ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಡಿಪಟ್ಟಿ :ನೂರಾರು ಕಾರುಗಳ ಕಣ್ಗಾವಲಲ್ಲಿ ಜಯಲಲಿತಾ ನಾಮಪತ್ರ

By Staff
|
Google Oneindia Kannada News

ಆಂಡಿಪಟ್ಟಿ : ಅಣ್ಣಾಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ.ಜಯಲಲಿತಾ ಅವರು ತೇನಿ ಜಿಲ್ಲೆಯ ಆಂಡಿಪಟ್ಟಿ ಕ್ಷೇತ್ರದ ವಿಧಾನಸಭಾ ಮರು ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಮತ್ತೆ ಕಾನೂನುಬದ್ಧವಾಗಿ ತಮಿಳುನಾಡು ಮುಖ್ಯಮಂತ್ರಿಯಾಗುವತ್ತ ಜಯಲಲಿತಾ ದಾಪುಗಾಲಿಟ್ಟಂತಾಗಿದೆ.

ಬಿಗಿ ಭದ್ರತೆಯ ನಡುವೆ ನಾಮಪತ್ರ ಸಲ್ಲಿಸಲು ಆಗಮಿಸಿದ ಅಣ್ಣಾಡಿಎಂಕೆ ಸರ್ವೋಚ್ಛ ನಾಯಕಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪುಲಮದನ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಲು ಮಧುರೈನಿಂದ ಆಂಡಿಪಟ್ಟಿಗೆ ಆಗಮಿಸಿದ ಜಯಲಲಿತಾ ಅವರ ವಾಹನವನ್ನು ನೂರಾರು ಕಾರುಗಳು ಹಿಂಬಾಲಿಸಿದವು. ್ನ ಅಣ್ಣಾ ಡಿಎಂಕೆ ಕಾರ್ಯಕರ್ತರು, ಜಯಲಲಿತಾ ಭಾವಚಿತ್ರದ ಪೋಸ್ಟರ್‌, ಪಕ್ಷದ ಬಾವುಟಗಳಿಂದ ರಸ್ತೆಯ ಇಕ್ಕೆಲಗಳನ್ನೂ ಅಲಂಕರಿಸಿದ್ದರು. ಜಯಲಲಿತಾ ಅವರನ್ನು ಸ್ವಾಗತಿಸುವ ಮೆಗಾ ಪೋಸ್ಟರ್‌ಗಳೂ ಕೆಲವೆಡೆ ಕಂಡುಬಂದವು. ಇದೇ ಸಂದಭದಲ್ಲಿ ಕರಕಟ್ಟಂ ಜಾನಪದ ನೃತ್ಯ ಪ್ರದರ್ಶನವೂ ನಡೆಯಿತು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X