• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

12 ವರ್ಷ ಆಯುಷ್ಯದ ಉಪಗ್ರಹ ಇನ್ಸಾಟ್‌-3ಸಿ ಯಶಸ್ವಿಯಾಗಿ ಕಕ್ಷೆಗೆ

By Staff
|

INSAT-3c Satellite successfully launchedಬೆಂಗಳೂರು : ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಜನವರಿ 24, 2002 ಮರೆಯಬಾರದ ದಿನ. 3ನೇ ಪೀಳಿಗೆಯ ಸಂವಹನಾ ಉಪಗ್ರಹ ಇನ್‌ಸ್ಯಾಟ್‌- 3ಸಿಯನ್ನು ಯೂರೋಪಿನ ಏರಿಯೇನ್‌-4 ರಾಕೆಟ್‌ ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿದೆ. ಫ್ರೆಂಚ್‌ ಗಯಾನಾದ ಕೌರೌ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹವನ್ನು ಉಡಾಯಿಸಲಾಯಿತು.

2,750 ಕಿಲೋ ತೂಕದ ಇನ್‌ಸ್ಯಾಟ್‌- 3ಸಿ ಉಪಗ್ರಹ ಉಡಾವಣೆ 54 ನಿಮಿಷ ತಡವಾಗಿ ಆದರೂ, ರಾಕೆಟ್‌ ಹಾರಿದ 21 ನಿಮಿಷಗಳಲ್ಲೇ ಅಂತರಿಕ್ಷ ಸೇರಿತು. ಜಿಯೋ ಸಿಂಕ್ರನಸ್‌ ವರ್ಗಾವಣೆ ಕಕ್ಷೆಗೆ ಉಪಗ್ರಹ ತಲುಪಿದ ಅರ್ಧ ತಾಸಿನಲ್ಲೇ ಕರ್ನಾಟಕದ ಹಾಸನದಲ್ಲಿರುವ ಮಾಸ್ಟರ್‌ ಕಂಟ್ರೋಲ್‌ ಫೆಸಿಲಿಟಿ (ಎಂಸಿಎಫ್‌) ಅದನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಉಪಗ್ರಹದಿಂದ ಟೆಲಿಮೆಟ್ರಿ ಸೂಚನೆ ಕೂಡ ಸಿಕ್ಕಿತು.

ದೂರಸಂಪರ್ಕ, ಪ್ರಸಾರ, ವ್ಯಾಪಾರ ಸಂವಹನ, ಮೊಬೈಲ್‌ ಸೇವೆಗಳು ಮೊದಲಾದವುಗಳಿಗೆ ಉಪಯುಕ್ತವಾಗುವ ಇನ್‌ಸ್ಯಾಟ್‌- 3ಸಿ ಉಪಗ್ರಹ ರಚನೆಗೆ 250 ಕೋಟಿ ರುಪಾಯಿ ವೆಚ್ಚ ತಗುಲಿದೆ. ಇದರ ಸೇವಾ ಅವಧಿ 12 ವರ್ಷಗಳು. ಇಸ್ರೋ ವಿಜ್ಞಾನಿಗಳು ಇದರ ಕರ್ತೃಗಳು. ಉಪಗ್ರಹ ಹೊತ್ತು ರಾಕೆಟ್‌ ಹಾರಲು ತಡವಾದಾಗ ಇಸ್ರೋ ಅಧ್ಯಕ್ಷ ಕೆ.ಕಸ್ತೂರಿ ರಂಗನ್‌ ನೇತೃತ್ವದ ತಂಡಕ್ಕೆ ಆತಂಕವಾಯಿತು. ಆದರೆ ನಂತರದ ಕ್ಷಣಗಳು ಉನ್ಮಾದ ಕೊಟ್ಟವು.

ಉಪಗ್ರಹ ಉಡಾವಣೆಯ ನಂತರ ಪ್ರತಿಕ್ರಿಯಿಸಿದ ಏರಿಯೇನ್‌ ಸ್ಪೇಸ್‌ನ ಜೀನ್‌ ಮಾರೀ ಲ್ಯೂಟನ್‌, ಇನ್‌ಸ್ಯಾಟ್‌- 3ಸಿ ಯಸಸ್ವಿ ಉಡಾವಣೆ ಭಾರತ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ. ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದರು.

ಪ್ರಥಮ ವರದಿಗಳ ಪ್ರಕಾರ ಉಪಗ್ರಹದ ಕೆಲಸ ನಿರೀಕ್ಷೆಯಂತೆಯೇ ಇದ್ದು, ಯಾವುದೇ ತೊಂದರೆ ಇಲ್ಲ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more