ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಪ್ಪ ಗಾತ್ರದ ಪ್ರಿಂಟೆಡ್‌ ಟೆಲಿಫೋನ್‌ ಡೈರೆಕ್ಟರಿ ಬದಲು ಕಾಂಪ್ಯಾಕ್ಟ್‌ ಡಿಸ್ಕ್‌

By Staff
|
Google Oneindia Kannada News

ಮೈಸೂರು : ದಪ್ಪಗಾತ್ರದ ಮುದ್ರಿತ ಟೆಲಿಫೋನ್‌ ಡೈರೆಕ್ಟರಿಗಳ ಬದಲು ತನ್ನ ಗ್ರಾಹಕರಿಗೆ ಕಾಂಪ್ಯಾಕ್ಟ್‌ ಡಿಸ್ಕ್‌ (ಸಿಡಿ)ನಲ್ಲಿ ಅಳವಡಿಸಲಾದ ಟೆಲಿಫೋನ್‌ ಡೈರೆಕ್ಟರಿಯನ್ನು ಪೂರೈಸಲು ಮುಂದಾಗಿರುವ, ಕರ್ನಾಟಕ ರಾಜ್ಯ ಟೆಲಿಕಾಂ ವೃತ್ತವು ಪ್ರಗತಿಯ ಪಥದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ.

ಈ ಸಿಡಿಯ ನೆರವಿನಿಂದ ಮೈಸೂರು ಜಿಲ್ಲೆಯ ಸಣ್ಣ ಹಳ್ಳಿಯಲ್ಲಿರುವ ಟೆಲಿಫೋನ್‌ ಬಳಕೆದಾರನು ಬಿಜಾಪುರ ಜಿಲ್ಲೆಯ ಬಾದಾಮಿ ಅಥವಾ ಇನ್ನಾವುದೇ ಊರಿನಲ್ಲಿರುವ ಟೆಲಿಫೋನ್‌ ಬಳಕೆದಾರನ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪಡೆಯಬಹುದಾಗಿದೆ. ಅಂತೆಯೇ ಬಾದಾಮಿಯ ಗ್ರಾಹಕನಿಗೆ ಮೈಸೂರಿನ ಗ್ರಾಹಕನ ಮಾಹಿತಿಯೂ ದೊರಕಲಿದೆ. ಈ ವಿಷಯವನ್ನು ಕರ್ನಾಟಕ ಟೆಲಿಕಾಂ ಜನರಲ್‌ ಮ್ಯಾನೇಜರ್‌ ಕೆ. ಪದ್ಮನಾಭನ್‌ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಂಗಳವಾರ ಟೆಲಿಫೋನ್‌ ಡೈರೆಕ್ಟರಿಯ ಸಿಡಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಸಿಡಿ ಹೊರತರುವಲ್ಲಿ ಶ್ರಮಿಸಿದ ಮೈಸೂರು ಟೆಲಿಕಾಂ ಜಿಲ್ಲೆಯನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಟೆಲಿಕಾಂ ಜಿಲ್ಲೆಯ ಜನರಲ್‌ ಮ್ಯಾನೇಜರ್‌ ಫಾರೂಕ್‌ ಅಮೀನ್‌ ಅವರು, ಕರ್ನಾಟಕ ಟೆಲಿಕಾಂ ವೃತ್ತದ ಒಟ್ಟು ಸಾಮರ್ಥ್ಯ 29.9 ಲಕ್ಷಗಳಾಗಿದ್ದು, ಈಹೊತ್ತು ಇರುವ ಸಂಪರ್ಕಗಳ ಸಂಖ್ಯೆ 24.4ಲಕ್ಷ. ಸಿಡಿಯಲ್ಲಿ ಈ ಎಲ್ಲ ಮಾಹಿತಿಯನ್ನೂ ಅಳವಡಿಸಲಾಗಿದೆ ಎಂದು ವಿವರಿಸಿದರು.

ಟೆಲಿಫೋನ್‌ ಗ್ರಾಹಕರಿಗೆ ಈ ಸಿಡಿಗಳನ್ನು ಸಾಮಾನ್ಯ ಟೆಲಿಫೋನ್‌ ಡೈರೆಕ್ಟರಿಗಳ ಬದಲಾಗಿ ಉಚಿತವಾಗಿ ನೀಡಲಾಗುವುದು. ಸಿಡಿಗಳು ಮಾರಟಕ್ಕೂ ಲಭ್ಯವಿದ್ದು, ಅದಕ್ಕೆ 50 ರುಪಾಯಿ ದರ ನಿಗದಿ ಪಡಿಸಲಾಗಿದೆ ಎಂದು ಅವರು ತಿಳಿಸಿದರು.

(ಪಿ.ಟಿ.ಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X