For Daily Alerts
ಒಂದೆರಡು ದಿನದಲ್ಲೇ ವೀರಪ್ಪನ್ ಶರಣಾಗತಿ : ಬರಿ ಓಳು... ಬರಿ ಓಳು..
ಚೆನ್ನೈ : ದಂತಚೋರ, ಕಾಡುಗಳ್ಳ ವೀರಪ್ಪನ್ ಒಂದೆರಡು ದಿನದಲ್ಲೇ ಶರಣಾಗುವನೆಂಬ ಚೆನ್ನೈ ಪತ್ರಿಕೆಗಳ ವರದಿಯನ್ನು ತಮಿಳುನಾಡು ಸರಕಾರ ಸಾರಾಸಗಟಾಗಿ ತಿರಸ್ಕರಿಸಿದೆ. ನರಹಂತಕ ಬೇಷರತ್ತಾಗಿ ಶರಣಾಗತನಾಗುವ ವಿಷಯದ ಬಗ್ಗೆ ತನಗೇನೂ ತಿಳಿಯದು ಎಂದು ಹೇಳುವ ಮೂಲಕ ತಮಿಳುನಾಡು ಸರಕಾರ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.
ಪತ್ರಿಕೆಗಳು ಸುಮ್ಮನೆ ಗಾಳಿ ಸುದ್ದಿ ಹಬ್ಬಿಸುತ್ತಿವೆ. ಈ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವೆಂದು ತಮಿಳುನಾಡು ಗೃಹ ಇಲಾಖೆಯ ಉನ್ನತಾಧಿಕಾರಿಗಳು ಪ್ರಕಟಿಸಿದ್ದಾರೆ. ಕಳೆದ ತಿಂಗಳು ವೀರಪ್ಪನ್ ತಮಿಳು ನಿಯತಕಾಲಿಕವೊಂದರ ಸಂಪಾದಕರ ಮೂಲಕ ಕಳುಹಿಸಿದ ಕ್ಯಾಸೆಟ್ನಲ್ಲಿ ತಾನು ಶರಣಾಗುವ ಇಂಗಿತ ವ್ಯಕ್ತಪಡಿಸಿದ್ದ. ಆದರೆ, ಆನಂತರ ಯಾವುದೇ ಬೆಳವಣಿಗೆ ಆಗಿಲ್ಲ. ಆದಾಗ್ಯೂ ಪತ್ರಿಕೆಗಳು ದಿನಾಂಕ ಪ್ರಕಟಣೆಯಲ್ಲಿ ತೊಡಗಿವೆ ಎಂದು ಅವರು ಹೇಳಿದ್ದಾರೆ.
(ಪಿ.ಟಿ.ಐ)
ಮುಖಪುಟ / ವೀರಪ್ಪನ್ ಶಿಕಾರಿ