ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿವಿ, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ಆಗ್ರಹ

By Staff
|
Google Oneindia Kannada News

ಬೆಂಗಳೂರು : ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದರು ಅನ್ನೋ ಗಾದೆ, ದೇವನಹಳ್ಳಿಯ ಉದ್ದೇಶಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಅನ್ವಯಿಸತ್ತೆ. ಕಳೆದ ಬುಧವಾರವಷ್ಟೇ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವರ್ತಕರ ಶೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ಆರಂಭವಾಗಿದೆ.

ಈ ಪ್ರಕ್ರಿಯೆಗೂ ಮೊದಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು ಎಂಬ ವಾದ -ವಿವಾದ - ಜಿಜ್ಞಾಸೆ, ಹೋರಾಟ ಎಲ್ಲಾ ನಡೆದು ತಣ್ಣಗಾಗಿತ್ತು. ಆದರೆ ಈ ಹೊತ್ತು ಕನಕಪುರ ಉಪಚುನಾವಣೆಯ ಬಿಸಿಯ ಜೊತೆಗೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಹೆಸರಿನ ವಿಷಯದ ಕಾವೂ ಏರುತ್ತಿದೆ.

ಕಳೆದ ಬುಧವಾರ ನಡೆದ ಶೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾವುದೇ ವ್ಯಕ್ತಿಯ ಹೆಸರು ಇಡುವುದಿಲ್ಲ ಎಂದು ಹೇಳಿದ್ದೇ ಏಕಾಏಕಿ ಹೆಸರಿನ ವಿವಾದ ಮತ್ತೆ ಗರಿಗೆದರಲು ಕಾರಣವಾಗಿದೆ.

ಮುಖ್ಯಮಂತ್ರಿಗಳ ಈ ಹೇಳಿಕೆಯನ್ನು ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿ ಉಗ್ರವಾಗಿ ಖಂಡಿಸಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೆಂಪೇಗೌಡರ ಹೆಸರನ್ನೇ ಇಡಬೇಕು ಎಂದು ಅದು ಆಗ್ರಹಿಸಿದೆ.

ದೆಹಲಿ, ಮುಂಬೈ, ಕೋಲ್ಕತ್ತಾ , ಚೆನ್ನೈ ವಿಮಾ ನಿಲ್ದಾಣಗಳಿಗೆ ಇಂದಿರಾಗಾಂಧೀ, ಶಿವಾಜಿ, ನೇತಾಜಿ ಸುಭಾಷ್‌ಚಂದ್ರ ಭೋಸ್‌, ಕಾಮರಾಜ್‌ ಹೆಸರಿಟ್ಟಿರುವಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರನ್ನೇ ಕಟ್ಟಿದ ಕೆಂಪೇಗೌಡರ ಹೆಸರಿಟ್ಟರೇನು ತಪ್ಪು ಎಂದು ಸಂಘದ ಕಾರ್ಯದರ್ಶಿ ನಿರಂಜನ ಪ್ರಶ್ನಿಸಿದ್ದಾರೆ.

ಆದರೆ, ಸರಕಾರಕ್ಕೆ ಹೆಸರಿಡುವ ವಿಷಯ ಬಿಸಿತುಪ್ಪವಾಗಿ ಪರಿಣಮಿಸಿದೆ. ಕೆಂಪೇಗೌಡರ ಹೆಸರಿಟ್ಟರೆ, ಸಂವಿಧಾನದ ಶಿಲ್ಪಿ ಅಂಬೇಡ್ಕರ್‌, ಆದಿಶಂಕರಾಚಾರ್ಯ, ರಾಜೀವ್‌ಗಾಂಧೀ, ಶ್ರೀಮತಿ ಇಂದಿರಾಗಾಂಧೀ, ಕ್ರಾಂತಿಕಾರಿ ಬಸವಣ್ಣನವರ ಹೆಸರಿಡುವಂತೆ ಆಗ್ರಹಿಸುತ್ತಿರುವವರಿಗೆ ಬೇಸರವಾಗುತ್ತದೆ. ಅವರೂ ಹೋರಾಟ ನಡೆಸುವ ಸಾಧ್ಯತೆ ಇದೆ. ಹೀಗಾಗೆ ಹೆಸರಿಡುವ ಉಸಾಬರಿಯೇ ಬೇಡ ಎಂದು ಕೃಷ್ಣ ಕೈಚೆಲ್ಲಿದ್ದು.

ಆದರೆ, ಈಗಾಗಲೇ ಯಲಹಂಕದ ಹೊನಲು ಬೆಳಕಿನ ಕಂಬದ ಬಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಬೃಹತ್‌ ಫಲಕ ಹಾಕಿರುವ ಕೆಂಪೇಗೌಡ ಕೇಂದ್ರ ಮಾತ್ರ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರ ಶಿಲ್ಪಿ ಕೆಂಪೇಗೌಡರ ಹೆಸರನ್ನೇ ಇಡಬೇಕೆಂದು ಪಟ್ಟು ಹಿಡಿದಿದೆ. ಈ ನಿಲ್ದಾಣಕ್ಕೆ ಯಾರ ಹೆಸರಿನ ಯೋಗವಿದೆಯೋ ನಾವೂ ಕಾದು ನೋಡೋಣ

ನೀವೇನಂತೀರಿ?
ವಾರ್ತಾ ಸಂಚಯ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಾಗಿದೆ !
ವರ್ತುಲ ರಸ್ತೆಗೆ ದೇವೇಗೌಡ, ಅವೆನ್ಯೂಗೆ ವೆಂಕಟಗಿರಿಗೌಡರ ಹೆಸರು
ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು?
ಕಾರವಾರದ ಬೀಚ್‌ಗೆ ಟಾಗೋರ್‌ ಹೆಸರೇಕೆ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X