ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊನ್ನೆಯಷ್ಟೆ ಪಾಕಿಸ್ತಾನದಲ್ಲಿ ಒಸಾಮ ಕಿಡ್ನಿ ಡಯಾಲಿಸಿಸ್‌ ಮಾಡಿಸಿಕೊಂಡನಂತೆ !

By Staff
|
Google Oneindia Kannada News

ವಾಷಿಂಗ್ಟನ್‌ : ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್‌ ಲ್ಯಾಡೆನ್‌ ಮೊನ್ನೆಯಷ್ಟೆ ಸದ್ದಿಲ್ಲದೆ ಪಾಕಿಸ್ತಾನದ ಆಸ್ಪತ್ರೆಯಾಂದರಲ್ಲಿ ಮೂತ್ರಪಿಂಡ ರಕ್ತ ಶುದ್ಧೀಕರಣ (ಡಯಾಲಿಸಿಸ್‌) ಮಾಡಿಸಿಕೊಂಡು ಹೋಗಿದ್ದಾನೆ. ಹಾಗಂತ ಸಿಬಿಎಸ್‌ ನ್ಯೂಸ್‌ ವರದಿ ಮಾಡಿದೆ.

ಪಾಕಿಸ್ತಾನಿ ಮಿಲಿಟರಿ ಪಡೆಯ ನೆರವಿನಿಂದ ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯಾಂದರಲ್ಲಿ ಒಸಾಮ ಚಿಕಿತ್ಸೆ ಪಡೆದಿದ್ದಾನೆ. ಅದು ರಾತ್ರಿ ಸಮಯ. ಇದ್ದಕ್ಕಿದ್ದಂತೆ ಯೂರಾಲಜಿ ವಿಭಾಗದ ಸಿಬ್ಬಂದಿ ವರ್ಗ ಬದಲಾಯಿತು. ಬೇರೆ ವೈದ್ಯರ ತಂಡವೇ ಅಲ್ಲಿಗೆ ಬಂತು. ಒಬ್ಬ ಗಡ್ಡಧಾರಿ ಪೇಷಂಟ್‌. ಎಲ್ಲೋ ನೋಡಿದ್ದೇನಲ್ಲ ಅನಿಸಿತು. ಸ್ಪಷ್ಟವಾಗಿ ನೋಡಲಾಗಲಿಲ್ಲ. ಆಮೇಲೆ ಗಮನಿಸಿದರೆ ಅದು ಒಸಾಮನ ಪ್ರತಿರೂಪ ! ಅದು ಒಸಾಮ ಅಲ್ಲದೆ ಬೇರಾರೂ ಅಲ್ಲ ಎಂದು ಆಸ್ಪತ್ರೆಯ ಇಬ್ಬರು ಕೆಲಸಗಾರರು ಹೇಳಿದ್ದಾರೆ.

ಒಸಾಮ ಬಿನ್‌ ಲ್ಯಾಡೆನ್‌ನನ್ನು ಸರಿಯಾಗಿ ನೋಡಿಕೊಳ್ಳಬೇಕು. ಆತನ ಮೇಲೆ ಗಮನವಿರಲಿ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಚಿಕಿತ್ಸೆ ಮುಗಿದ ನಂತರ ಇಬ್ಬರು ಮಿಲಿಟರಿ ಆಫೀಸರುಗಳು ಆದೇಶ ಕೊಟ್ಟದ್ದನ್ನು ಕಿವಿಯಾರೆ ಕೇಳಿದ್ದೇವೆ ಎಂದೂ ಕೆಲಸಗಾರರು ತಿಳಿಸಿದ್ದಾರೆ. ಬೇಹುಗಾರಿಕಾ ದಳಗಳು ಹದ್ದಿನ ಕಣ್ಣಿನಿಂದ ಕಾರ್ಯಪ್ರವೃತ್ತವಾಗಿವೆ. ಮೂತ್ರಪಿಂಡ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಒಸಾಮ ಬಿನ್‌ ಲ್ಯಾಡೆನ್‌ ಬದುಕಿರಲಾರ ಎಂದು ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಇತ್ತೀಚೆಗೆ ಹೇಳಿದ್ದರು. ಈಗ ಪಾಕಿಸ್ತಾನದಲ್ಲೇ ಆತ ಚಿಕಿತ್ಸೆ ಪಡೆದಿದ್ದಾನೆ ಎಂಬ ವಿಷಯ ಹೊರಬಿದ್ದಿರುವುದು ಕುತೂಹಲ ಕೆರಳಿಸಿದೆ.

(ಎಎಫ್‌ಪಿ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X