ಸರಕಾರದಿಂದ ಹೆಬ್ಬಾಳದಲ್ಲಿ ಹೂ ಹರಾಜು ಕೇಂದ್ರ ಸ್ಥಾಪನೆಯ ಭರವಸೆ
ಬೆಂಗಳೂರು: ನಗರದ ಹೆಬ್ಬಾಳದಲ್ಲಿ ಸದ್ಯದಲ್ಲಿಯೇ ಹೂ ಹರಾಜು ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ಪುಷ್ಪೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೂ ಹರಾಜು ಕೇಂದ್ರವನ್ನು ತೆರೆಯಲಾಗುವುದು ಎಂದು ಕೃಷಿ ಸಚಿವ ಟಿ.ಬಿ. ಜಯಚಂದ್ರ ಮಂಗಳವಾರ ತಿಳಿಸಿದ್ದಾರೆ. ಅವರು ರಾಜ್ಯ ಗುಲಾಬಿ ಸಂಘ ಹಾಗೂ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ 20ನೇ ರಾಷ್ಟ್ರೀಯ ಗುಲಾಬಿ ಸಮ್ಮೇಳನ ಹಾಗೂ ಪ್ರಥಮ ಗುಲಾಬಿ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೆಬ್ಬಾಳದಲ್ಲಿ ಈಗಾಗಲೇ ಇರುವ ಚಿಕ್ಕ ಹೂ ಹರಾಜು ಕೇಂದ್ರವನ್ನು 10 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗುವುದು. ಇದಕ್ಕೆ ರಾಜ್ಯ ಸರಕಾರ 5 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ರಾಜ್ಯದ ಹೂವುಗಳಿಗೆ ಹಾಲೆಂಡ್ ದೇಶದಲ್ಲಿ ಭಾರೀ ಬೇಡಿಕೆ ಇದೆ. ಆದ್ದರಿಂದ ಪುಷ್ಪ ರವಾನೆಗಾಗಿ ಬೆಂಗಳೂರು - ಹಾಲೆಂಡ್ ನಡುವೆ ನೇರ ವಿಮಾನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದೂ ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ, ಭಾರತೀಯ ಗುಲಾಬಿ ಒಕ್ಕೂಟದ ಅಧ್ಯಕ್ಷ ನವಾಬ್ ಷಾ ಅಲಂ ಖಾನ್, ಡಾ. ಮೋಹನ್ ಅತ್ತಾವರ್ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...