For Daily Alerts
ವಿರಾಜಪೇಟೆಯ ಭದ್ರಕಾಳೀ ದೇಗುಲ ಭಗ್ನ, ಕೊಡಗು ಮತ್ತೆ ಉದ್ವಿಗ್ನ
ಮಡಿಕೇರಿ: ಇಲ್ಲಿನ ವಿರಾಜಪೇಟೆಯ ಬಳಿಯ ಭೇಟೋಳಿ ಗ್ರಾಮದ ಭದ್ರಕಾಳಿ ದೇವಾಲಯಕ್ಕೆ ಕಿಡಿಗೇಡಿಗಳು ಹಾನಿಯೆಸಗಿದ್ದು ಜಿಲ್ಲೆಯಲ್ಲಿ ಮತ್ತೆ ಬಿಗುವಿನ ವಾತಾವರಣ ಉಂಟಾಗಿದೆ.
ದುಷ್ಕರ್ಮಿಗಳು ಗರ್ಭ ಗುಡಿಯ ಬಾಗಿಲು ಮುರಿದು ಹಾಕಿದ್ದು, ಪಾಕ ಶಾಲೆಯ ಬಾಗಿಲಿಗೆ ಬೆಂಕಿ ಹಚ್ಚಿದ್ದಾರೆ. ಎಂದಿನಂತೆ ಸೋಮವಾರ ಬೆಳಗ್ಗೆ ದೇವಾಲಯದ ಪೂಜೆಗಾಗಿ ಅರ್ಚಕರು ತೆರಳಿದಾಗ ಈ ವಿಷಯ ಪತ್ತೆಯಾಗಿದ್ದು, ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಶ್ವಾನದಳ ‘ನೀಮಾ’ ಸಮೀಪದ ಆಟೋರಿಕ್ಷಾ ಚಾಲಕರ ಮನೆಯ ಬಳಿ ಬಂದು ನಿಂತಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಶಾಲೆಯ ಕಟ್ಟಡದ ಹೆಂಚುಗಳನ್ನು ಒಡೆದು ಹಾಕಲಾಗಿದೆ. ಮಂಟಪದ ಕಂಬಗಳಲ್ಲಿ ‘ಒಂದು ಕೋಮಿನವರಿಗೆ ಧಿಕ್ಕಾರ’ ಎಂದು ಬರೆಯಲಾಗಿದ್ದು ಕೊಡಗಿನಲ್ಲಿ ಮತ್ತೆ ಶಾಂತಿ ಕದಡುವ ಸೂಚನೆ ಕಂಡು ಬಂದಿದೆ. ವಿರಾಜಪೇಟೆ ಡಿವೈಎಸ್ಪಿ ಜಿ.ಜಿ. ಹೆಗಡೆ, ವೃತ್ತ ನಿರೀಕ್ಷಕ ಮಿತ್ರಾ ಹೆರಾಜೆ ಸ್ಥಳಕ್ಕೆ ಧಾವಿಸಿ ಬಿಗಿಬಂದೋಬಸ್ತ್ ಏರ್ಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...