), ಕೊಪ್ಪಳದ ರಾಜು ತೇರದಾಳ (ಅಕ್ರಲಿಕ್‌), ಮಂಗಳೂರಿನ ತಿಲಕ್‌ಕುಮಾರ್‌, ತಿಪಟೂರಿನ ಎನ್‌.ವಿಷ್ಣುಕುಮಾರ್‌ (ಮಿಶ್ರಮಾಧ್ಯಮ) ಮತ್ತು ಗದಗಿನ ಎನ್‌.ಎಸ್‌.ಪ್ರಸಾದ್‌ (ಪೇಂಟಿಂಗ್‌). ಪ್ರಶಸ್ತಿಯು 10 ಸಾವಿರ ರುಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಕೇಂದ್ರ ಪ್ರಶಸ್ತಿಗೆ ಆಯ್ಕೆಯಾಗಿರುವವರು : ಮಂಗಳೂರಿನ ಸುದೀಪ್‌ಬಲ್ಪನಿ (ಗ್ರಾಫಿಕ್‌) ಹಾಗೂ ನಮಿತಾ ರಾಘವ್‌ (ಪೇಂಟಿಂಗ್‌), ಮಂಡ್ಯದ ಬಿ.ಸಿ.ದೇವರಾಜ್‌ (ಅಕ್ರಲಿಕ್‌), ಮೈಸೂರಿನ ವೀರಣ್ಣ ಎಂ ಅರ್ಕಸಾಲಿ (ಶಿಲ್ಪ ) ಮತ್ತು ಬೆಂಗಳೂರಿನ ನಾಗಪ್ಪ ಪ್ರಧಾನಿ (ಪೇಂಟಿಂಗ್‌).

ಬರುವ ಫೆಬ್ರವರಿ 23ರಂದು ಹಾಸನದ ಕಲಾ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಐವರು ಹಿರಿಯ ಕಲಾವಿದರು ಮತ್ತು ಒಬ್ಬ ಕಲಾ ಪೋಷಕರನ್ನು ಸನ್ಮಾನಿಸಲಾಗುವುದು. 1964ರಲ್ಲಿ ಅಕಾಡೆಮಿ ಅಸ್ತಿತ್ವಕ್ಕೆ ಬಂದ ನಂತರ ಇದೇ ಪ್ರಥಮ ಬಾರಿಗೆ ಹಾಸನದಲ್ಲಿ ಸಮಾರಂಭ ನಡೆಯಲಿದೆ ಎಂದು ಲೂಯಿಸ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X