• search

ಪ್ರತ್ಯೇಕ ಹೈ.ಕರ್ನಾಟಕ ರಾಜ್ಯ ಹೋರಾಟಕ್ಕೆ ಕೇಶವರಾವ್‌, ಗದ್ದರ್‌ ಬೆಂಬಲ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಗುಲ್ಬರ್ಗಾ : ಗುಲ್ಬರ್ಗಾ, ಬೀದರ್‌, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಗಳನ್ನೊಳಗೊಂಡ ಪ್ರತ್ಯೇಕ ಹೈದರಾಬಾದ್‌ ಕರ್ನಾಟಕ ರಾಜ್ಯ ರಚನೆಗಾಗಿ ಆರಂಭವಾಗಿರುವ ಹೋರಾಟಕ್ಕೆ ಕ್ರಾಂತಿಕಾರಿ ಕವಿ ಗದ್ದರ್‌ ಹಾಗೂ ತೆಲಂಗಾಣ ಚಳವಳಿಯ ನಾಯಕ ಪ್ರೊ. ಕೇಶವರಾವ್‌ ಜಾದವ್‌ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಗುರುವಾರ ಗುಲ್ಬರ್ಗಾದ ಹಿಂದಿ ಪುಚಾರ ಸಭಾದ ಆವರಣದಲ್ಲಿ ನಡೆದ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಭಾರಿ ಪ್ರತಿಭಟನಾ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ, ಪ್ರೊ. ಕೇಶವರಾವ್‌ ಜಾದವ್‌ ಹಿಂದುಳಿದ ಪ್ರದೇಶಗಳ ಬಗ್ಗೆ ಸರಕಾರ ತಳೆದಿರುವ ತಾರತಮ್ಯ ನೀತಿಯ ವಿರುದ್ಧ ಸಿಡಿದೆದ್ದರು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಅನಿವಾರ್ಯ ಎಂದೂ ಘೋಷಿಸಿದರು.

    ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್‌ ಅವರು ಅನುಸರಿಸಿಕೊಂಡು ಬಂದ ಆರ್ಥಿಕ ನೀತಿಯ ಫಲವಾಗಿ ಇಂದು ದೇಶದ ಹಲವು ಭಾಗಗಳು ಹಿಂದುಳಿದಿವೆ ಎಂದು ಆರೋಪಿಸಿದರು. ಆಂಧ್ರಪ್ರದೇಶದ ತೆಲಂಗಾಣ ಹಾಗೂ ಮಹಾರಾಷ್ಟ್ರದ ವಿದರ್ಭ ಪ್ರದೇಶಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ . ಆದರೆ, ಅಲ್ಲಿ ನಡೆದ ಉಗ್ರ ಹೋರಾಟದ ಫಲವಾಗಿ ಆ ಪ್ರದೇಶ ವಿಶೇಷ ಸವಲತ್ತಿನಡಿ ಪ್ರಗತಿಯನ್ನು ಕಂಡಿತು ಎಂದು ಅವರು ಹೇಳಿದರು.

    ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಸಂಪನ್ಮೂಲ ಇದೆ. ಆದರೆ, ಇದರ ಸದ್ಬಳಕೆ ಆಗುತ್ತಿಲ್ಲ. ಯೋಜನೆಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣ. ಸರಕಾರ ಹೈದರಾಬಾದ್‌ ಕರ್ನಾಟಕ ಪ್ರದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಪ್ರತ್ಯೇಕ ರಾಜ್ಯದ ಹೋರಾಟದ ಹೊರತಾಗಿ ಇಲ್ಲಿ ಮತ್ತಾವುದೇ ಹೋರಾಟಕ್ಕೂ ಬೆಲೆ ಇಲ್ಲ ಎಂದು ಅವರು ಪ್ರತಿಪಾದಿಸಿದರು.

    ಗದ್ದರ್‌ ಬೆಂಬಲ : ರ್ಯಾಲಿ ಹಾಗೂ ನಂತರ ನಡೆದ ಸಭೆಯಲ್ಲಿ ಪಾಲ್ಗೊಳ್ಳಬೇಕಿದ್ದ ಕ್ರಾಂತಿಕಾರಿ ಕವಿ ಗದ್ದರ್‌ ಅವರು, ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರಾದರೂ, ಪ್ರತ್ಯೇಕ ರಾಜ್ಯದ ಕೂಗು ಅತ್ಯವಶ್ಯಕ. ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂಬ ಸಂದೇಶವನ್ನು ಜನನಾಟ್ಯ ಕಲಾ ಮಂಡಳಿ ಸದಸ್ಯರ ಮೂಲಕ ಕಳುಹಿಸಿಕೊಟ್ಟಿದ್ದರು.

    ಕ್ರಾಂತಿಗೀತೆಗಳ ಮೂಲಕ ಹೈದರಾಬಾದ್‌ ಕರ್ನಾಟಕ ಪ್ರದೇಶದ ಜನರಲ್ಲಿ ಪ್ರತ್ಯೇಕ ರಾಜ್ಯ ಸ್ಥಾಪನೆಯ ಕಿಚ್ಚು ಎಬ್ಬಿಸಿ, ಅವರೆಲ್ಲರನ್ನೂ ಹೋರಾಟಕ್ಕೆ ಸೆಳೆಯುವುದಾಗಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ವೈಜನಾಥ ಪಾಟೀಲ್‌, ಹಿಂದುಳಿದ ಪ್ರದೇಶವೊಂದರ ಸಮಗ್ರ ಅಭಿವೃದ್ಧಿಗಾಗಿಯೇ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದನ್ನು ವಿರೋಧಿಸುವವರು ಹುಚ್ಚರು ಎಂದರು.

    ಪ್ರತ್ಯೇಕ ರಾಜ್ಯ ಸ್ಥಾಪನೆಯ ಅಗತ್ಯ ಎಷ್ಟು. ಅದರಿಂದ ಈ ಪ್ರದೇಶಕ್ಕಾಗುವ ಅನುಕೂಲಗಳೇನು ಎಂಬುದನ್ನು ಈ ಪ್ರಾಂತದ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಅದಕ್ಕಾಗಿ ಜಿಲ್ಲಾವಾರು ಸಂಘಟನೆಗಳನ್ನು ಮಾಡಲಾಗಿದೆ ಎಂದೂ ಪಾಟೀಲ್‌ ಹೇಳಿದರು.

    ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಣಮಂತರಾವ್‌ ದೇಸಾಯಿ, ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜೀ, ವಿಶ್ವನಾಥ ರೆಡ್ಡಿ ಮುದ್ನಾಳ್‌, ರಾಜು ಕುಳಗೇರಿ ಮತ್ತು ಜಿಲ್ಲಾ ಪಂಚಾಯ್ತಿಯ ವಿರೋಧ ಪಕ್ಷದ ನಾಯಕ ಶಂಕರಣ್ಣ ವಣಕ್ಯಾಳ್‌ ಮತ್ತಿತರರು ಪಾಲ್ಗೊಂಡಿದ್ದರು. ಜನನಾಟ್ಯ ಮಂಡಳಿಯವರು ಕ್ರಾಂತಿಗೀತೆ ಹಾಡಿದರು.

    (ಇನ್‌ಫೋ ವಾರ್ತೆ)

    ಪ್ರತ್ಯೇಕ ರಾಜ್ಯದ ವಾದ ಸರಿಯೇ ?
    ನಾವು ನಮ್ಮ ಹಿನ್ನೆಲೆ
    ಮತ್ತೆ ಪ್ರತ್ಯೇಕ ರಾಜ್ಯ ಕೂಗು : ಜ.24ರಂದು ಪ್ರತಿಭಟನೆ ರ್ಯಾಲಿ

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more