ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆಮುಖ: ಕೇವಲ 5 ವರ್ಷದ ಅವಧಿಗೆ ಗುತ್ತಿಗೆ ವಿಸ್ತರಿಸಲು ರಾಜ್ಯದ ಶಿಫಾರಸು

By Staff
|
Google Oneindia Kannada News

ಬೆಂಗಳೂರು : ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಗೆ 20 ವರ್ಷಗಳ ಬದಲಾಗಿ ಕೇವಲ ಐದು ವರ್ಷದ ಅವಧಿಗೆ ಗಣಿಗಾರಿಕೆ ಗುತ್ತಿಗೆ ವಿಸ್ತರಿಸುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರವು ಪರಿಷ್ಕೃತ ಶಿಫಾರಸು ಸಲ್ಲಿಸಿದೆ. ಈ ಸಂಬಂಧ ಸರ್ವೋಚ್ಚ ನ್ಯಾಯಾಲಯಕ್ಕೂ ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಈ ವಿಷಯವನ್ನು ಅರಣ್ಯ ಮತ್ತು ಪರಿಸರ ಖಾತೆ ಸಚಿವ ರಂಗನಾಥ್‌ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯ ಗಣಿಗಾರಿಕೆಯಿಂದ ಪಶ್ಚಿಮಘಟ್ಟಕ್ಕೆ ಹಾನಿಯಾಗುತ್ತಿರುವ ವಿಷಯವನ್ನು ಪ್ರಸ್ತಾಪಿಸಿದ ಡಿ.ಎಚ್‌. ಶಂಕರಮೂರ್ತಿ ಅವರ ಗಮನಸೆಳೆಯುವ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ಸಚಿವರು, ಕೆಐಓಸಿಎಲ್‌ ಸಂಸ್ಥೆಯು ಕೇಂದ್ರ ಸರಕಾರದ ಒಡೆತನಕ್ಕೆ ಸೇರಿದ್ದು, ಇದಕ್ಕೆ ನೀಡಲಾಗಿದ್ದ ಗಣಿಗಾರಿಕೆ ಗುತ್ತಿಗೆ ಅವಧಿ 1999ರ ಜುಲೈ 24ಕ್ಕೇ ಕೊನೆಗೊಂಡಿತು. ಕಂಪನಿಯು ಮತ್ತೆ 30 ವರ್ಷಗಳಿಗೆ ಅವಧಿ ವಿಸ್ತರಿಸುವಂತೆ ಕೋರಿತ್ತು. ಆದರೆ, ರಾಜ್ಯ ಸರಕಾರವು ಹಲವು ಷರತ್ತಿನ ಮೇಲೆ 20 ವರ್ಷಗಳ ಗಣಿಗಾರಿಗೆ ಗುತ್ತಿಗೆ ಅವಧಿ ವಿಸ್ತರಣೆಗೆ ಕೇಂದ್ರಕ್ಕೆ ಈ ಹಿಂದೆ ಶಿಫಾರಸು ಮಾಡಿತ್ತು.

ನಾಗಪುರ ನ್ಯಾಷನಲ್‌ ಎನ್ವಿರೋನ್‌ಮೆಂಟ್‌ ರಿಸರ್ಚ್‌ ಇನ್ಸ್‌ಸ್ಟಿಟ್ಯೂಟ್‌, ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ನಡೆಸಿದ ಅಧ್ಯಯನ ವರದಿ ಕೂಡ ಗಣಿಗಾರಿಕೆಯಿಂದ ಕೃಷಿಗೆ ಸಂಚಕಾರವಾಗಿದೆ ಎಂದು ಹೇಳಿರಲಿಲ್ಲ. ಈ ಮಧ್ಯೆ ಗಣಿಗಾರಿಕೆ ಅವಧಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಯಿತು. 99ರ ನಂತರ ಕೇಂದ್ರ ಸರಕಾರವು ಕುದುರೆಮುಖ ಸಂಸ್ಥೆಗೆ ತಾತ್ಕಾಲಿಕ ಪರವಾನಗಿ ನೀಡುತ್ತಾ ಬಂದಿತು.

ಇತ್ತ ರಾಜ್ಯದಲ್ಲಿ ಕುದುರೆಮುಖ ಸಂಸ್ಥೆಯ ಗಣಿಗಾರಿಕೆಗೆ ವಿಸ್ತರಣೆಗೆ ಸಾರ್ವಜನಿಕರ ಹಾಗೂ ಪರಿಸರವಾದಿಗಳ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಈ ಹಿಂದೆ ಮಾಡಿದ್ದ 20 ವರ್ಷಗಳ ಅವಧಿ ವಿಸ್ತರಣೆಯ ಶಿಫಾರಸ್ಸನ್ನು ಪುನರ್‌ ಪರಾಮರ್ಶಿಸಿ, ಕೇವಲ 5 ವರ್ಷಕ್ಕೆ ಮಾತ್ರ ಗುತ್ತಿಗೆ ಅವಧಿ ವಿಸ್ತರಿಸುವಂತೆ ಮತ್ತೆ ಶಿಫಾರಸು ಮಾಡಿದೆ. ಸರ್ವೋಚ್ಚ ನ್ಯಾಯಾಲಯಕ್ಕೂ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ರಂಗನಾಥ್‌ ವಿವರಿಸಿದರು.

(ಪಿಟಿಐ /ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X