ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಮುಸ್ಲಿಂಗೆ ಮಾನಸಿಕ ಕೊರಗು -ಬೊಳುವಾರ ಮಹಮದ್‌ ಕುಂಞಿ

By Staff
|
Google Oneindia Kannada News

ಬೆಂಗಳೂರು: ಜಾಗತೀಕರಣದ ನೆಪದಲ್ಲಿ ಇತರ ರಾಷ್ಟ್ರಗಳನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಅಮೆರಿಕ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಂ.ಪಿ. ಪ್ರಕಾಶ್‌ ಆಪಾದಿಸಿದ್ದಾರೆ.

ಧರ್ಮ-ಮೂಲಭೂತವಾದ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟುಗಳು ವಿಷಯದ ಕುರಿತಾಗಿ ಸಮುದಾಯ ಸಂಸ್ಥೆಯು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಎಂ.ಪಿ.ಪ್ರಕಾಶ್‌ ಮಾತನಾಡುತ್ತಿದ್ದರು. ತನ್ನ ಬೆಳ್ಳಿಹಬ್ಬದ ಅಂಗವಾಗಿ ಈ ಸಂಕಿರಣವನ್ನು ಸಮುದಾಯ ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿತ್ತು .

ಸಮ್ಮೇಳನದಲ್ಲಿ ಮಾತನಾಡಿದ ಸಾಹಿತಿ ಬೊಳುವಾರ ಮಹಮದ್‌ ಕುಂಞಿ ಅವರು, ಅಲ್ಪ ಸಂಖ್ಯಾತರ ಬಗ್ಗೆ ಬಹು ಸಂಖ್ಯಾತರು ಅಪ ನಂಬಿಕೆ ವ್ಯಕ್ತಪಡಿಸುತ್ತಿರುವ ಬಗೆಗೆ ಆತಂಕ ವ್ಯಕ್ತಪಡಿಸಿದರು. ಈ ಅಪ ನಂಬಿಕೆಯಿಂದಾಗಿ ದೇಶದ ಪ್ರತಿಯಾಬ್ಬ ಮುಸಲ್ಮಾನನೂ ಮಾನಸಿಕವಾಗಿ ಕೊರಗುತ್ತಿದ್ದಾನೆ ಎಂದು ಅವರು ಹೇಳಿದರು.

ಸಮುದಾಯದ ಬೆಳ್ಳಿಹಬ್ಬ ಉತ್ಸವ ಸಮಿತಿಯ ಅಧ್ಯಕ್ಷ ಟಿ.ಎಸ್‌.ಲೋಹಿತಾಶ್ವ, ನಾಟಕಕಾರ ಲಿಂಗದೇವರು ಹಳೆಮನೆ, ಜೆ.ಶ್ರೀನಿವಾಸಮೂರ್ತಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ಪುಸ್ತಕ ಬಿಡುಗಡೆ : ವಿಚಾರ ಸಂಕಿರಣದ ನಂತರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಾ.ತ. ಚಿಕ್ಕಣ್ಣ ಅವರ ದಂಡೆ ಕಾದಂಬರಿಯ ಎರಡನೇ ಆವೃತ್ತಿಯನ್ನು ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ದಂಡೆ ಕಾದಂಬರಿಯನ್ನು ಆಧರಿಸಿ ಎಸ್‌.ಜಿ.ಸಿದ್ಧರಾಮಯ್ಯ ಅವರು ರಚಿಸಿದ ದಂಡೆ ನಾಟಕವನ್ನು ಡಾ.ಕೆ ಮರುಳಸಿದ್ಧಪ್ಪ ಹಾಗೂ ಮಲ್ಲಿಕಾ ಘಂಟಿಯವರ ಸೊಲ್ಲೆತ್ತಿ ವಿಮರ್ಶಾ ಸಂಕಲನವನ್ನು ಎಚ್ಚೆಸ್ಕೆ ಬಿಡುಗಡೆ ಮಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X