ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬಳಿಯ ನೃತ್ಯಗ್ರಾಮದಲ್ಲಿ ಫೆ. 2ರಂದು ವಸಂತ ಹಬ್ಬ

By Staff
|
Google Oneindia Kannada News

ಹೆಸರಘಟ್ಟ : ನಗರದ ಹೊರ ವಲಯದಲ್ಲಿ ಒಡಿಸ್ಸಿ ನೃತ್ಯಗಾತಿ ಪ್ರೊತಿಮಾ ಬೇಡಿ ಸ್ಥಾಪಿಸಿದ ನೃತ್ಯಗ್ರಾಮದಲ್ಲಿ ಫೆಬ್ರವರಿ 2ರಂದು ಶಾಸ್ತ್ರೀಯ ಕಲಾ ಉತ್ಸವ ವಸಂತ ಹಬ್ಬವನ್ನು ಆಯೋಜಿಸಲಾಗಿದೆ.

ನೃತ್ಯಗ್ರಾಮ ಆರಂಭವಾದ ವರ್ಷ 1990ರಲ್ಲಿ ಮೂರು ಸಾವಿರ ಮಂದಿ ಪ್ರೇಕ್ಷಕರ ಸಮ್ಮುಖದಲ್ಲಿ ವಸಂತ ಹಬ್ಬ ನಡೆದಿತ್ತು. ಆದರೆ ಕಳೆದ ವರ್ಷ ವಸಂತ ಹಬ್ಬಕ್ಕೆ ಬಂದ ವೀಕ್ಷಕರ ಸಂಖ್ಯೆ 25 ಸಾವಿರ. ದೂರದರ್ಶನ ಮತ್ತು ಇತರ ಖಾಸಗಿ ಚಾನೆಲ್‌ಗಳಲ್ಲಿ ಏರ್ಪಡಿಸಿದ್ದ ನೇರ ಪ್ರಸಾರವನ್ನು ಕಂಡು ಆನಂದಿಸಿದವರು ಮಿಲಿಯಗಟ್ಟಲೆ ಜನ.

ವಸಂತ ಹಬ್ಬದಲ್ಲಿ ಪ್ರಥಮ ಬಾರಿಗೆ ವಾರ್ಸಿ ಸಹೋದರರಿಂದ ಕವಾಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಾ. ಸುಮಾ ಸುಧೀಂದ್ರ ತರಂಗಿಣಿ ವೀಣೆಯನ್ನು ಪರಿಚಯಿಸುವರು. ಕಾರ್ಯಕ್ರಮ ಫೆಬ್ರವರಿ 2ರ ಶನಿವಾರ ಸಂಜೆ 6.30ಕ್ಕೆ ಆರಂಭವಾಗಿ ಭಾನುವಾರ ಮುಂಜಾನೆಯವರೆಗೆ ಮುಂದುವರೆಯುತ್ತದೆ.

ವಸಂತ ಹಬ್ಬ-2002ರಲ್ಲಿ ಕಾರ್ಯಕ್ರಮ ಪ್ರಸ್ತುತ ಪಡಿಸಲಿರುವ ದೇಶದ ಪ್ರಖ್ಯಾತ ಕಲಾವಿದರ ಪಟ್ಟಿ ತಯಾರಾಗಿದೆ- ಅದಿತಿ ಮಂಗಳದಾಸ್‌ ಮತ್ತು ದೃಷ್ಟಿಕೋನ ಡಾನ್ಸ್‌ ಫೌಂಡೇಶನ್‌(ಕಥಕ್‌), ಪದ್ಮಿನಿ ರವಿ(ಭರತ ನಾಟ್ಯಂ), ನವತೇಜ್‌ ಸಿಂಗ್‌ ಜೋಹರ್‌ ಮತ್ತು ಜೆಮಿಮಾ ಹಾಡ್ಲೆ( ಸಮಕಾಲೀನ ನೃತ್ಯ), ಬೆಳ್ಳಿಯಪ್ಪ ಮತ್ತು ತಂಡದವರಿಂದ ಡೊಳ್ಳು ಕುಣಿತ, ಕೆರೆ ಮನೆ ಶಂಭ ಹೆಗ್ಗಡೆ ನೇತೃತ್ವ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ, ಅರುಣ್‌ ಸಾಯಿರಾಮ್‌(ಕರ್ನಾಟಕ ಶಾಸ್ತ್ರೀಯ ಸಂಗೀತ), ಶ್ರೀನಿವಾಸ ಶತಪತಿ(ಕೊಳಲು) . ಇನ್ನಷ್ಟು ಕಾರ್ಯಕ್ರಮಗಳು ಪ್ರೇಕ್ಷಕರಿಗಾಗಿ ಸಿದ್ಧವಾಗುತ್ತಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X