ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಕ್ಷಯಪಾತ್ರೆ’ : ಇಸ್ಕಾನ್‌ ಅನ್ನದಾನಕ್ಕೆ ಅಭಿಷೇಕ್‌ ಬಚ್ಚನ್‌ ಮೆಚ್ಚುಗೆ

By Staff
|
Google Oneindia Kannada News

ಬೆಂಗಳೂರು : ‘ಅಕ್ಷಯಪಾತ್ರೆ’ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು 2005ರ ಹೊತ್ತಿಗೆ ‘ಹಸಿವು ಮುಕ್ತ ಜಿಲ್ಲೆ’ಯನ್ನಾಗಿ ಮಾಡುವ ಗುರಿ ಹೊಂದಿರುವ ನಗರದ ಇಸ್ಕಾನ್‌ ದೇವಾಲಯದ ಸಾಧನೆ - ಉದ್ದೇಶ ಅನುಕರಣೀಯ ಎಂದು ಖ್ಯಾತ ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಹೇಳಿದ್ದಾರೆ.

ಇಸ್ಕಾನ್‌ ದೇವಾಲಯದ ಆವರಣದಲ್ಲಿ ಸೋಮವಾರ ನಡೆದ ‘ಅಕ್ಷಯಪಾತ್ರೆ’ ಯೋಜನೆಯ ಆರನೆ ವಾಹನದ ಉದ್ಘಾ

ನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಎಲ್ಲ ದಾನಗಳಲ್ಲೂ ಮಿಗಿಲಾದ್ದು ಅನ್ನದಾನ. ಆ ದಾನವನ್ನು ಇಸ್ಕಾನ್‌ ಮಾಡುತ್ತಿದೆ. ಓದುವ ಆಸಕ್ತಿ ಇದ್ದರೂ ಹಸಿವಿನಿಂದ ಬಳಲುವ ವಿದ್ಯಾರ್ಥಿಗಳ ನೆರವಿಗೆ ನಿಲ್ಲುವ ಮೂಲಕ ಸಂಸ್ಥೆ ಪವಿತ್ರ ಕಾರ್ಯ ಮಾಡುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ಹಿಂದಿ ಚಿತ್ರನಟ ಅನುಪಮ್‌ ಖೇರ್‌, ನಟಿ ತಾರಾ ಶರ್ಮಾ ಇಸ್ಕಾನ್‌ನ ಈ ಯೋಜನೆಯು ಓದುವ ಮಕ್ಕಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಮವಾರ ಉದ್ಘಾಟನೆಯಾದ ವಾಹನವು ನಗರದ ನಾಲ್ಕು ಸಾವಿರ ಬಡ ಶಾಲಾ ಮಕ್ಕಳಿಗೆ ಉಪಹಾರ ಒದಗಿಸಲಿದೆ. ಈ ಹೊತ್ತು ‘ಅಕ್ಷಯಪಾತ್ರೆ’ ಯೋಜನೆಯಡಿ 21 ಸಾವಿರ ಬಡ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ನೀಡಲಾಗುತ್ತಿದ್ದು, ಈ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಕನಿಷ್ಠ 30 ಸಾವಿರ ವಿದ್ಯಾರ್ಥಿಗಳಿಗೆ ಉಪಹಾರ ಒದಗಿಸುವ ಗುರಿಯನ್ನು ದೇಗುಲದ ಆಡಳಿತ ಮಂಡಳಿ ಹೊಂದಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X